ಶ್ರೀಹರಿಕೋಟಾ : ಇಸ್ರೋದ ಮಹತ್ವಾಕಾಂಕ್ಷಿ ಗಗನಯಾನಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮಾನವ ರಹಿತ ಪರೀಕ್ಷಾ ವಾಹನದ ಉಡಾವಣೆ ಯಶಸ್ವಿಯಾಗಿ ನಡೆದಿದೆ. ಶನಿವಾರ ಬೆಳಗ್ಗೆ 8 ಗಂಟೆಗೆ ಉಡಾವಣೆಯಾಗಬೇಕಿದ್ದ, ಬಳಿಕ ಕೆಲ ಕಾಲ ಮುಂದೂಡಿಕೆಯಾಗಿದ್ದ ಇಸ್ರೋದ ಗಗನಯಾನ ಮಿಷನ್ ಲಾಂಛ್ ಬೆಳಗ್ಗೆ 10 ಗಂಟೆಗೆ ಯಶಸ್ವಿಯಾಗಿದೆ.

ಬೆಳಗ್ಗೆ ರಾಕೆಟ್ ಉಡಾವಣೆಯಾಗಲು ಆರಂಭಿಕ ತೊಂದರೆಯಾದಾಗ ಕೆಲ ಕಾಲ ಆತಂಕಗೊಂಡಿತ್ತಾದರೂ, ಮಿಷನ್ ಯಶಸ್ವಿಯಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಇಸ್ರೋ ಅಧ್ಯಕ್ಷ ಸೊಮನಾಥ್, ಇಸ್ರೋದ ಉಡಾವಣೆ ಯಶಸ್ವಿಯಾಗಿದೆ ಎಂದಿದ್ದಾರೆ. ಹಾಗೂ, ಗಗನಯಾನ ಮಿಷನ್‌ನಲ್ಲಿ ಕೆಲಸ ಮಾಡಿದ ಪ್ರಮುಖರು ಹರ್ಷ ವ್ಯಕ್ತಪಡಿಸಿದ್ದಾರೆ.

ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ನಭಕ್ಕೆ ಚಿಮ್ಮಿದ ರಾಕೆಟ್ 17 ಕಿ.ಮೀ. ಎತ್ತರದಲ್ಲಿ ಗಗನಯಾನ ನೌಕೆಯನ್ನು ಬೇರ್ಪಟ್ಟಿದೆ. ಬಳಿಕ ನೌಕೆ ಪ್ಯಾರಾಚೂಟ್ ಸಹಾಯದಿಂದ ಬಂಗಾಳಕೊಲ್ಲಿಯಲ್ಲಿ ಇಳಿದಿದ್ದು, ಅಲ್ಲಿಂದ ಅದನ್ನು ಹಡಗಿನ ಮೂಲಕ ವಶಕ್ಕೆ ಪಡೆಯಲಾಗಿದೆ.