ಸಾಕಷ್ಟು ಚರ್ಚೆ, ತೀವ್ರ ಪ ವಿರೋಧಕ್ಕೆ ಒಳಪಟ್ಟಿದ್ದ ಜಾತಿ ಗಣತಿ ಸಮೀಕ್ಷೆ (Caste census) ಬಗ್ಗೆ ಇದೀಗ ಮತ್ತೆ ಅಪಸ್ವರ ಕೇಳಿಬಂದಿದೆ. ಹಲವು ಪ್ರಶೆಗಳು ಹಾಗೂ ಟೀಕೆಗಳ ನಡುವೆ ಶುರುವಾದ ಜಾತಿ ಗಣತಿ ಸದ್ಯ ಮತ್ತೆ ವಿವಾದದ ಕೇಂದ್ರಬಿಂದುವಾಗಿದೆ.

ಹೌದು ಈ ಮೊದಲು ನಡೆಸಿದ್ದ ಸಮೀಕ್ಷೆ ಅವೈಜ್ಞಾನಿಕವಾಗಿದೆ, ದೋಷಪೂರಿತವಾಗಿದೆ ಎಂಬ ಆರೋಪಗಳು ಮತ್ತು ಸ್ವಪಕ್ಷೆಯರೇ ಆ ವರದಿಗೆ ವಿರೋಧ ವ್ಯಕ್ತಪಡಿಸಿದ್ದ ಕಾರಣ,ಕಾಂಗ್ರೆಸ್ ಸರ್ಕಾರ ಮತ್ತೆ ರಾಜ್ಯಾದ್ಯಂತ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸುತ್ತಿದೆ.

ಆದರೆ ಈ ಸಮೀಕ್ಷೆಯೂ ಕೂಡ ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪ ಈಗ ಕೇಳಿಬಂದಿವೆ. ಈ ಸಮೀಕ್ಷೆ ನಡೆಸುತ್ತಿರುವ ಸಿಬ್ಬಂದಿ ಹಾಗೂ ಸರ್ಕಾರಿ ಅಧಿಕಾರಿಗಳು ಸೂಕ್ತ ಮಾಹಿತಿ ಪಡೆಯದೇ ಕಾಟಾಚಾರಕ್ಕಾಗಿ ಸಮೀಕ್ಷೆ ಮಾಡಿ ಮನೆ ಮನೆಗೆ ಸ್ಟಿಕ್ಕರ್ ಅಂಟಿಸಿ ತೆರಳುತ್ತಿದ್ದಾರೆ ಎಂಬ ದೂರು ಕೇಳಿಬಂದಿವೆ.

ಹೀಗಾಗಿ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲೂ ಒಳ ಮೀಸಲಾತಿ ಸರ್ವೆ ಬಗ್ಗೆ ಚರ್ಚೆ ನಡೆಸಲಾಗಿದೆ. ಕ್ಯಾಬಿನೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮುಂದೆ ಸಚಿವ ಹೆಚ್.ಸಿ ಮಹದೇವಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಹೆಚ್.ಎನ್ ನಾಗಮೋಹನ್ ದಾಸ್‌ರನ್ನ ಕರೆಸಿ ಸಮೀಕ್ಷೆ ಯಾವ ಹಂತದಲ್ಲಿದೆ, ಏನಾಗಿದೆ ಎಂದು ವಿಚಾರಿಸುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ ಎನ್ನಲಾಗಿದೆ.