• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಾವು ಸುಮ್ಮನಿರೋದಿಲ್ಲ ಅಮೆರಿಕ ಬ್ಯಾಂಕುಗಳ ಮೇಲೆ ದಾಳಿ ಮಾಡ್ತೀವಿ : ಇರಾನ್ ಸೇನೆ ಪ್ರತಿಜ್ಞೆ..

ಅಮೆರಿಕ ಮತ್ತು ಅದರ ಆಡಳಿತಕ್ಕೆ ಸೇರಿದ ನೆಲೆಗಳನ್ನು ಟಾರ್ಗೆಟ್‌ ಮಾಡಿ ನಮ್ಮ ದಾಳಿ ಮುಂದುವರೆಯಲಿದೆ ಎಂದು ಇರಾನ್‌ನ ವಕ್ತಾರರು ತಿಳಿಸಿದ್ದಾರೆ.

ಪ್ರತಿಧ್ವನಿ by ಪ್ರತಿಧ್ವನಿ
March 11, 2026
in Top Story, ಇದೀಗ, ದೇಶ, ರಾಜಕೀಯ, ವಿದೇಶ
0
ನಾವು ಸುಮ್ಮನಿರೋದಿಲ್ಲ ಅಮೆರಿಕ ಬ್ಯಾಂಕುಗಳ ಮೇಲೆ ದಾಳಿ ಮಾಡ್ತೀವಿ : ಇರಾನ್ ಸೇನೆ ಪ್ರತಿಜ್ಞೆ..
Share on WhatsAppShare on FacebookShare on Telegram

ಬೆಂಗಳೂರು : ಕಳೆದ ಫೆಬ್ರವರಿ 28 ರಂದು ಆರಂಭವಾಗಿರುವ ಇರಾನ್‌ -ಇಸ್ರೇಲ್‌ ನಡುವಿನ ಯುದ್ಧದ ತೀವ್ರತೆ ಮತ್ತಷ್ಟು ಅಧಿಕವಾಗುತ್ತಿದೆ. ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಯ ಹತ್ಯೆಯ ಬಳಿಕ ಇರಾನ್‌ ಇಸ್ರೇಲ್‌ ಹಾಗೂ ಅಮೆರಿಕದ ಸ್ಥಳಗಳಲ್ಲಿ ನಡೆಸುತ್ತಿರುವ ಪ್ರತೀಕಾರದ ದಾಳಿಯು ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳಿಗೆ ವ್ಯಾಪಿಸಿದೆ.

ADVERTISEMENT

ಪಶ್ಚಿಮ ಏಷ್ಯಾದಾದ್ಯಂತ ಅಮೆರಿಕ ಮತ್ತು ಇಸ್ರೇಲ್‌ಗೆ ಸಂಬಂಧಿಸಿದ ಆರ್ಥಿಕ ಮತ್ತು ವಸಾಹತು ಕೇಂದ್ರಗಳನ್ನು ಗುರಿಯಾಗಿಸುವುದಾಗಿ ಇರಾನ್‌ ಈಗಾಗಲೇ ಎಚ್ಚರಿಕೆ ನೀಡಿದೆ. ಅಮೆರಿಕ ಮತ್ತು ಆಡಳಿತಕ್ಕೆ ಸೇರಿದ ನೆಲೆಗಳನ್ನು ಟಾರ್ಗೆಟ್‌ ಮಾಡಿ ನಮ್ಮ ದಾಳಿ ಮುಂದುವರೆಯಲಿದೆ. ಈ ಸ್ಥಳಗಳಿಂದ 1,000 ಮೀಟರ್ ದೂರದಲ್ಲಿರುವಂತೆ ಇರಾನ್‌ನ ವಕ್ತಾರರು ತಿಳಿಸಿದ್ದಾರೆ.

ಇರಾನಿನ ಸ್ಥಳಗಳು ಹಾಗೂ ಪ್ರಮುಖ ನಗರಗಳ ಮೇಲೆ ಇಸ್ರೇಲಿ-ಅಮೆರಿಕದ ದಾಳಿಗಳ ಬಳಿಕ ನಾವು ಈ ನಿರ್ಧಾರಕ್ಜೆ ಬಂದಿದ್ದೇವೆ. ಟೆಹ್ರಾನ್‌ನ ಬ್ಯಾಂಕ್ ಮೇಲೆ ಅಮೆರಿಕ ಮತ್ತು ಇಸ್ರೇಲಿ ಪಡೆಗಳು ರಾತ್ರಿಯಿಡೀ ದಾಳಿ ನಡೆಸಿ, ಅಪಾರ ಸಂಖ್ಯೆಯ ಜನರ ಸಾವಿಗೆ ಕಾರಣವಾಗಿವೆ ಎಂದು ಇರಾನಿನ ಸಶಸ್ತ್ರ ಪಡೆ ಖತಮ್ ಅಲ್-ಅನ್ಬಿಯಾ ಪ್ರಧಾನ ಕಚೇರಿ ತಿಳಿಸಿದೆ.

