ಶತಾಯ-ಗತಾಯ ಏನೇ ಪ್ರಯತ್ನ ಮಾಡಿದ್ರೂ ಕೆ.ಎಸ್.ಈಶ್ವರಪ್ಪ(KS eshwarappa ) ಮನವೊಲಿಸುವಲ್ಲಿ ಬಿಜೆಪಿ (BJP) ನಾಯಕರು ವಿಫಲರಾಗಿದ್ದಾರೆ. ಪುತ್ರ ಕಾಂತೇಶ್ ಗೆ(kantesh) ಹಾವೇರಿ(Haveri) ಟಿಕೆಟ್ ಸಿಗಲಿಲ್ಲ ಎಂಬ ಸಿಟ್ಟಿನಿಂದ ಬಂಡಾಯ ಎದ್ದಿರುವ ಈಶ್ವರಪ್ಪ (eshwarappa)ಸ್ವತಃ ತಾವೇ ಶಿವಮೊಗ್ಗದಿಂದ ಅಖಾಡಕ್ಕಿಳಿಯೋ ತೀರ್ಮಾನ ಮಾಡಿದ್ದಾರೆ. ಇಲ್ಲಿಯವರೆಗೂ ಈಶ್ವರಪ್ಪನವರ ಮನವೊಲಿಸುವ ವಿಶ್ವಾಸದಲ್ಲಿದ್ದ ಯಡಿಯೂರಪ್ಪ (yediyurappa) ಒಮ್ಮಿಂದೊಮ್ಮೆಲೆ ಅವರ ವಿರುದ್ಧ ಸಿಡಿದೆದ್ದಿದ್ದಾರೆ. ಈಶ್ವರಪ್ಪ ಸ್ಪರ್ಧೆ ಶಿವಮೊಗ್ಗ (shivamogga) ಹಾಗೂ ಹಾವೇರಿ (Haveri) ಎರೆಡು ಕ್ಷೇತ್ರಗಳಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಹೈಕಮಾಂಡ್ ಗೆ (Highcommand) ದೂರು ನೀಡಿದ್ದಾರೆ.

ಬಿಜೆಪಿಯ ಸಾಕಷ್ಟು ನಾಯಕರು (BJP leaders), ರಾಜ್ಯ ಚುನಾವಣಾ ಉಸ್ತುವಾರಿ ಮೋಹನ್ ದಾಸ್ ಯಾರೆಲ್ಲ ಪ್ರಯತ್ನ ಪಟ್ಟರೂ ಸಹಃ ಈಶ್ವರಪ್ಪ ಸ್ಪರ್ಧೆಯಿಂದ ಹಿಂದೆ ಸರಿಎಲ್ಲ ಎಂಬ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ. ಕೇಂದ್ರದ ನಾಯಕರು ತಮ್ಮ ಪುತ್ರನನ್ನ MLC ಮಾಡುವ ಆಫರ್ ನೀಡಿದ್ದರೂ ಕೂಡ ಸದ್ಯ ಈಗ ಯಾರನ್ನು ನಂಬುವ ಸ್ಥಿತಿಯಲ್ಲಿ ಈಶ್ವರಪ್ಪ ಇಲ್ಲ. ಹೀಗಾಗಿ ಶಿವಮೊಗ್ಗ ಕ್ಷೇತ್ರ BSY ಪಾಲಿಗೆ ಟೆನ್ಶನ್ (Tension) ತಂದಿಟ್ಟಿದೆ.

ತಮ್ಮ ಪುತ್ರ BY ರಾಘವೇಂದ್ರ (BY raghavendra) ಗೆಲುವಿಗೆ ಕಂಟಕವಾಗಲೆಂದೇ ಈಶ್ವರಪ್ಪ ಶಿವಮೊಗ್ಗದಿಂದ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಅರಿತಿರುವ ಯಡಿಯೂರಪ್ಪ (yediyurappa) ಈಶ್ವರಪ್ಪ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ನಾವು ಎಲ್ಲಾ ಪ್ರಯತ್ನ ಮಾಡಿಯಾಗಿದೆ. ಇನ್ನು ಈಶ್ವರಪ್ಪನನ್ನ ಸುಮ್ಮನಾಗಿಸೋದು ನಿಮ್ಮ ಕೆಲಸ. ಇಲ್ಲವಾದ್ರೆ ಬಿಜೆಪಿ ಶಿವಮೊಗ್ಗ (shivamogga) ಮತ್ತು ಹಾವೇರಿಯಲ್ಲಿ (Haveri) ಸಂಕಷ್ಟ ಎದುರಿಸಲಿದೆ ಎಂದು ಚೆಂಡನ್ನ BSY ಹೈಕಮಾಂಡ್ ಅಂಗಳಕ್ಕೆ ಎಸೆದಿದ್ದಾರಂತೆ. ಇನ್ನೇನಿದ್ದರೂ ಹೈಕಮಾಂಡ್ ಉಂಟು, ಈಶ್ವರಪ್ಪ ಉಂಟು ಎಂಬಂತೆ ಆಗಿದ್ದು ಕುತೂಹಲ ಮೂಡಿಸಿದೆ.