ಐಪಿಎಲ್ ಸೀಸನ್ 17 ರ ಲೀಗ್ ಪಂದ್ಯದಲ್ಲಿ KKR ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಬಗ್ಗುಬಡಿದು ದಿಗ್ವಿಜಯ ಸಾಧಿಸಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಕಲ್ಕತ್ತಾ ತಂಡದ ಸಾಂಘಿಕ ಪ್ರದರ್ಶನ ಗಮನ ಸೆಳೆಯಿತು. ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡ 19.5 ಓವರ್ಗಳಿಗೆ 169 ರನ್ಗಳಿಗೆ ಆಲ್ಔಟ್ ಆಯಿತು. ಮನೀಷ್ ಪಾಂಡೆ 42 ರನ್, ವೆಂಕಟೇಶ್ ಅಯ್ಯರ್ 70 ರನ್ ಗಳಿಸಿದರು. ಜಸ್ಪ್ರೀತ್ ಬುಮ್ರಾ ಹಾಗೂ ನುವಾನ್ ತುಷಾರ ತಲಾ 3 ವಿಕೆಟ್ ಪಡೆದರು.
ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ಆರಂಭ ಮಾಡಿದ ಮುಂಬೈ ತಂಡಕ್ಕೆ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಉತ್ತಮ ಆರಂಭ ಕೊಡಲಿಲ್ಲ . ಸೂರ್ಯಕುಮಾರ್ ಯಾದವ್ 56 ರನ್ ಸಿಡಿಸಿದ್ರು.
ಉಳಿದಂತೆ ಮತ್ತೊಂದು ಬದಿಯಿಂದ ಸೂಕ್ತ ಸಹಕಾರ ಸಿಗಲಿಲ್ಲ . KKR ತಂಡದ ಕರಾರುವಾಕ್ ದಾಳಿಗೆ ಮುಂವೈ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದ್ರು . ಮಿಚೆಲ್ ಸ್ಟಾರ್ಕ್ 4 ವಿಕೆಟ್ ಕಬಳಿಸಿ ಶ್ರೇಷ್ಠ ಬೌಲರ್ ಎನಿಸಿಕೊಂಡರು.
ಐಪಿಎಲ್ ಸೀಸನ್ 17 ಸದ್ಯ ರೋಚಕ ಘಟ್ಟ ತಲುಪಿದೆ. 16 ಅಂಕಗಳೊಂದಿಗೆ ರಾಜಸ್ಥಾನ ರಾಯಲ್ಸ್ ತಂಡ ಅಗ್ರಸ್ಥಾನ ಕಾಯ್ದುಕೊಂಡಿದೆ. RCB ಕೊನೆ ಸ್ಥಾನದಲ್ಲಿದೆ KKR ದ್ವಿತೀಯ, LSG ತೃತೀಯ ಹಾಗೂ SRH 4ನೇ ಸ್ಥಾನದಲ್ಲಿದೆ.