ನವದೆಹಲಿ: ಡೆಲ್ಲಿ ವಿರುದ್ಧ ಮತ್ತೊಮ್ಮೆ ದಾಖಲೆಯ ಟಾರ್ಗೆಟ್ ನೀಡಿ, ಹೈದರಾಬಾದ್ ತಂಡವು ಭರ್ಜರಿ ಜಯ ಸಾಧಿಸಿದೆ.
ಈ ಮೂಲಕ ಒಂದೇ ಟೂರ್ನಿಯಲ್ಲಿ ಹೈದರಾಬಾದ್ ತಂಡ ಬರೋಬ್ಬರಿ ನಾಲ್ಕು ಬಾರಿ 250ಕ್ಕೂ ಅಧಿಕ ರನ್ ಗಳಿಸಿದ ದಾಖಲೆ ಬರೆದಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ 67 ರನ್ ಗಳ ಜಯ ಸಾಧಿಸಿದೆ. ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಸ್ಪೋಟಕ ಬ್ಯಾಟಿಂಗ್ನಿಂದ 6 ಓವರ್ಗಳಲ್ಲಿ 125 ರನ್ಗಳನ್ನು ಕಲೆ ಹಾಕಿ ಭರ್ಜರಿ ಆರಂಭ ನೀಡಿದರು.
ಟ್ರಾವಿಸ್ ಹೆಡ್ 32 ಎಸೆತಗಳಲ್ಲಿ 11 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 89 ರನ್ ಗಳಿಸಿದರೆ, ಶಹಬಾಜ್ 29 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 59 ರನ್ ಗಳಿಸಿದರು. ಈ ಮೂಲಕ ನಿಗದಿತ ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಎದುರಾಳಿ ತಂಡದ ಗೆಲುವಿಗೆ 267 ರನ್ಗಳ ಗುರಿ ನೀಡಿತು. ಡೆಲ್ಲಿ ವಿರುದ್ಧ ಈ ಹಿಂದೆ ಆಡಿದ್ದ ಪಂದ್ಯದಲ್ಲಿ ಕೂಡ ಹೈದರಾಬಾದ್ 250 ರನ್ ಗಳಿಸಿತ್ತು.
ಈ ಕಠಿಣ ಗುರಿ ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ 19.1 ಓವರ್ಗಳಲ್ಲಿ 199 ರನ್ ಕಲೆ ಹಾಕಿ ಸೋಲೋಪ್ಪಿಕೊಂಡಿತು. ಡೆಲ್ಲಿ ಕ್ಯಾಪಿಟಲ್ಸ್ ಪರ 18 ಎಸೆತಗಳಲ್ಲಿ ಜಾಕ್ ಫ್ರೇಸರ್ ಮೆಕ್ಗುರ್ಕ್ 7 ಸಿಕ್ಸರ್ ಹಾಗೂ 5 ಬೌಂಡರಿ ಸಿಡಿಸಿ 65 ರನ್ ಕಲೆ ಹಾಕಿ ವಿಕೆಟ್ ಒಪ್ಪಿಸಿದರು. ರಿಷಬ್ ಪಂತ್ 35 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಬೌಂಡರಿಗಳ ನೆರವಿನಿಂದ 44 ರನ್ ಗಳಿಸಿದರು. ಅಭಿಷೇಕ್ ಶರ್ಮಾ 12 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 2 ಬೌಂಡರಿ ನೆರವಿನಿಂದ 46 ರನ್ ಗಳಿಸಿ ಮಿಂಚಿದರು. ನಿತೀಶ್ ಕುಮಾರ್ ರೆಡ್ಡಿ 27 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 2 ಬೌಂಡರಿ ನೆರವಿನಿಂದ 37 ರನ್ ಗಳಿಸಿದರು. ಡೆಲ್ಲಿ ಪರ ಕುಲ್ದೀಪ್ ಯಾದವ್ 55 ರನ್ ನೀಡಿ 4 ವಿಕೆಟ್, ಮುಕೇಶ್ ಕುಮಾರ್ 57 ರನ್ ನೀಡಿ 1 ವಿಕೆಟ್ ಹಾಗೂ ಅಕ್ಸರ್ ಪಟೇಲ್ 1 ವಿಕೆಟ್ ಉರುಳಿಸಿದರು.