IT, BPO ಕಂಪೆನಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವ ಅವಧಿಯನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗಿದೆ. ಮಂಗಳವಾರ ತಡರಾತ್ರಿ ಟ್ವೀಟ್ ಮಾಡಿದ ಕೇಂದ್ರ ದೂರಸಂಪರ್ಕ ಇಲಾಖೆ, ಜುಲೈ 31ರವರೆಗೆ ಇದ್ದ ಅವಧಿಯನ್ನು ವರ್ಷಾಂತ್ಯದವರೆಗೆ ವಿಸ್ತರಿಸಿದಿರುವುದಾಗಿ ಹೇಳಿದೆ.
COVID-19 ಗಮನದಲ್ಲಿಟ್ಟುಕೊಂಡು, OSPs(Other Service Providers)ಗಳಿಗೆ ಮನೆಯಿಂದ ಕೆಲಸ ಮಾಡಲು ಅನುಕೂಲವಾಗುವಂತೆ 2020 ರ ಡಿಸೆಂಬರ್ 31 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಟ್ವೀಟ್ನಲ್ಲಿ ಹೇಳಿದೆ
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಸ್ತುತ, ಐಟಿ ಕಂಪೆನಿಗಳ ಸುಮಾರು 85 ಪ್ರತಿಶತದಷ್ಟು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ನಿರ್ಣಾಯಕ ಕಾರ್ಯಗಳನ್ನು ನಿರ್ವಹಿಸುವವರು ಮಾತ್ರ ಕಚೇರಿಗಳಿಗೆ ಹೋಗುತ್ತಿದ್ದಾರೆ.
ಕರೋನವೈರಸ್ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಮಾರ್ಚ್ 30 ರಂದು ಮನೆಯಿಂದಲೇ ಕೆಲಸ ಮಾಡಲು ಅನುಕೂಲವಾಗುವಂತೆ, OSP ಗಳಿಗೆ ಕೆಲವು ನಿಯಮಗಳನ್ನು ದೂರಸಂಪರ್ಕ ಇಲಾಖೆ ಸಡಿಲಗೊಳಿಸಿತು. ಅದರಂತೆ ಜುಲೈ 31ರವರೆಗೆ ಉದ್ಯೋಗಿಗಳಿಗೆ ಮನೆಯಲ್ಲೇ ಕುಳಿತು ಕೆಲಸ ನಿರ್ವಹಿಸಬಹುದಿತ್ತು.