ಮಂಡ್ಯ : ಉಚಿತವಾಗಿ ಬಜೆಟ್ ಸಿಕ್ಕರೆ ಯಾರು ಬೇಕಿದ್ದರೂ ಉಚಿತವಾಗಿ ನೀಡುತ್ತಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ನ ಗ್ಯಾರಂಟಿ ಕಾರ್ಡ್ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ವ್ಯಂಗ್ಯವಾಡಿದ್ದಾರೆ. ಮಂಡ್ಯದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ನ ಗ್ಯಾರಂಟಿ ಕಾರ್ಡ್ನ್ನು ಅನುಷ್ಠಾನಕ್ಕೆ ತರೋದು ಅಸಾಧ್ಯ ಎಂದಿದ್ದಾರೆ.
ಅಭಿವೃದ್ಧಿಯೇ ನನ್ನ ಮಂತ್ರ ಅಂತ ನಂಬಿ ಮಾಡ್ತಿರುವವರು ನರೇಂದ್ರ ಮೋದಿ.ದಿನ ಪೂರ್ತಿ ಕೆಲಸ ಮಾಡುವಂತಹ ದೊಡ್ಡ ವ್ಯಕ್ತಿ.ಮೋದಿಗೆ ಇಡೀ ವಿಶ್ವದಲ್ಲೇ ನಂಬರ್ ಒನ್ ರೇಟಿಂಗ್ ನೀಡಿದೆ .ನಮ್ಮ ಅಕ್ಕಪಕ್ಕದ ದೇಶ ಪಾಕಿಸ್ತಾನ, ಶ್ರೀಲಂಕಾ ಸಂಕಷ್ಟದಲ್ಲಿ ಸಿಲುಕಿದೆ.ಅವರೆಲ್ಲ ಸರಿಯಾಗಿ ಕೆಲಸ ಮಾಡದೇ ಉಚಿತ ಸೇವೆ ನೀಡಿ ದೇಶವನ್ನು ದಿವಾಳಿ ಮಾಡಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ನವರು ಮಹಿಳೆಯರಿಗೆ 2 ಸಾವಿರ ರೂ, ನಿರೋದ್ಯೋಗಿಗಳಿಗೆ 3 ಸಾವಿರ, ಕರೆಂಟ್ ಉಚಿತ ಹಾಗೂ ಬಸ್ ಸೇವೆ ಉಚಿತ ಅಂತಾರೆ. ಆದರೆ ಇದಕ್ಕೆಲ್ಲ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿಲ್ಲ. ಇವೆಲ್ಲ ಕೇವಲ ಸುಳ್ಳು ಭರವಸೆ ಎಂದಿದ್ದಾರೆ ..