ಮಧ್ಯಪ್ರದೇಶದಲ್ಲಿ ನವೆಂಬರ್ 2023ರಕ್ಕೆ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಮಧ್ಯಪ್ರದೇಶದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ವಿರುದ್ಧ ಜನರ ಅಭಿಪ್ರಾಯ ಮೂಡುತ್ತಿದ್ದು, ಅಧಿಕಾರ ಕಳೆದುಕೊಳ್ಳುವ ಭೀತಿ ಸೃಷ್ಟಿಯಾಗಿದೆ. ಕಳೆದ ಬಾರಿ ಒಟ್ಟು 230 ಸ್ಥಾನಗಳ ಪೈಕಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಿತ್ತು. ಎರಡನೇ ಸ್ಥಾನಕ್ಕೆ ಬಿಜೆಪಿ ತೃಪ್ತಿಪಟ್ಟುಕೊಂಡಿತ್ತು. ಆರಂಭದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದ್ದ ಕಮಲನಾಥ್, ಕೆಲವೇ ದಿನಗಳಲ್ಲಿ ಅಧಿಕಾರ ಕಳೆದುಕೊಂಡರು. ಆಪರೇಷನ್ ಕಮಲ ಮಾಡಿದ್ದ ಬಿಜೆಪಿ ಕಮಲ್ ನಾಥ್ ಅಧಿಕಾರ ಕಳೆದುಕೊಳ್ಳುವಂತೆ ಮಾಡಿತ್ತು. ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದ ಶಿವರಾಜ್ ಸಿಂಗ್ ಚವ್ಹಾಣ್, ಇದೀಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಬೇಕಿದೆ. ಇದಕ್ಕಾಗಿ ಭಾರೀ ಲೆಕ್ಕಾಚಾರ ಹಾಕಲಾಗ್ತಿದೆ.
22 ಜನ ಶಾಸಕರನ್ನು ಸೆಳೆದು ಅಧಿಕಾರ ಹಿಡಿದಿದ್ದ ಬಿಜೆಪಿ..!
ಮುಖ್ಯಮಂತ್ರಿ ಕಮಲ್ನಾಥ್ ವಿರುದ್ಧ ಬಂಡೆದ್ದಿದ್ದ ಜ್ಯೋತಿರಾಧಿತ್ಯ ಸಿಂಧಿಯಾ ಸೇರಿ 22 ಜನ ಶಾಸಕರು ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಇದರಲ್ಲಿ 6 ಮಂದಿ ಮಂತ್ರಿಗಳೂ ಕೂಡ ಸೇರಿದ್ದರು. ಕಡಿಮೆ ಸ್ಥಾನ ಗೆದ್ದರೂ ಮುಖ್ಯಮಂತ್ರಿ ಆಗುವಲ್ಲಿ ಶಿವರಾಜ್ ಸಿಂಗ್ ಚೌವ್ಹಾಣ್ ಯಶಸ್ವಿಯಾಗಿದ್ದರು. ಇದೀಗ ಚುನಾವಣೆಯಲ್ಲಿ ಗೆಲುವು ಕಾಣಲು ಸಾಕಷ್ಟು ಸರ್ಕಸ್ ಮಾಡ್ತಿರೋ ಶಿವರಾಜ್ ಸಿಂಗ್ ಚೌವ್ಹಾಣ್, ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವ ಗೃಹಲಕ್ಷ್ಮೀ ಯೋಜನೆಯನ್ನು ಮಧ್ಯಪ್ರದೇಶದಲ್ಲಿ ಜಾರಿ ಮಾಡಿದ್ದಾರೆ. ಪ್ರತಿ ತಿಂಗಳು ಮದುವೆಯಾದ ಮಹಿಳೆ, ವಿಚ್ಛೇದಿತೆ, ವಿಧವೆ ಸೇರಿದಂತೆ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು 1000 ಸಾವಿರ ರೂಪಾಯಿ ಧನಸಹಾಯ ಯೋಜನೆ ಜಾರಿ ಮಾಡಿದ್ದಾರೆ. ಶೀಘ್ರದಲ್ಲೇ ಆ 1 ಸಾವಿರ ಹಣ 3 ಸಾವಿರಕ್ಕೆ ಏರಿಸಲಾಗುವುದು ಎಂದು ಬಹಿರಂಗವಾಗಿ ಹೇಳಿದ್ದಾರೆ. ಇದ್ರ ಜೊತೆಗೆ ಈ ರೀತಿಯ ಮತ್ತೊಂದು ನಾಟಕ ಶುರು ಮಾಡಿದ್ದಾರೆ.
ಚುನಾವಣೆಗಾಗಿ ಮಧ್ಯಪ್ರದೇಶದಲ್ಲಿ ನಡೀತಾ ಹೈಡ್ರಾಮಾ..?