ಇದನ್ನೂ ಓದಿ : MSME ನೂತನ ನೀತಿಯಿಂದ ಜಾಗತಿಕ ಮಟ್ಟದಲ್ಲಿ ರಾಜ್ಯ ಮುಂಚೂಣಿಗೆ : ರೋಹಿಣಿ ಸಿಂಧೂರಿ ವಿಶ್ವಾಸ..

ಪ್ರಮುಖವಾಗಿ ಇರಾನ್‌ನ ಈ ನಿರ್ಧಾರದಿಂದ ಸ್ಥಳೀಯ ದೇಶಗಳ ಆರ್ಥಿಕತೆಗೆ ಭಾರಿ ಪೆಟ್ಟು ನೀಡಲಿದೆ, ವಿಶೇಷವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ (UAE) ದುಬೈನ ಕಳವಳವಕ್ಕೆ ಕಾರಣವಾಗಿದೆ. ದುಬೈ ಜಾಗತಿಕವಾಗಿ ಸಾಕಷ್ಟು ಜನರನ್ನು ತನ್ನತ್ತ ಸೆಳೆಯುವ ದೇಶವಾಗಿದೆ. ಅದರಂತೆ ಗಲ್ಫ್‌ ರಾಷ್ಟ್ರಗಳು ಆರ್ಥಿಕತೆಯನ್ನು ಗಟ್ಟಿಯಾಗಿರಿಸಿಕೊಂಡಿರುತ್ತವೆ. ಆದರೆ ಈ ಯುದ್ಧ ಸನ್ನಿವೇಶದಿಂದ ನೆರೆಯ ದೇಶಗಳಾದ ಸೌದಿ ಅರೇಬಿಯಾ ಮತ್ತು ಬಹ್ರೇನ್‌ಗಳು ಆತಂಕಕ್ಕೆ ಒಳಗಾಗಿವೆ.

ಇನ್ನೂ ಈ ದೇಶಗಳು ಮಧ್ಯಪ್ರಾಚ್ಯದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವಹಿಸುವ ದೇಶಗಳಾಗಿವೆ. ಇರಾನ್ ಪರ್ಷಿಯನ್ ಕೊಲ್ಲಿಯಾದ್ಯಂತ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ವಿಸ್ತರಿಸಿದೆ. ಅಲ್ಲದೆ ವಿಶ್ವದ ಅತ್ಯಂತ ಜನನಿಬಿಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಪೈಕಿ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಡ್ರೋನ್‌ಗಳು ದಾಳಿ ಮಾಡಿ ನಾಲ್ವರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇರಾನ್ ಕೊಲ್ಲಿಯಾದ್ಯಂತ ತೈಲ ಸಾಗಾಣಿಕೆಯನ್ನು ತಡೆದಿದೆ. ಓಮನ್ ಕರಾವಳಿಯ ಹಾರ್ಮುಜ್ ಜಲಸಂಧಿಯಲ್ಲಿ ಒಂದು ಕಂಟೇನರ್ ಹಡಗಿಗೆ ಬೆಂಕಿ ಹಚ್ಚಲಾಗಿದೆ.  ಈ ಜಲಸಂಧಿಯು ಜಾಗತಿಕವಾದ ತೈಲ ಸಾಗಣೆಯ ಮಾರ್ಗಗಳಲ್ಲಿ ಪ್ರಮುಖವಾಗಿದೆ. ಇರಾನ್‌ನ ಇದನ್ನು ಮುಚ್ಚಿರುವ ಕಾರಣ ಈಗಾಗಲೇ ತೈಲ ಹಾಗೂ ಗ್ಯಾಸ್‌ ಸಿಲಿಂಡರ್‌ಗಳ ಅಭಾವ ಅಧಿಕವಾಗುತ್ತಿದೆ.

