ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಒನ್ ಮ್ಯಾನ್ ಶೋ ಆಗಿರುವ ವಿಚಾರ ಈಗಾಗಲೇ ಎಲ್ಲರಿಗೂ ಗೊತ್ತಿದೆ. ಗಿಲ್ಲಿ ಕಾಮಿಡಿ, ಕೌಂಟರ್‌ಗೆ ಪ್ರತಿ ಕೌಂಟರ್, ಇರುವ ವಿಚಾರವನ್ನು ನೇರವಾಗಿ ಹೇಳುವುದು, ಸರಿಯಾದ ಸಮಯದಲ್ಲಿ ಕೆಲ ಸ್ಪರ್ಧಿಗಳ ಪರ ನಿಲ್ಲುವ ಗಿಲ್ಲಿ ವ್ಯಕ್ತಿತ್ವಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿಯೂ ಗಿಲ್ಲಿಗೆ ಅಭಿಮಾನಿಗಳಿದ್ದು, ಕಳೆದ ವಾರ ತೆಲುಗು ಬಿಗ್ ಬಾಸ್ ವೀಕ್ಷಕರು ಕನ್ನಡ ಬಿಗ್ ಬಾಸ್ ಸ್ಪರ್ಧಿ ಗಿಲ್ಲಿಗೆ ವೋಟ್ ಹಾಕುತ್ತಿರುವ ವಿಡಿಯೋ ವೈರಲ್ ಆಗಿತ್ತು.

ಈ ನಡುವೆ ಸೂಪರ್ ಸ್ಟಾರ್ ರಜನಿಕಾಂತ್ ಕನ್ನಡ ಬಿಗ್ ಬಾಸ್ ಗಿಲ್ಲಿ ಬಗ್ಗೆ ಮಾತನಾಡಿದ್ದಾರೆ ಎನ್ನುವ ವಿಡಿಯೋ ಹಾಗೂ ಪೋಸ್ಟರ್‌ಗಳು ವೈರಲ್ ಆಗುತ್ತಿದೆ. ಈ ಪೋಸ್ಟ್‌ಗಳನ್ನು ನೋಡಿ ಗಿಲ್ಲಿ ಅಭಿಮಾನಿಗಳು ಖುಷಿ ಪಟ್ಟರೆ ಇನ್ನೂ ಕೆಲವರು ಈ ಪೋಸ್ಟ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಜೈಲರ್ 2 ಸಿನಿಮಾ ಶೂಟಿಂಗ್ ಸಮಯದಲ್ಲಿ ನಟ ರಜನಿಕಾಂತ್ ಅವರು, ನಾನು ಯಾವುದೇ ರಿಯಾಲಿಟಿ ಶೋ ನೋಡುವುದಿಲ್ಲ. ನನ್ನ ಪತ್ನಿ ಕನ್ನಡ ಬಿಗ್ ಬಾಸ್ ನೋಡುತ್ತಾರೆ. ಹೀಗಾಗಿ ಆಗಾಗ ನನಗೆ ಗಿಲ್ಲಿಯ ತಮಾಷೆ ವಿಡಿಯೋ ತೋರಿಸುತ್ತಾರೆ. ತುಂಬಾ ಎನರ್ಜಿಟಿಕ್ ಹುಡುಗ ಗಿಲ್ಲಿ ಎಂದಿದ್ದಾರೆ ಎನ್ನುವ ವಿಡಿಯೋ ವೈರಲ್ ಆಗುತ್ತಿದೆ.

ಈ ಪೋಸ್ಟ್‌ಗಳನ್ನು ನೋಡಿದ ಅನೇಕರು, ರಜನಿಕಾಂತ್ ಪತ್ನಿ ಲತಾ ಅವರು ತಮಿಳುನಾಡಿನವರು, ಅಲ್ಲಿ ಹುಟ್ಟಿ ಬೆಳೆದಿದ್ದಾರೆ. ಅವರಿಗೆ ಕನ್ನಡ ಬರುತ್ತದೆಯೇ? ಅವರು ಕನ್ನಡ ಬಿಗ್ ಬಾಸ್ ನೋಡುತ್ತಾರಾ? ಅದರಲ್ಲೂ ಸಿನಿಮಾ ಶೂಟಿಂಗ್ ಸಮಯದಲ್ಲಿ ರಜನಿಕಾಂತ್, ಯುಟ್ಯೂಬರ್ ಜೊತೆ ಮಾತನಾಡಲು ಸಾಧ್ಯವೇ ಎಂದು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಕನ್ನಡಿಗ ಗಿಲ್ಲಿ ಬಗ್ಗೆ ರಜನಿಕಾಂತ್ ಮಾತನಾಡಿದ್ದಾರೆ ಎನ್ನುವುದು ಸತ್ಯವೋ ಸುಳ್ಳೋ ಎನ್ನುವ ಅನುಮಾನ ಹುಟ್ಟುಹಾಕಿದೆ.