ಆದಿವಾಸಿ ಸಮುದಾಯಕ್ಕೆ ಸೇರಿದು ಕೂಲಿ ಕಾರ್ಮಿಕ ರಸ್ತೆ ಬದಿಯಲ್ಲಿ ಕುಳಿತಿದ್ದಾಗ ಅಲ್ಲಿಗೆ ಬರುವ ಬಿಜೆಪಿ ಸ್ಥಳೀಯ ನಾಯಕ ಪ್ರವೀಶ್ ಶುಕ್ಲ, ಸಿಗರೇಟ್ ಸೇದುತ್ತಾ, ಆದಿವಾಸಿ ಜನಾಂಗದ ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಾನೆ. ಈ ಘಟನೆ ಆಕಸ್ಮಿವಾಗಿ ನಡೆದಿದ್ದು ಅಲ್ಲವೇ ಅಲ್ಲ. ಕಾರಣ ಏನಂದರೆ ಈ ಘಟನೆಯನ್ನು ಚಿತ್ರೀಕರಣ ಮಾಡಲಾಗಿದೆ. 36 ವರ್ಷದ ಆದಿವಾಸಿ ಯುವಕನ ಮೇಲೆ ಮೂತ್ರ ಮಾಡಿದ ವೀಡಿಯೋ ವೈರಲ್ ಆದ ಬಳಿಕ ದೂರು ದಾಖಲು ಮಾಡಿಕೊಂಡಿರುವ ಪೊಲೀಸ್ರು, ಪ್ರವೀಶ್ ಶುಕ್ಲನನ್ನು ಅರೆಸ್ಟ್ ಮಾಡಿದ್ದಾರೆ. ಸಿದ್ಧಿ ಜಿಲ್ಲಾಡಳಿತ ಪ್ರವೀಶ್ ಶುಕ್ಲನ ಮನೆಯನ್ನು ಬುಲ್ಡೋಜರ್ನಿಂದ ನಾಶ ಮಾಡಿದ್ದಾರೆ. ಪ್ರವೀಶ್ ಶುಕ್ಲ ಕುಟುಂಬಸ್ಥರು ಕಾಡಿ ಬೇಡಿದರೂ ಬಿಡದೆ ಮನೆಯ ಕೆಲವು ಭಾಗಗಳನ್ನು ಧ್ವಂಸ ಮಾಡಿದ್ದಾರೆ.
ಚುನಾವಣೆಗೂ ಮುನ್ನ ಡ್ರಾಮಾ ಮಾಡ್ತಿರೋ ಬಿಜೆಪಿ..!!
ಮಧ್ಯಪ್ರದೇಶದಲ್ಲಿ ಆದಿವಾಸಿ ಜುನಾಂಗದ ಯುವಕನ ಮೇಲೆ ಬಿಜೆಪಿ ನಾಯಕನೇ ಮೂತ್ರ ಮಾಡುವುದು. ಆ ಬಳಿಕ ಬಿಜೆಪಿ ನಾಯಕನನ್ನು ಪೊಲೀಸ್ರು ಬಂಧನ ಮಾಡುವುದು, ಮನೆಯನ್ನು ಧ್ವಂಸ ಮಾಡುವುದು. ಇತ್ತ ಆದಿವಾಸಿ ಯುವಕನನ್ನು ಕರೆತಂದು ಪಾದ ತೊಳೆದು ಸನ್ಮಾನ ಮಾಡಿ ಕ್ಷಮಾಪಣೆ ಕೇಳುವುದು. ನಾವು ಬಡವರ ಪರವಾಗಿ ಇರುತ್ತೇನೆ ಎಂದು ಪ್ರಚಾರ ಪಡೆಯುವುದು, ಇದೆಲ್ಲವನ್ನೂ ನೋಡಿದಾಗ ಬಿಜೆಪಿ ಚುನಾವಣಾ ಗಿಮಿಕ್ಗಾಗಿ ಯೋಜಿತ ನಾಟಕ ಮಾಡುತ್ತಿದೆ ಎನ್ನಬಹುದು. ಈ ಹಿಂದೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಕೂಡ ನಾಲ್ಕೈದು ಜನ ಪೌರಕಾರ್ಮಿಕರ ಪಾದಗಳನ್ನು ತೊಳೆದಿದ್ದನ್ನು ನಾವು ನೆನಪು ಮಾಡಿಕೊಳ್ಳಬಹುದು.
ಆದಿವಾಸಿಗಳ ಮತಗಳಿಂದಲೇ 80 ಸ್ಥಾನ ಗೆಲ್ಲುವ ಅವಕಾಶ..!
ಹಾರ್ಟ್ ಆಫ್ ದಿ ಇಂಡಿಯಾ ಎಂದೇ ಕರೆಸಿಕೊಳ್ಳುವ ಮಧ್ಯಪ್ರದೇಶದಲ್ಲಿ ಆದಿವಾಸಿ, ಬುಡಕಟ್ಟು ಜನಾಂಗ ಹೆಚ್ಚಾಗಿ ವಾಸ ಮಾಡುತ್ತಾರೆ. ಕೇವಲ ಆದಿವಾಸಿ ಬುಡಕಟ್ಟು ಜನರ ಮತಗಳೇ 80ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಇದೇ ಕಾರಣಕ್ಕೆ ಬಿಜೆಪಿ ನಾಯಕರು ಇದೊಂದು ಅಸಹ್ಯಕರವಾದ ಯೋಜನೆ ರೂಪಿಸಿರುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅದೇನೇ ಇರಲಿ, ಚುನಾವಣೆಗಳು ಬರುತ್ತವೇ ಹೋಗುತ್ತವೆ. ಆಡಳಿತ ವೈಖರಿ ಹಾಗು ಅಭಿವೃದ್ಧಿ ಮೇಲೆ ಚುನಾವಣೆ ಮಾಡಬೇಕೆ ಹೊರತು, ಅಮಾನವೀಯ ಕೃತ್ಯಗಳಿಗೆ ಕುಮ್ಮಕ್ಕು ಕೊಟ್ಟು, ಅದರಿಂದ ಪ್ರಚಾರ ಪಡೆದು, ಜನರನ್ನು ಓಲೈಸಿಕೊಂಡು ಗೆಲ್ಲವುದು ನೀಚತನದ ಪರಮಾವಧಿ ಅಲ್ಲವೇ..?