ಈ ನಡುವೆ ಇರಾನ್‌ನ ಡ್ರೋನ್‌ಗಳು ಹಾಗೂ ಕ್ಷಿಪಣಿಗಳು ವಿವಿಧ ಗಲ್ಫ್‌ ರಾಷ್ಟ್ರಗಳತ್ತ ಮುಖಮಾಡಿವೆ. ಇದಕ್ಕೆ ಪ್ರತಿಯಾಗಿ ಇರಾನ್‌ನ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಕುವೈತ್‌ ಹೇಳಿಕೊಂಡಿದೆ. ಸೌದಿ ಅರೇಬಿಯಾವು ರಾಜ್ಯದ ಶೈಬಾ ತೈಲ ಕೇಂದ್ರದ ಕಡೆಗೆ ಹಾರಿದ್ದ ಡ್ರೋನ್‌ಗಳನ್ನು ನಾಶಪಡಿಸಿದೆ. ಸೌದಿ ಮತ್ತು ಅಮೆರಿಕದ ಪಡೆಗಳು ಜಂಟಿಯಾಗಿ ನಿರ್ವಹಿಸುವ ಪ್ರಿನ್ಸ್ ಸುಲ್ತಾನ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಇರಾನ್‌ ಹಾರಿಸಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಾಶಪಡಿಸಿರುವುದಾಗಿ ಹೇಳಿವೆ.

ಈ ಎಲ್ಲ ಘಟನೆಗಳು ಪ್ರಮುಖವಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಹೆಚ್ಚಿನ ಸರಕು ಸಾಗಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿವೆ, ಇದು ಕಿರಿದಾದ ಕಡಲ ಕಾರಿಡಾರ್ ಆಗಿದ್ದು, ವಿಶ್ವದ ತೈಲ ಸಾಗಣೆಯ ಐದನೇ ಒಂದು ಭಾಗ ಇಲ್ಲಿಂದಲೇ ಹಾದುಹೋಗುತ್ತದೆ. ಇರಾನ್  ದೇಶವು ಗಲ್ಫ್, ಅರಬ್ ರಾಷ್ಟ್ರಗಳಾದ್ಯಂತ ತೈಲ ನಿಕ್ಷೇಪಗಳನ್ನು ಗುರಿಯಾಗಿಸಿಕೊಂಡಿದೆ. ಹೀಗಾಗಿ ಇರಾನ್‌ಗೆ ಶರಣಾಗುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಸಿದ್ದಾರೆ. ಅದರೂ ಡೋಂಟ್‌ ಕೇರ್‌ ಎಂದಿರುವ ದೊಡ್ಡಣ್ಣನಿಗೆ ಓಪನ್‌ ಚಾಲೆಂಜ್‌ ಹಾಕಿದ್ದು, ತನ್ನ ದೇಶವನ್ನು ರಕ್ಷಿಸಿಕೊಳ್ಳಲು ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧ ಎಂದು ಸವಾಲು ಹಾಕಿದೆ.

Tags: american presidentAmerics BanksAyotullah ali KhameneiDonald Trumpiran israel warIran Supreme LeaderKuwaitMiddle East TentionsMojtaba KhameneiPratidhvaniQatar.Retaliation strikeSaudi Arabia
Previous Post

MSME ನೂತನ ನೀತಿಯಿಂದ ಜಾಗತಿಕ ಮಟ್ಟದಲ್ಲಿ ರಾಜ್ಯ ಮುಂಚೂಣಿಗೆ : ರೋಹಿಣಿ ಸಿಂಧೂರಿ ವಿಶ್ವಾಸ..

Next Post

“ನೂತನವಾಗಿ ಆರಂಭಿಸೋಕು ಮುನ್ನ ಚಾಲ್ತಿಯಲ್ಲಿರುವ ಕಾಲೇಜುಗಳನ್ನು ಬಲಪಡಿಸಬೇಕು”

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

April 18, 2026
ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
Next Post
“ನೂತನವಾಗಿ ಆರಂಭಿಸೋಕು ಮುನ್ನ ಚಾಲ್ತಿಯಲ್ಲಿರುವ ಕಾಲೇಜುಗಳನ್ನು ಬಲಪಡಿಸಬೇಕು”

"ನೂತನವಾಗಿ ಆರಂಭಿಸೋಕು ಮುನ್ನ ಚಾಲ್ತಿಯಲ್ಲಿರುವ ಕಾಲೇಜುಗಳನ್ನು ಬಲಪಡಿಸಬೇಕು"

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada