ಇಸ್ರೇಲ್ ಮೇಲೆ ಇರಾನ್ ನೂರಾರು ಕ್ಷಿಪಣಿ ದಾಳಿ ಮಾಡಿದೆ. ಇನ್ನು ಗಡಿಭಾಗದಲ್ಲೇ ಇರಾನ್ ಕ್ಷಿಪಣಿಗೆ ಇಸ್ರೇಲ್ ತಡೆಯೊಡ್ಡುತ್ತಿದೆ. ಇರಾನ್ ದಾಳಿಯಿಂದ ಕೆಂಡಾಮಂಡಲ ಆಗಿರುವ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೇತಾನ್ಯಾಹು ಇರಾನ್ ಮಾಡಿರುವುದು ಸರಿಯಲ್ಲ. ನಾವು ಯಾವುದೇ ಕಾರಣಕ್ಕೂ ಇರಾನ್‌ನನ್ನು ಕ್ಷಮಿಸಲ್ಲ ಎಂದಿದ್ದಾರೆ.
ಇಸ್ರೇಲ್ ಮೇಲೆ ಇರಾನ್ ಮಾಡಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಅಮೆರಿಕ ಇರಾನ್ಗೆ ಖಡಕ್ ಎಚ್ಚರಿಕೆ ರವಾನಿಸಿದೆ. ಕೂಡಲೇ ದಾಳಿಯನ್ನು ನಿಲ್ಲಿಸಬೇಕು. ಇಲ್ಲವಾದ್ರೆ ಮುಂದಾಗುವ ಪರಿಣಾಮಕ್ಕೆ ತಯಾರಾಗಿ ಅಂತ ಎಚ್ಚರಿಸಿದೆ. ಇತ್ತ ಬ್ರಿಟನ್ ಕೂಡ ಇಸ್ರೇಲ್ ಬೆನ್ನಿಗೆ ನಿಂತಿದ್ದು, ಯುದ್ಧದ ವಾತಾವರಣ ನಿರ್ಮಾಣವಾದ್ರೆ ನಾವು ಇಸ್ರೇಲ್ಗೆ ಸಹಾಯ ಮಾಡ್ತೀವಿ ಅಂತ ಹೇಳಿದ್ದಾರೆ.
ಇಸ್ರೇಲ್ ಹಾಗೂ ಇರಾಕ್‌ನಲ್ಲಿರೋ ಭಾರತೀಯರು ಎಚ್ಚರ ವಹಿಸುವಂತೆ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಮಧ್ಯ ಪ್ರಾಚ್ಯದಲ್ಲಿ ಸಂಘರ್ಷ ಹಿನ್ನೆಲೆ ಇರಾನ್ ಮತ್ತು ಇಸ್ರೇಲ್‌ನಲ್ಲಿರೋ ಭಾರತೀಯರು ಎಚ್ಚರಿಕೆಯಿಂದ ಇರಬೇಕು. ತೀರಾ ಅನಿವಾರ್ಯತೆ ಇದ್ದರೆ ಮಾತ್ರ ಹೊರಗೆ ಬನ್ನಿ. ಅಲ್ಲದೆ ಭಾರತೀಯ ರಾಯಭಾರಿ ಕಚೇರಿ ಜೊತೆ ಸಂಪರ್ಕದಲ್ಲಿ ಇರಬೇಕು ಅಂತ ಸಲಹೆ ನೀಡಿದೆ.
ಈ ಎಲ್ಲಾ ಬೆಳವಣಿಗೆ ಮಧ್ಯೆ ವಿಶ್ವಸಂಸ್ಥೆ ತುರ್ತು ಸಭೆ ಕರೆದಿದೆ. ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇದೆ.