ಡಿಆರ್ಐ ತನಿಖೆಯಲ್ಲಿ ಅಂತರರಾಷ್ಟ್ರೀಯ ಲಿಂಕ್ಗಳ ಮಾಹಿತಿ ಸಿಕ್ಕಿದೆ. ಡಿಆರ್ಐ ಕಲೆ ಹಾಕಿರುವ ಸಾಕ್ಷ್ಯಗಳು ಪ್ರಕರಣದ ಗಂಭೀರತೆ ಬಗ್ಗೆ ಹೇಳುತ್ತವೆ. ಆರೋಪಿ ಎವಿಡೇನ್ಸ್ ಟ್ಯಾಂಪರಿಂಗ್ ಮಾಡಬಹುದು.ವ ಈ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಬಹುದಾದ ಯಾವುದೇ ಕಾರಣಗಳು ಇಲ್ಲ. ಜಾಮೀನು ನಿರಾಕರಿಸಲು ಸಾಕಷ್ಟು ಕಾರಣಗಳಿವೆ. ದೊಡ್ಡ ನೆಟ್ವರ್ಕ್ ಇದೆ, ಲಿಂಕ್ಸ್ ಇದೆ. ಹವಾಲ ಟ್ರಾನ್ಸಕ್ಷನ್ ಇದೆ. ಇದರ ಬಗ್ಗೆ ಡಿಆರ್ ಐ ತನಿಖೆ ನಡೆಯುತ್ತಿದೆ ಎಂದಿದ್ದಾರೆ ವಕೀಲ ಮಧುರಾವ್.

ಡಿಆರ್ಐ ವಕೀಲರ ವಾದಕ್ಕೆ ಆರೋಪಿ ಪರ ವಕೀಲರು ಪ್ರತಿವಾದ ಮಂಡಿಸಿದ್ದು, ಏರ್ ಟಿಕೆಟ್ ಖರೀದಿಗೆ ರನ್ಯಾ ಹಣ ನೀಡಿದ್ದಾರೆ ಅಂತಾ ಡಿಆರ್ಐ ವಾದಕ್ಕೆ ಸಾಕ್ಷ್ಯಗಳು ಇಲ್ಲ. ಆರೋಪಿ ಬಂಧನವಾಗಿದ್ದು ಮಾರ್ಚ್ 3 ರಂದು. ಆದರೆ ತರುಣ್ಗೆ ಮಾರ್ಚ್ 8 ರಂದು ಸಮನ್ಸ್ ನೀಡಲಾಗಿದೆ ಎಂದು ತರುಣ್ ರಾಜ್ ಪರ ವಕೀಲ ದೇವರಾಜ್ ಪ್ರತಿವಾದ ಮಾಡಿದ್ದಾರೆ. ಚಿನ್ನವನ್ನ ಜಿನೀವಾಗೆ ತೆಗೆದುಕೊಂಡು ಹೋಗಲು ರನ್ಯಾಗೆ ತರುಣ್ ಹೇಳಿದ್ದ ಎಂದು ಡಿಆರ್ಐ ಹೇಳಿದೆ. ಹೀಗೆ ಆರೋಪ ಮಾಡುವುದು ಸುಲಭ, ಸಾಬೀತು ಪಡಿಸುವುದು ಕಷ್ಟ, ಈ ಹಿಂದೆ ತರುಣ್ ಜಿನೀವಾಗೆ ಹೋಗಿಲ್ಲ ಎಂದು ವಾದಿಸಿದ್ದಾರೆ.

ಡಿಆರ್ಐ ಅಧಿಕಾರಿಗಳ ತನಿಖೆ ಪ್ರಶ್ನಿಸಿರುವ ತರುಣ್ ಪರ ವಕೀಲರು, ಡಿಆರ್ಐ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳಲ್ಲ ಎಂದಿದ್ದಾರೆ. ಈ ವೇಳೆ ತರುಣ್ ಪರ ವಕೀಲರ ವಾದಕ್ಕೆ ಡಿಆರ್ಐ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಅಡ್ಮಿಸೆಬಲ್ ಎವಿಡೇನ್ಸ್ ಇಲ್ಲ ಎಂದಿದ್ದಾರೆ. ತರುಣ್ ಪರ ವಕೀಲರ ವಾದ ಮಂಡಿಸಿ, ಈ ಪ್ರಕರಣದಲ್ಲಿ ತರುಣ್ ರಾಜ್ಗೆ ಜಾಮೀನು ನೀಡಬೇಕು. ಜಾಮೀನು ಪಡೆಯಬಹುದಾದ ಪ್ರಕರಣ ಎಂದು ಕೋರ್ಟ್ ಗಮನ ಸೆಳೆದಿದ್ದಾರೆ. ವಾದ ಪ್ರತಿವಾದ ಆಲಿಸಿರುವ ಕೋರ್ಟ್ ನಾಳೆ ತೀರ್ಪು ನೀಡುವುದಾಗಿ ತಿಳಿಸಿದೆ.

ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ನಲ್ಲಿ ಎರಡನೇ ಆರೋಪಿ ಆಗಿರುವ ತರುಣ್ ರಾಜ್ ಜಾಮೀನು ಅರ್ಜಿ ವಿಚಾರಣೆ ಮುಕ್ತಾಯವಾಗಿದ್ದು, ನಾಳೆ ಕೋರ್ಟ್ ಆದೇಶ ಪ್ರಕಟಿಸಲಿದೆ. ಈಗಾಗಲೇ ನಟಿ ರನ್ಯಾರಾವ್ ಜಾಮೀನು ಅರ್ಜಿಯನ್ನು ಇದೇ ಕೋರ್ಟ್ ವಜಾ ಮಾಡಿತ್ತು. ಇದೀಗ ಎರಡನೇ ಆರೋಪಿ ಜಾಮೀನು ಅರ್ಜಿಯನ್ನು ಮಾನ್ಯ ಮಾಡಿ ಜಾಮೀನು ಮಂಜೂರು ಮಾಡುತ್ತಾ..? ಅಥವಾ ರನ್ಯಾ ಜಾಮೀನು ಅರ್ಜಿಯಂತೆ ತರುಣ್ ರಾಜ್ ಜಾಮೀನು ಅರ್ಜಿಯನ್ನು ವಜಾ ಮಾಡುತ್ತಾ ಅನ್ನೋದನ್ನು ಕಾದು ನೋಡಬೇಕು.