ಗೋವು ಸಾಗಣೆ ಅಕ್ರಮ ತಡೆಯಲು ಹೋಗಿ ವಾಹನದ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡ ಚರಣ್ ಹಾಗೂ ಕಿರಣ್ ಎಂಬ ತೀರ್ಥಹಳ್ಳಿ ಯುವಕರು ಮಣಿಪಾಲದ ಕೆಎಂಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾರೆ ವೃತ್ತಿ ಮಾಡುತ್ತಿದ್ದ ಈ ಸಹೋದರರಿಗೆ ಇರುವ ಕಾಳಜಿ ಬಿಜೆಪಿಗಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ನಿನ್ನೆ ತೀರ್ಥಹಳ್ಳಿಯಲ್ಲಿ ಬೃಹತ್ ಪ್ರತಿಭಟನೆ ಮಾಡಿತ್ತು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಗಾಯಾಳುಗಳನ್ನ ನೋಡಲು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಕೆಎಂಸಿಗೆ ಭೇಟಿ ನೀಡಿ ಯುವಕರ ಚಿಕಿತ್ಸೆ ಹಾಗೂ ಜೀವನ ನಿರ್ವಹಣೆ ವೆಚ್ಛ ಭರಿಸೋದಾಗಿ ಹೇಳಿದ್ದಾರೆ. ಆದರೆ ಆಸ್ಪತ್ರೆ ಎದುರು ಪತ್ರರ್ಕರ ಪ್ರಶ್ನೆಗಳಿಗೆ ಉತ್ತರಿಸುವಾಗ ಪೇಚಿಗೆ ಸಿಲುಕಿದ್ದಾರೆ. ಬಿಜೆಪಿ ಸರ್ಕಾರವಿದ್ದರೂ ಗೋವು ಕಳ್ಳತನ ನಡೆಯುತ್ತಿದೆಯಲ್ಲ ಅಧಿಕಾರಿಗಳು ಹಾಗೂ ಶಾಸಕರ ಅಭಯವಿದೆಯಾ ಎಂಬ ನೇರ ಪ್ರಶ್ನೆಗಳಿಗೆ ತಡಬಡಾಯಿಸಿಕೊಂಡು ಉತ್ತರ ನೀಡಿದರ. ಬಿಜೆಪಿ ಸರ್ಕಾರವಿದ್ದರೂ ಪೊಲೀಸ್ ಇಲಾಖೆ ವೈಫಲ್ಯ ನಾನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದು ಬಿಟ್ಟರೆ ಉಳಿದೆಲ್ಲಾ ಕಾಂಗ್ರೆಸ್ ಸರ್ಕಾರದಲ್ಲಿ ಏನಾಗಿತ್ತು, ನಮ್ಮಲ್ಲಿ ಏನಾಗುತ್ತಿದೆ ಎಂದು ವರದಿ ಒಪ್ಪಿಸುವ ಕೆಲಸವಷ್ಟೇ ಆಯ್ತು..!
ಸದನದಲ್ಲಿ ಮುನಿರತ್ನ ಮಾನ ಮರ್ಯಾದೆ ತೆಗೆದ ಕಾಂಗ್ರೆಸ್ ನಾಯಕರು
https://youtu.be/ZbayTPBVQ1U
Read moreDetails