ಇರಾನ್ನ ಅಣು ಸ್ಥಾವರಗಳ ಮೇಲೆ ಅಮೆರಿಕಾ ನಡೆಸಿದ ದಾಳಿಗೆ ಪ್ರತಿಯಾಗಿ,ಇದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಪ್ರತಿಜ್ಞೆ ಮಾಡಿದೆ. ಈ ಬಗ್ಗೆ ಖುದ್ದು ಇರಾನ್ ಅಮೆರಿಕಾಕ್ಕೆ ನೇರಾ ನೇರ ವಾರ್ನಿಂಗ್ ಕೊಟ್ಟಿದೆ. ವಿಶ್ವ ಸಂಸ್ಥೆಯ ಸಭೆಯಲ್ಲೇ ಅಮೆರಿಕಾಗೆ ಇರಾನ್ ನೇರ ಎಚ್ಚರಿಕೆ ರವಾನೆ ಮಾಡಿದೆ.

ಇರಾನ್ ರಾಯಭಾರಿ ಅಮೀರ್ ಸಯೇದ್ ಇರಾವನಿ ಈ ಎಚ್ಚರಿಕೆ ರವಾನಿಸಿದ್ದಾರೆ.ಇಸ್ರೇಲ್ ಬೆನ್ನಿಗೆ ನಿಂತು ಅಮೆರಿಕ ಇರಾನ್ ಮೇಲೆ ದಾಳಿ ಮಾಡಿದೆ.ಆ ಮೂಲಕ ಅಮೆರಿಕಾ ರಾಜ ತಾಂತ್ರಿಕ ಸಂಬಂಧವನ್ನೇ ಹಾಳು ಮಾಡಿದೆ.ಹೀಗಾಗಿ ಇರಾನ್ ಕೂಡ ಅಮೆರಿಕಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತೆ ಎಂದಿದ್ದಾರೆ.

ಆದ್ರೆ ಯಾವಾಗ, ಹೇಗೆ, ಯಾವ ಪ್ರಮಾಣದಲ್ಲಿ ಪ್ರತೀಕಾರ ಎಂಬುದನ್ನು ನಮ್ಮ ಸೇನೆ ನಿರ್ಧಾರ ಮಾಡಲಿದೆ. ಈ ಪ್ರತೀಕಾರದ ಸಮಯ, ಪ್ರಮಾಣವನ್ನ ಸೇನೆ ನಿರ್ಧಾರ ಮಾಡುತ್ತೆ ಎಂದಿದ್ದಾರೆ. ಈ ದಾಳಿಗೆ ಪ್ರತಿಯಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ನಾವು ತೆಗೆದುಕೊಳ್ಳುತ್ತೇವೆ ಎಂದು ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಇರಾನ್ ವಾರ್ನಿಂಗ್ ನೀಡಿದೆ.
 
			
 
                                 
                                