ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy murder case) ಸಂಬಂಧಿಸಿದಂತೆ ಇಂದು ಬೆಂಗಳೂರಿನ 57 ನೇ ಸಿಸಿಹೆಚ್ (57th CCH court) ನ್ಯಾಯಾಲಯದಲ್ಲಿ ಆರೋಪಿಗಳ ವಿಚಾರಣೆ ನಡೆಯಲಿದೆ. ಹೌದು 57ನೇ ಸಿಸಿಹೆಚ್ ಕೋರ್ಟ್ ನಲ್ಲಿ ಈ ಕೊಲೆ ಪ್ರಕರಣದ ವಿಚಾರಣೆ ನಡೆಯಲಿದ್ದು, ಆರೋಪಿ ನಟ ದರ್ಶನ್ (Actir darsha), ಪವಿತ್ರಾಗೌಡ (Pavitra gowda) ಸೇರಿ 17 ಆರೋಪಿಗಳು ಕೋರ್ಟ್‌ಗೆ ಹಾಜರಾಗುವ ಸಾಧ್ಯತೆಗಳಿದೆ.

ಇನ್ನು ನಟ ದರ್ಶನ್ ಈಗಾಗಲೇ ಡೆವಿಲ್ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದು, ಉಳಿದ ಭಾಗದ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಬೇಕಿದೆ. ಆದ್ರೆ ಇದಕ್ಕೆ ಕೋರ್ಟ್ ಅನುಮತಿ ಅಗತ್ಯವಿತ್ತು.ಈಗಾಗ್ಲೇ ದರ್ಶನ್ ನ್ಯಾಯಾಲಯದಿಂದ ಅನುಮತಿ ಪಡೆದಿದ್ದಾರೆ.

ಹೀಗಾಗಿ ಇಂದಿನ ವಿಚಾರೇಣ್ಯ ನಂತರ ಜುಲೈ 11 ರಿಂದ 30ರವರೆಗೆ ಸಿನಿಮಾ ಶೂಟಿಂಗ್ ಗಾಗಿ ವಿದೇಶ ಪ್ರಯಾಣ ಹೋಗಲು ಕೋರ್ಟ್ ಈಗಾಗಲೇ ಅನುಮತಿ ನೀಡಿದ್ದು, ನಟ ದರ್ಶನ್ ನಾಳೆ ಡೆವಿಲ್ ಸಿನಿಮಾದ ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಲಿದ್ದಾರೆ.