
ರಾಜ್ಯದಲ್ಲಿ ಸಾಕಷ್ಟು ಸುದ್ದಿಯಲ್ಲಿ ಇರುವ ವಿಚಾರ ಅಂದ್ರೆ ನಟಿ ರಾನ್ಯ ರಾವ್. ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಪಾತ್ರ ಮಾಡಿದ್ದರೂ ದುಬೈನಿಂದ ಚಿನ್ನ ಕಳ್ಳ ಸಾಗಾಟ ವಿಚಾರದಲ್ಲಿ ಭಾರೀ ಸುದ್ದಿ ಆಗುತ್ತಿರುವ ನಟಿ. ಇದೀಗ ನ್ಯಾಯಾಂಗ ಬಂಧನದಲ್ಲಿ ಇರುವ ರಾನ್ಯಾ ರಾವ್ ಜೊತೆಗೆ ಇಬ್ಬರು ಸಚಿವರು ಆತ್ಮೀಯರು ಎನ್ನುವ ವಿಚಾರ ಭಾರೀ ಸದ್ದು ಮಾಡುತ್ತಿದೆ. ಸಿಬಿಐ, ಇಡಿ ಸೇರಿದಂತೆ ಸಾಕಷ್ಟು ತನಿಖಾ ಸಂಸ್ಥೆಗಳು ಚಿನ್ನ ಕಳ್ಳಸಾಗಣೆ ಬಗ್ಗೆ ತನಿಖೆ ನಡೆಸುತ್ತಿವೆ. ಈ ನಡುವೆ ಸಿದ್ದರಾಮಯ್ಯ ಜೊತೆಗೂ ಆತ್ಮೀಯತೆ ಹೊಂದಿರುವ ಬಗ್ಗೆ ಗುಸುಗುಸು ಶುರುವಾಗಿದೆ.
ಏರ್ಪೋರ್ಟ್ನಲ್ಲಿ ಯಾವುದೇ ಪ್ರಯಾಣಿಕ ವಿಮಾನ ನಿಲ್ದಾಣದಿಂದ ಹೊರಕ್ಕೆ ಬರುವಾಗ ಅಥವಾ ಒಳಕ್ಕೆ ಹೋಗುವಾಗ ಸಾಕಷ್ಟು ತಪಾಸಣೆಗೆ ಒಳಪಡಿಸಲಾಗುತ್ತದೆ. ಆದರೆ ಚಿನ್ನ ಕಳ್ಳ ಸಾಗಣೆಯ ಕೇಸ್ನಲ್ಲಿ ಬಂಧನ ಆಗಿರುವ ರಾನ್ಯಾ ರಾವ್ಗೆ ಯಾವುದೇ ತಪಾಸಣೆ ಮಾಡುತ್ತಿರಲಿಲ್ಲ. ಎಸ್ಕಾರ್ಟ್ನಲ್ಲಿ ಏರ್ಪೋರ್ಟ್ನಿಂದ ಹೊರಕ್ಕೆ ಕರೆದುಕೊಂಡು ಬರಲಾಗ್ತಿತ್ತು ಅನ್ನೋದು ಗೊತ್ತಾಗಿದೆ. ಸಾಕಷ್ಟು ಬಾರಿ ದುಬೈಗೆ ಪದೇ ಪದೇ ಹೋಗಿ ಬಂದಾಗಲೂ ಎಸ್ಕಾರ್ಟ್ನಲ್ಲಿ ಕರೆದುಕೊಂಡು ಬರಲಾಗ್ತಿತ್ತು. ಸಾಕಷ್ಟು ಅಧಿಕಾರಿಗಳು ಚಿನ್ನ ಕಳ್ಳ ಸಾಗಣೆಯಲ್ಲಿ ಭಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಜೊತೆಗೆ ಸಿಎಂ ಆತ್ಮೀಯವಾಗಿ ಇರುವ ಫೋಟೋಗಳು ವೈರಲ್ ಆಗಿವೆ.

ಸಿಎಂ ಸಿದ್ದರಾಮಯ್ಯ ರಾನ್ಯಾ ರಾವ್ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ರಾನ್ಯಾ ರಾವ್ ಮದುವೆಯಾದ ಸಮಯದಲ್ಲಿ ಇಂದಿನ ಗೃಹ ಸಚಿವ ಡಾ ಜಿ ಪರಮೇಶ್ವರ್ ಸೇರಿದಂತೆ ಸಾಕಷ್ಟು ರಾಜಕಾರಣಿಗಳು ಭಾಗಿಯಾಗಿದ್ದಾರೆ. ಇದೀಗ ರಾನ್ಯ ರಾವ್ ಬಂಧನ ಆಗಿರೋದಕ್ಕೆ ಕಾರಣ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಸಚಿವರು ರಾನ್ಯಾ ರಾವ್ ಜೊತೆಗೆ ಶಾಮೀಲಾಗಿದ್ದಾರೆ. ರಾಜ್ಯ ಸರ್ಕಾರದ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿದ್ದು, ಕೇಂದ್ರ ತನಿಖಾ ಸಂಸ್ಥೆಗಳ ತನಿಖೆಯಲ್ಲಿ ಸತ್ಯಾಂಶ ಹೊರಬೀಳುವ ಎಲ್ಲಾ ಸಾಧ್ಯತೆಗಳು ಇವೆ ಎನ್ನಲಾಗ್ತಿದೆ.

ರಾನ್ಯಾ ರಾವ್ ತಂದೆ ಹಿರಿಯ (IPS) ಪೊಲೀಸ್ ಅಧಿಕಾರಿ ಆಗಿದ್ದು, ಪೊಲೀಸ್ ಅಧಿಕಾರಿ ಆಹ್ವಾನದ ಮೇರೆಗೆ ಹೋಗಿದ್ದರ..? ಅಥವಾ ನೇರವಾಗಿ ರಾನ್ಯಾ ರಾವ್ ಆವರೇ ಸಿದ್ದರಾಮಯ್ಯ ಜೊತೆಗೆ ಸಂಪರ್ಕ ಹೊಂದಿದ್ದಾರಾ..? ಅಥವಾ ಗೋಲ್ಡ್ ಸ್ಮಗ್ಲಿಂಗ್ನಲ್ಲಿ ಇಬ್ಬರು ಸಚಿವರು ಭಾಗಿಯಾಗಿದ್ದಾರೆ ಎನ್ನಲಾಗ್ತಿರುವ ಸಚಿವರ ಕಡೆಯಿಂದ ರಾನ್ಯಾ ರಾವ್ ಮದುವೆಯಲ್ಲಿ ಪಾಲ್ಗೊಂಡಿದ್ರಾ..? ಅನ್ನೋ ಬಗ್ಗೆ ಇನ್ನಷ್ಟೇ ಮಾಹಿತಿ ಹೊರ ಬೀಳಬೇಕಿದೆ. ಕೇಂದ್ರ ತನಿಖಾ ಸಂಸ್ಥೆಗಳ ವಿಚಾರಣೆ ವೇಳೆ ಎಲ್ಲಾ ಮಾಹಿತಿ ಹೊರಬರಬೇಕಿದ್ದು, ಸಿದ್ದರಾಮಯ್ಯ ಕೊರಳಿಗೂ ಸುತ್ತಿಕೊಳ್ಳುತ್ತಾ ಕಾದು ನೋಡ್ಬೇಕು.