ರಾಷ್ಟ್ರ ರಾಜಕಾರಣದಲ್ಲಿ ಹುಚ್ಚು ದೊರೆ ಎಂದು ತೀವ್ರ ಕುಖ್ಯಾತಿ ಪಡೆದಿರುವ ಮಾಜಿ ಕ್ರಿಕೆಟಿಗ, ಮಾಜಿ ಸಚಿವ, ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ವಿರುದ್ದ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಉಸ್ತುವಾರಿ ಹಾಗೂ ನಾಯಕರುಗಳ ದೂರಿನ ಮೇರೆಗೆ ಶಿಸ್ತು ಕ್ರಮ ಜರುಗಿಸಲು ಮುಂದಾಗಿದೆ.
ಈ ನಡುವೆ ಸಿಧು ಆಮ್ ಆದ್ಮಿ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಪಕ್ಷದ ಇಮೇಜನ್ನು ಸಾಕಷ್ಟು ಡ್ಯಾಮೇಜ್ ಮಾಡಿದ್ದಾರೆ ಎಂಬ ಆರೋಪ ಒಂದುಕಡೆಯಾದರೆ, ಈ ಡ್ಯಾಮೇಜ್ ಮತ್ತೆ ಕವರ್ ಮಾಡಲು ಅಂದರೆ ಪಂಜಾಬ್ನಲ್ಲಿ ಕಾಂಗ್ರೆಸ್ ಪಕ್ಷವನ್ನು ಪುನಶ್ಚೇತನಗೊಳ್ಳಲು ಸಾಕಷ್ಟು ಸಮಯ ಬೇಕಿದೆ ಎಂದು ಇಡೀ ರಾಕಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಸಿಧು ಗಾಳಿ ಯಾವ ಕಡೆ ಬೀಸುತ್ತದೋ ಆ ಕಡೆ ತಿರುಗುತ್ತಾರೆ ಎಂಬ ಮಾತುಗಳು ರಾಷ್ಟ್ರ ರಾಜಕಾರಣದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತದೆ. ಈ ಮಧ್ಯೆ ಸಿಧು ಆಮ್ ಆದ್ಮಿ ಪಕ್ಷವನ್ನು ಸೇರಲಿದ್ದಾರೆ ಎಂದು ತಿಳಿದು ಬಂದಿದೆ. ಏಕೆಂದರೆ 2004ರಲ್ಲಿ ಬಿಜೆಪಿ ಸೇರಿದ ಸಿಧು ಅಮೃತಸರ ಲೋಕಸಭೆ ಕ್ಷೇತ್ರದ ಟಿಕೆಟ್ಅನ್ನು ನಿರಾಯಸವಾಗಿ ಪಡೆದು ಎರಡು ಭಾರೀ ಗೆದ್ದರು 2014ರಲ್ಲಿ ಬದಲಾದ ರಾಜಕೀಯ ವಿದ್ಯಾಮಾನದಲ್ಲಿ ಸಿಧು ಸೋಲನ್ನು ಕಂಡು ಮತ್ತು 2016ರಲ್ಲಿ ಸ್ಥಳೀಯ ಬಿಜೆಪಿ ನಾಯಕರ ತೀವ್ರ ವಿರೋಧದ ನಡುವೆ ರಾಜ್ಯಸಭೆಗೆ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದರು.
2017ರಲ್ಲಿ ಚುನಾವಣೆ ನಡೆಯುವ ಹೊಸ್ತಿಲಲ್ಲಿ ಸಿಧು ಬಿಜೆಪಿ ಹಾಗೂ ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿ ಅಮೃತಸರ ಪೂರ್ವದ ಟಿಕೆಟ್ ಪಡೆದು ಗೆದ್ದು ಕ್ಯಾಪ್ಟನ್ ಸರ್ಕಾರದಲ್ಲಿ ಸಚಿವರಾಗಿದ್ದರು. ತಮ್ಮ ಬಹುಕಾಲದ ಆಪ್ತ ಸ್ನೇಹಿತ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ 2018ರಲ್ಲಿ ಪ್ರಧಾನಿಯಾಗಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಿಧು ಭಾರತದಿಂದ ಸ್ನೇಹಿತನಿಗೆ ಶುಭಾಶಯ ಕೋರಲು ಹೋಗಿದ್ದರು. ನಂತರ ವಿವಾದಾತ್ಮಕ ಹೇಳಿಕೆಯನ್ನು ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಂದಿನ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹಾಗೂ ಕಾಂಗ್ರೆಸ್ ಹೈಕಮಾಂಡ್ನಿಂದ ಶಸ್ತುಕ್ರಮದ ಎಚ್ಚರಿಕೆಯನ್ನು ಸಹ ಪಡೆದಿದ್ದರು ನಂತರದ ದಿನಗಳಲ್ಲಿ ಹೀಗೆ ಮುಂದುವರೆದ ಕಾರಣ ಸಿಧುರನ್ನ ಸಚಿವ ಸ್ಥಾನದಿಂದ ವಜಾ ಮಾಡಲಾಗಿತ್ತು.
ಆ ನಂತರ ರಾಜಕೀಯ ಬೆಳವಣಿಗೆಯಲ್ಲಿ ಹೈಕಮಾಂಡ್ ಮಟ್ಟದಲ್ಲಿ ಸಿಧು ಆಡಿದೆ ಆಟ ಎಂಬಂತ್ತಾಗಿತ್ತು ಅದು ಎಷ್ಟರ ಮಟ್ಟಿಗೆ ಎಂದರೆ ಪಕ್ಷ ಹೀನಾಮಾನವಾಗಿ ಸೋಲುವಷ್ಟು. ಈ ನಡುವೆ ಸಿಧು ಕಾಂಗ್ರೆಸ್ ವಿರುದ್ದ ಮತ್ತೊಮ್ಮೆ ಬಹಿರಂಗವಾಗಿ ಗುಡುಗಲು ಶುರು ಮಾಡಿದ್ದು ಸ್ವತಃ ಕಾಂಗ್ರೆಸ್ ನಾಯಕರನ್ನೇ ಪಕ್ಷದ ವೇದಿಕೆಯಲ್ಲಿ ನಿಂತುಕೊಂಡು ಹಿಗ್ಗಾಮುಗ್ಗಾ ಜರಿಯುತ್ತಿದ್ದಾರೆ.
ಆದರೆ, ಮಹತ್ವದ ಬೆಳವಣಿಗೆಯಲ್ಲಿ ಸಿಧು ಎಎಪಿ ಸೇರಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಅದಕ್ಕೆ ಪೂರಕವೆಂಬಂತೆ ಸಿಧು ಇತ್ತೀಚಿನ ದಿನಗಳಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ರನ್ನು ಹಾಡಿ ಹೊಗಳುತ್ತಿರುವುದು ಅಧಿಕಾರದ ಚುಕ್ಕಾಣಿ ಹಿಡಿದು ಕೆಲವೇ ಕೆಲವು ದಿನಗಳಾದರು ಸಹ ಜನರ ಮನ್ನಣೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದ ಕಾರಣ ಸಿಧು ಮಾನ್ರನ್ನು ಎಲ್ಲಡೆ ಹಾಡಿ ಹೊಗಳುತ್ತಿದ್ದಾರೆ.
ಅದಕ್ಕೆ ಪೂರವೆಂಬಂತೆ ಈ ಹಿಂದೆ ಆಮ್ ಆದ್ಮಿ ಪಕ್ಷದಿಂದ ತಮ್ಮಗೆ ಆಫರ್ ಬಂದಿದೆ ಎಂದು ಹೇಳಿ ಸಿಧು ಸುದ್ದಿಯಲ್ಲಿದ್ದರು. ಇತ್ತಿಛಿನ ದಿನಗಳಲ್ಲಿ ಸಿಧು ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಆಮ್ ಆದ್ಮಿ ಪಕ್ಷ ಸೇರುತ್ತಾರೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಸದ್ಯ ಪಂಜಾಬನಲ್ಲಿ 5 ರಾಜ್ಯಸಭಾ ಸ್ಥಾನಗಳು ಖಾಲಿಯಿದ್ದು ಅದೆಲ್ಲವು ಸಹ ಆಡಳಿತ ಪಕ್ಷದ ಪಾಲಾಗಿದೆ ಸಿಧು ಅದರ ಮೇಲೆ ಕಣ್ಣಿಟ್ಟಿದ್ದು ತಮ್ಮನ್ನು ನಾಮನಿರ್ದೇಶನ ಮಾಡುವಂತೆ ಆಪ್ ನಾಯಕರ ಬಳಿ ಎಂದು ಸುತ್ತು ಮಾತುಕತೆ ನಡೆಸಿದ್ದಾರಂತೆ. ಆದರೆ, ಆಪ್ ನಾಯಕರಿಗೆ ಇವರ ಸೇರ್ಪಡೆ ಇಷ್ಟವಿಲ್ಲ ಎಂದು ಪಕ್ಷದ ಒಂದು ಮೂಲ ಹೇಳಿದೆ ಯಾಕೆಂದರೆ ಸಿಧು ಹೋದ ಕಡೆ ಆಯಾ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಕೇಳಿ ಬರುತ್ತಿದೆ.
ಮುಂದಿನ ದಿನಗಳಲ್ಲಿ ಈ ಕ್ಷಿಪ್ರ ಬೆಳವಣಿಗೆ ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.