ನಾಗಮಂಗಲ ಶಾಸಕ ಹಾಗೂ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ರಾಜಕೀಯ ನಿವೃತ್ತಿ ಘೋಷಣೆ ಮಾಡುವ ನಿರ್ಧಾರ ಮಾಡಿದ್ರಾ ಎಂಬ ಅನುಮಾನ ಎದುರಾಗಿದೆ. ಕ್ಷೇತ್ರ ಹಾಗೂ ರಾಜಕೀಯ ಬಿಡುವ ಬಗ್ಗೆ ನಿರ್ಧಾರ ಮಾಡಿದ್ದರ ಬಗ್ಗೆ ಸ್ವತಃ ಚಲುವರಾಯಸ್ವಾಮಿ ಕೃತಜ್ಞತಾ ಸಭೆಯಲ್ಲಿ ಮಾಹಿತಿ ಬಿಚ್ಚಿಟ್ಟಿದ್ದಾರೆ.
ನಾಗಮಂಗಲ ಕ್ಷೇತ್ರದ ಕೊಪ್ಪ ಎಂಬಲ್ಲಿ ನಡೆದಿದ್ದ ಕೃತಜ್ಞತಾ ಸಭೆಯಲ್ಲಿ ಚಲುವರಾಯಸ್ವಾಮಿ ಮಾತನಾಡಿದ್ದು, ವಿಧಾನ ಸಭಾ ಚುನಾವಣೆಯಲ್ಲಿ ನಾಗಮಂಗಲದಲ್ಲೆ ಸ್ಪರ್ಧೆ ಮಾಡಿದೆ.ಒಂದು ವೇಳೆ ನಾನು ಈ ಚುನಾವಣೆ ಸೋತಿದ್ದರೆ, ನಿಮ್ಮ ಕೈಗೆ ಹಾಗೂ ಪಕ್ಷದವರ ಕೈಗೆ ಸಿಗದೇ ರಾಜಕೀಯ ಬಿಟ್ಟು ಹೋಗಬೇಕೆಂದು ನಿರ್ಧಾರ ಮಾಡಿದ್ದೆ. ಕ್ಷೇತ್ರದ ಜನರ ಮೇಲೆ ನಂಬಿಕೆಯಿಟ್ಟು ಧೈರ್ಯದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಜನರ ಆಶೀರ್ವಾದಿಂದ ಗೆದ್ದಿದ್ದೇನೆ ಎಂದಿದ್ದಾರೆ .
ನಾನು ನಾಗಮಂಗಲದಿಂದ ಸ್ಪರ್ಧಿಸಬಾರದು ಎಂದು ವರಿಷ್ಠರಿಂದ ಒತ್ತಾಯವಿತ್ತು. ಆದರೆ ನಾನು ನಿಲ್ಲಲೇಬೇಕೆಂಬ ನಿರ್ಧಾರ ಕೈಗೊಂಡಿದ್ದೆ. ಒಂದು ವೇಳೆ ಸೋತಿದ್ದರೆ ನನ್ನ ರಾಜಕೀಯ ಜೀವನವೇ ಮುಗಿದು ಹೋಗುತ್ತಿತ್ತು. ಯಾರ ಕೈಗೂ ಸಿಗದೇ ಹೋಗುತ್ತಿದ್ದೆ ಎಂದು ಹೇಳಿದ್ದಾರೆ.