ಇತ್ತೀಚೆಗೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿ ಸಂಬಂಧ ಕೆಲ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಪ್ರಸಾರವಾಗಿದ್ದು ಈ ಸಂಬಂಧ ಗಾಲ್ಪ್ ಲಿಂಕ್ ಸಾಫ್ಟವೇರ್ ಪಾರ್ಕ್ ಪ್ರೈವೇಟ್ ಲಿ ಸಂಸ್ಥೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

28ರಂದು ನಡೆದ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಸಂಪೂರ್ಣವಾಗಿ ನಮ್ಮ ಸಂಸ್ಥೆಗೆ ಸಂಬಂದಿಸಿದ್ದೆ ಆಗಿದೆ. ನಮ್ಮ ಸಂಸ್ಥೆಯ ಹಣಕಾಸಿನ ವಹಿವಾಟಿಗೆ ಸಂಬಂದಿದಂತೆ ದಾಳಿ ನಡೆಸಲಾಗಿತ್ತು. ದಾಳಿಯ ವೇಳೆ ಐಟಿ ಅಧಿಕಾರಿಗಳಿಗೆ ಬೇಕಾದ ಎಲ್ಲಾ ಸೂಕ್ತ ದಾಖಲೆಗಳನ್ನು ಒದಗಿಸಲಾಗಿದೆ. ಹಾಗೆ ಅಧಿಕಾರಿಗಳ ಪರಿಶೀಲನೆಗೆ ಕೂಡ ಸಹಕರಿಸಲಾಗಿದೆ. ಇದು ಆದಾಯ ತೆರಿಗೆ ಅಧಿಕಾರಿಗಳ ಸರ್ವೇ ಸಾಮಾನ್ಯ ಪರಿಶೀಲನಾ ಭೇಟಿಯಾಗಿರುತ್ತದೆ.

ಆದರೆ ಈ ಭೇಟಿಯನ್ನು ಸರ್ಕಾರದ ಕೆಲ ಯೋಜನೆಗಳಿಗೆ ಸಂಬಂದಿಸಿದ್ದು ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಇಂಧನ ಇಲಾಖೆಗೆ ಆಗಲಿ, ಸ್ಮಾರ್ಟ್ ಮೀಟರ್ ಯೋಜನೆಗೆ ಆಗಲಿ ಯಾವುದೇ ಸಂಬಂಧ ಇರುವುದಿಲ್ಲವೆಂದು ಗಾಲ್ಪ್ ಲಿಂಕ್ ಸಾಫ್ಟವೇರ್ ಪಾರ್ಕ್ ಪ್ರೈವೇಟ್ ಲಿ ಸಂಸ್ಥೆ ವತಿಯಿಂದ ಸ್ಪಷ್ಟ ಪಡಿಸುತ್ತಿದ್ದೇವೆ.

ಹಾಗೆಯೇ ಗಾಲ್ಪ್ ಲಿಂಕ್ ಸಾಫ್ಟವೇರ್ ಪಾರ್ಕ್ ಪ್ರೈವೇಟ್ ಲಿ ಸಂಸ್ಥೆ ಕೂಡ ಕಾನೂನಿನ ನಿಯಮಗಳ ಅಡಿಯಲ್ಲಿ ಪಾರದರ್ಶಕತೆಯಿಂದಲೇ ಹಲವು ವರ್ಷಗಳಿಂದ ವ್ಯವಹಾರವನ್ನು ಕಂಪೆನಿ ನಡೆಸಿಕೊಂಡು ಬಂದಿದೆ. ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗಲು ಯಾವುದೇ ನಿಯಮಗಳ ಉಲ್ಲಂಘನೆ ಆಗಿಲ್ಲ ಎಂಬುದು ಕೂಡ ಕಂಡುಬಂದಿದೆ. ಹೀಗಾಗಿ ಸಂಸ್ಥೆಯ ಹಿತದೃಷ್ಠಿಯಿಂದಾಗಿ ಯಾವುದೇ ಆಧಾರ ರಹಿತ ಮತ್ತು ಊಹಾ ಪೋಹಗಳ ಸುದ್ದಿಯನ್ನು ಪ್ರಸಾರ ಮತ್ತು ಪ್ರಕಟ ಮಾಡದಂತೆ ಈ ಮೂಲಕ ಮನವಿ ಮಾಡಿಕೊಳ್ಳಲಾಗಿದೆ ಎಂದು ಗಾಲ್ಪ್ ಲಿಂಕ್ ಸಾಫ್ಟವೇರ್ ಪಾರ್ಕ್ ಪ್ರೈವೇಟ್ ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಗಳಾದ ಜಾಕೋಬ್ ಕುರುವಿಲ್ಲರವರು ಮನವಿ ಮಾಡಿದ್ದಾರೆ.

