17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(Indian Premier League) ಆರಂಭಕ್ಕೆ ತಯಾರಿ ಆರಂಭವಾಗಿದ್ದು, ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್(Cricket League) ಎನಿಸಿಕೊಂಡಿರುವ ಚುಟುಕು ಕ್ರಿಕೆಟ್ ಮಹಾಸಮರ ಚೆನ್ನೈನಿಂದ ಆರಂಭಗೊಳ್ಳುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಈ ಬಾರಿಯ ಐಪಿಎಲ್ ಟೂರ್ನಿ ಮಾರ್ಚ್ 22ರಿಂದ ಆರಂಭಗೊಳ್ಳಲಿದೆ ಎನ್ನಲಾಗಿದೆ.
ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್(Arun Singh Dhumal) ಅವರು ಇತ್ತೀಚಿಗೆ ನೀಡಿರುವ ಮಾಹಿತಿಯಂತೆ 2024ರ ಐಪಿಎಲ್(IPL) ಟೂರ್ನಿಯೂ ಮಾರ್ಚ್ 22ರಿಂದ ಆರಂಭಗೊಳ್ಳುವ ಸಾಧ್ಯತೆ ಇದ್ದು, ಟೂರ್ನಿಯ ಉದ್ಘಾಟನಾ ಪಂದ್ಯ ಚೆನ್ನೈನಲ್ಲಿ ನಡೆಯುವ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್(CSK) ತಂಡ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಆದರೆ CSK ತಂಡ ಯಾವ ತಂಡವನ್ನ ಎದುರಿಸಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ.
ಈ ನಡುವೆ 2024ರ ಐಪಿಎಲ್ ಟೂರ್ನಿ ಸಂದರ್ಭದಲ್ಲಿ ಲೋಕಸಭಾ ಚುನಾವಣೆ(Loka Saba Election) ಕೂಡ ನಡೆಯುವ ಸಾಧ್ಯತೆ ಇರುವುದರಿಂದ ಚುನಾವಣೆಯ ದಿನಾಂಕವನ್ನು ಗಮನದಲ್ಲಿಟ್ಟುಕೊಂಡು ಟೂರ್ನಿಯನ್ನು ಆಯೋಜಿಸುವ ಬಗ್ಗೆ ಚಿಂತನೆ ನಡೆದಿದ್ದು, ಮೂಲಗಳ ಪ್ರಕಾರ 2024ರ ಐಪಿಎಲ್ ಟೂರ್ನಿಯ ಆರಂಭಿಕ 15 ದಿನಗಳ ವೇಳಾಪಟ್ಟಿಯನ್ನು ಇಂದು(ಫೆ.22) ಬಿಸಿಸಿಐ(BCCI) ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಪ್ರಸಕ್ತ ವರ್ಷದ ಐಪಿಎಲ್ ಟೂರ್ನಿಗೆ ಉದ್ಘಾಟನಾ ಸಮಾರಂಭ ನಡೆಸುವ ಸಾಧ್ಯತೆ ಇದ್ದು, ಸದ್ಯ ಲಭಿಸಿರುವ ಮಾಹಿತಿಗಳ ಪ್ರಕಾರ ಮೇ 26ರಂದು 2024ರ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ ನಡೆಯುವ ಸಾಧ್ಯತೆ ಇದೆ.
#IPL2024 #BCCI #CSK #MSDhoni #ChennaiSuperKings #IndianPremierLeague