• Home
  • About Us
  • ಕರ್ನಾಟಕ
Monday, November 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

“ಕೆಟ್ಟವರ ಸಹವಾಸದಲ್ಲಿ ಇರುವುದಕ್ಕಿಂತ ಏಕಾಂಗಿಯಾಗಿ ಇರುವುದು ಒಳ್ಳೆಯದು “

ಪ್ರತಿಧ್ವನಿ by ಪ್ರತಿಧ್ವನಿ
June 17, 2025
in Top Story, ಜೀವನದ ಶೈಲಿ
0
“ಕೆಟ್ಟವರ ಸಹವಾಸದಲ್ಲಿ ಇರುವುದಕ್ಕಿಂತ ಏಕಾಂಗಿಯಾಗಿ ಇರುವುದು ಒಳ್ಳೆಯದು “
Share on WhatsAppShare on FacebookShare on Telegram

ಅರ್ಥವಾಯಿತೆ ? ಅರ್ಥವಾಗದವರಿಗೆ ಮತ್ತು ಅದರ ಇನ್ನಷ್ಟು ಆಳವಾದ ಹಾಗು ನಮ್ಮ ಸಮಾಜದ ವಾಸ್ತವಕ್ಕೆ ಸರಿಹೊಂದಬಹುದಾದ ಸರಳ ಅರ್ಥ ನೀಡುವ ಪ್ರಯತ್ನ.

ADVERTISEMENT

ಇದು ಎಲ್ಲಾ ವಯಸ್ಸಿನ, ಎಲ್ಲಾ ಪ್ರದೇಶದ, ಎಲ್ಲಾ ವರ್ಗಗಳಿಗೂ ಅನ್ವಯಿಸುವ ಮಾತು. ಆದರೂ ಹೆಚ್ಚಾಗಿ ಯುವ ವಯಸ್ಸಿನವರಿಗೆ ತುಂಬಾ ಎಚ್ಚರಿಕೆಯ ಅರ್ಥ ಕೊಡುತ್ತದೆ.

ಮೊದಲಿಗೆ ಕೆಟ್ಟವರು ಎಂದರೆ ಯಾರು ? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಜೂಜು, ಕುಡಿತ, ಅನೈತಿಕವಾಗಿ ಹೆಣ್ಣಿನ ಸಹವಾಸ, ಕಳ್ಳತನ ಮುಂತಾದ ದುರಭ್ಯಾಸಗಳನ್ನು ಅನಿಯಂತ್ರಿತವಾಗಿ ಹೊಂದಿರುವವರನ್ನು ಕೆಟ್ಟವರು ಎನ್ನಲಾಗುತ್ತದೆ. ಜೊತೆಗೆ ಆಧುನಿಕ ಸಮಾಜದಲ್ಲಿ ರೌಡಿಸಂ, ಕಾನೂನು ಬಾಹಿರ ಚಟುವಟಿಕೆಗಳು, ಅಕ್ರಮ ವ್ಯವಹಾರಗಳು, ಸಮಾಜದ ಸ್ಥಾಪಿತ ಹಿತಾಸಕ್ತಿಗೆ ವಿರುದ್ಧವಾಗಿ ಹಿಂಸೆಯಲ್ಲಿ ತೊಡಗುವುದು ಮುಂತಾದ ಕ್ರಿಮಿನಲ್ ಚಟುವಟಿಕೆಗಳನ್ನು ಮಾಡುವವರು ಸಹ ಕೆಟ್ಟ ಜನರು ಎನಿಸಿಕೊಳ್ಳುತ್ತಾರೆ.

M Lakshman: ಬೆಂಗಳೂರು ಕಾಲ್ತುಳಿತ ದುರಂತ ಹಿಂದೆ ಬಿಜೆಪಿ ಷಡ್ಯಂತ್ರ ಇದೆ ಲಕ್ಷ್ಮಣ್ ಕಿಡಿ #pratidhvani

( ಇದನ್ನು ಹೊರತುಪಡಿಸಿ ಆಂತರ್ಯದಲ್ಲಿ ಕೋಪ, ಅಸೂಯೆ, ದುಡುಕುತನ ಮುಂತಾದ ಕೆಲವು ಕೆಟ್ಟ ಚಾಳಿಗಳು ಇರುತ್ತವೆ. ಇದು ನಮ್ಮೆಲ್ಲರಲ್ಲೂ ಸ್ವಲ್ಪ ಮಟ್ಟಿಗೆ ಇರುತ್ತದೆ. ಅದನ್ನು ಕೆಟ್ಟತನ ಎನ್ನಲಾಗದು ಮತ್ತು ಇದು ಅಪಾಯಕಾರಿಯೂ ಅಲ್ಲ. )

ಮೇಲೆ ಹೇಳಿದ ಕೆಟ್ಟ ವ್ಯಕ್ತಿಗಳ ಸ್ನೇಹ ಅಥವಾ ಸಹವಾಸ ನಾವು ಮಾಡಿದರೆ ಈಗಿನ ಪರಿಸ್ಥಿತಿಯಲ್ಲಿ ನಾವು ಅವರ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆಗಳೇ ಹೆಚ್ಚು. ಅವರನ್ನು ಒಳ್ಳೆಯ ದಾರಿಗೆ ತರುವ ಅವಕಾಶ ತುಂಬಾ ಕಡಿಮೆ. ಕೆಟ್ಟದ್ದು ಯಾವಾಗಲೂ ಒಳ್ಳೆಯದಕ್ಕಿಂದ ಹೆಚ್ಚು ಆಕರ್ಷಣೆ ಹೊಂದಿರುತ್ತದೆ.

ಸಾಮಾನ್ಯವಾಗಿ ದುರಭ್ಯಾಸ ಮತ್ತು ಕ್ರಿಮಿನಲ್ ಮನೋಭಾವದ ವ್ಯಕ್ತಿಗಳು ಹೆಚ್ಚು ಚಾಕಚಕ್ಯತೆ ಹೊಂದಿರುತ್ತಾರೆ. ಧೈರ್ಯವೂ ತುಸು ಜೋರು. ಇಂತಹವರ ಸಹವಾಸ ಪ್ರಾರಂಭದಲ್ಲಿ ಹೆಚ್ಚು ಆಕರ್ಷಕ ಮತ್ತು ಸುಖಮಯವಾಗಿರುತ್ತದೆ‌. ಅದರಲ್ಲೂ ಹೆಚ್ಚು ಒತ್ತಡ ಮತ್ತು ಕಷ್ಟದಲ್ಲಿರುವವರಿಗೆ ಕೆಟ್ಟವರು ಆಪದ್ಬಾಂಧವರಂತೆ ಕಾಣುತ್ತಾರೆ. ಆ ಕ್ಷಣದ ನೋವು ಮರೆಯಲು ಇವರು ತುಂಬಾ ಆತ್ಮೀಯ ಸಹಾಯ ಮಾಡುತ್ತಿರುವಂತೆ ಭಾಸವಾಗುತ್ತದೆ. ಪುಕ್ಕಲರಿಗೆ ಇವರು ಹೀರೋಗಳಂತೆ ಕಾಣುತ್ತಾರೆ.

ಆದರೆ ನಿಧಾನವಾಗಿ ಕೆಟ್ಟದ್ದರ ಪರಿಣಾಮ ನಮ್ಮ ಮೇಲಾಗತೊಡಗುತ್ತದೆ. ನಮ್ಮ ಅರಿವಿಗೆ ಬರುವಷ್ಟರಲ್ಲಿ ಅದು ಇಡೀ ಬದುಕಿನ ಹಳಿಯನ್ನೇ ತಪ್ಪಿಸಿ ನಿಯಂತ್ರಣ ಸಿಗದಷ್ಟು ಮುಂದೆ ಹೋಗುವಬಹುದು. ಕೆಲವೊಮ್ಮೆ ನಮ್ಮ ಹಿತೈಷಿಗಳು ಈ ಬಗ್ಗೆ ಎಚ್ಚರಿಕೆ ಕೊಟ್ಟರೂ ನಾವು ನಿರ್ಲಕ್ಷಿಸಿರುತ್ತೇವೆ.

Siddaramaiah : ಹುಟ್ಟುಹಬ್ಬದ ಶುಭಾಶಯಗಳು  ಶಿವಶಂಕರಪ್ಪನವರೆ.. ಎಂದ ಸಿಎಂ  #pratidhvani

ಏಕಾಂಗಿತನ ಉತ್ತಮ ನಿಜ. ಆದರೆ ಅದರ ಸಂಪೂರ್ಣ ಆರಿವಾಗದೆ ಒಂದು ವ್ಯಕ್ತಿತ್ವ ರೂಪಗೊಳ್ಳದೆ ಏಕಾಂಗಿತನವೂ ಅಪಾಯವಾಗಬಹುದು. ಮಕ್ಕಳು, ಯುವಕರಲ್ಲಿ ಅದು ಮಾನಸಿಕ ಖಿನ್ನತೆಯನ್ನು ಹೆಚ್ಚಿಸಬಹುದು. ಅತ್ಯುತ್ತಮ ಗುಣಮಟ್ಟದ ಏಕಾಂಗಿತನ ಮಾತ್ರ ತುಂಬಾ ಒಳ್ಳೆಯದು. ಅಂದರೆ ಓದು, ಬರಹ, ಯೋಗ, ಧ್ಯಾನ, ಕ್ರೀಡೆ, ಕಲೆ, ಸಂಗೀತ, ಸಿನಿಮಾ, ತೋಟಗಾರಿಕೆ, ಸಂಘ, ಸಮಾಜ ಸೇವೆ, ಪ್ರವಾಸ ಮುಂತಾದ ನಮ್ಮ ಅನುಕೂಲಕರ ಹವ್ಯಾಸಗಳನ್ನು ಬೆಳೆಸಿಕೊಂಡರೆ ಏಕಾಂಗಿತನ ಕೆಟ್ಟವರ ಸಹವಾಸಕ್ಕಿಂತ ಉತ್ತಮವಾಗಿರುತ್ತದೆ. ಈ ಹವ್ಯಾಸಗಳು ನಮ್ಮನ್ನು ಅತ್ಯಂತ ಕ್ರಿಯಾಶೀಲವಾಗಿ ಇಡುವುದಲ್ಲದೆ ಉತ್ತಮ ಸಾಧನೆಗು ದಾರಿ ಮಾಡಿಕೊಡುತ್ತದೆ.

ಇನ್ನೂ ಒಂದು ಹೆಜ್ಜೆ ಮುಂದೆ ಯೋಚಿಸಿದರೆ…..

ಕೆಟ್ಟವರ ಸಹವಾಸಕ್ಕಿಂತ, ಏಕಾಂಗಿತನಕ್ಕಿಂತ, ಒಳ್ಳೆಯವರ ಒಡನಾಟ ಅತ್ಯುತ್ತಮ ಎಂದು ಹೇಳಬಹುದು. ಒಳ್ಳೆಯವರು ಎಂಬುದನ್ನು ಹಲವಾರು ಆಯಾಮಗಳಲ್ಲಿ ನೋಡಬೇಕಾಗುತ್ತದೆ.

ಅದು ಅಷ್ಟು ಸುಲಭವಲ್ಲ. ಒಳ್ಳೆಯತನ ಮುಖವಾಡವಾಗಿರದೆ ಸಹಜವಾಗಿರಬೇಕು. ಹೆಚ್ಚು ವಿಶಾಲ ಮನೋಭಾವ ಹೊಂದಿರಬೇಕು. ಒಂದು ಆದರ್ಶ ಮತ್ತು ಮಾರ್ಗದರ್ಶಕ ವ್ಯಕ್ತಿತ್ವ ಹೊಂದಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಮನಸ್ಸಿನ ನಿಲುವಿಗೆ ಹತ್ತಿರವಾಗಿರಬೇಕು ಮತ್ತು ಹೊಂದಾಣಿಯಾಗಬೇಕು. ಒಳ್ಳೆಯವರ ನಡುವಿನ ಸಂವಹನ ಸರಳ ಮತ್ತು ಸುಲಲಿತವಾಗಿರಬೇಕು.

DK Shivakumar:  ಹೆಣದ ಮೇಲೆ ರಾಜಕೀಯ ಮಾಡೋದು ಬಿಜೆಪಿಯವರು ಡ್ಯೂಟಿ..#pratidhvani

ಆಗ ಖಂಡಿತ ಬದುಕಿನ ಕ್ವಾಲಿಟಿ ಹೆಚ್ಚುತ್ತದೆ. ನಮ್ಮ ನೆಮ್ಮದಿಯ ಮಟ್ಟ ಉತ್ತಮ ಸ್ಥಿತಿ ಕಾಯ್ದುಕೊಂಡಿರುತ್ತದೆ.

ಈ ಸಂಕೀರ್ಣ ಸಮಾಜದಲ್ಲಿ ಆಯ್ಕೆಗಳು ಬಹಳಷ್ಟಿವೆ. ಜೊತೆಗೆ ಅನೇಕ ಅನಿವಾರ್ಯತೆಗಳೂ ಇವೆ. ಒತ್ತಡಗಳು ಇವೆ. ಆದರೂ ಎಲ್ಲರ ಜೊತೆ ಪರಿಚಯವಿರಲಿ, ಆದರೆ ಆತ್ಮೀಯ ಒಡನಾಟ ಒಳ್ಳೆಯವರೊಂದಿಗೆ ಮಾತ್ರವಿರಲಿ. ಸಾಧ್ಯವಾಗದಿದ್ದರೆ ಏಕಾಂಗಿತನವೇ ಉತ್ತಮ. ಆದರೆ ಕೆಟ್ಟವರ ಸಹವಾಸ ಬೇಡ.

” ನಾವು ಬದುಕಿನಲ್ಲಿ ಅನೇಕರೊಂದಿಗೆ ಜೊತೆಯಾಗಿ ಹೆಜ್ಜೆಗಳನ್ನು ಹಾಕಬೇಕಾಗುತ್ತದೆ. ಆದರೆ ಯಾರೊಂದಿಗೆ ಎಷ್ಟು ದೂರ ನಡೆಯಬೇಕೆಂಬ ತೀರ್ಮಾನ ನಮ್ಮ ವಿವೇಚನೆಗೆ ಬಿಟ್ಟದ್ದು. ಅದು ನಮ್ಮ ಜೀವನ ಪ್ರಯಾಣದ ಗುಣಮಟ್ಟ ನಿರ್ಧರಿಸುತ್ತದೆ “.

ನವೀನ ಹೆಚ್ ಎ ಹನುಮನಹಳ್ಳಿ ಅಂಕಣಕಾರರು ಲೇಖಕರು ಕೆಆರ್ ನಗರ ತಾಲೂಕು

Tags: bad companybeing alonebetter alonebetter alone than in bad companyhour of the truthhow to be a lonerimportance of being aloneliving alone is betterquote of the dayspending time alonesteve harvey everything is going to changewhy being alone is better than being with the wrong peoplewhy do i prefer to be alonewhy i prefer to be alonewhy living alone is better for your soul than any relationshipwisdom of the past
Previous Post

ಇರಾನ್‌-ಇಸ್ರೇಲ್‌ ರಣಭೀಕರ ಯುದ್ಧ..! 3ನೇ ಮಹಾಯುದ್ಧ ಬೀತಿ..!

Next Post

ಸುದ್ದಿ ಓದುತ್ತಿರುವಾಗಲೇ ಬಾಂಬ್ ಬ್ಲಾಸ್ಟ್ – ಸ್ಟುಡಿಯೋ ಬಿಟ್ಟು ಓಡಿದ ಇರಾನ್ ಸುದ್ದಿ ನಿರೂಪಕಿ!

Related Posts

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
0

ಡಾ.ರಾಜ್ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು: ಸಿ.ಎಂ ಸಿದ್ದರಾಮಯ್ಯ ಅಪಾರ ಮೆಚ್ಚುಗೆ ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ...

Read moreDetails

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

November 3, 2025
Next Post
ಸುದ್ದಿ ಓದುತ್ತಿರುವಾಗಲೇ ಬಾಂಬ್ ಬ್ಲಾಸ್ಟ್ – ಸ್ಟುಡಿಯೋ ಬಿಟ್ಟು ಓಡಿದ ಇರಾನ್ ಸುದ್ದಿ ನಿರೂಪಕಿ!

ಸುದ್ದಿ ಓದುತ್ತಿರುವಾಗಲೇ ಬಾಂಬ್ ಬ್ಲಾಸ್ಟ್ - ಸ್ಟುಡಿಯೋ ಬಿಟ್ಟು ಓಡಿದ ಇರಾನ್ ಸುದ್ದಿ ನಿರೂಪಕಿ!

Recent News

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

November 3, 2025

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada