• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, August 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಐಫೋನ್ EMI ಜಗಳಕ್ಕೆ ಕುಟುಂಬ ಬ** ಕೇಸ್‌ಗೆ ಬಿಗ್‌ ಟ್ವಿಸ್ಟ್‌: ಮೂವರ ಸಾವಿಗೆ ಅಸಲಿ ಕಾರಣವೇನು..?

ಪ್ರತಿಧ್ವನಿ by ಪ್ರತಿಧ್ವನಿ
August 23, 2026
in Top Story, ದೇಶ
0
ಐಫೋನ್ EMI ಜಗಳಕ್ಕೆ ಕುಟುಂಬ ಬ** ಕೇಸ್‌ಗೆ ಬಿಗ್‌ ಟ್ವಿಸ್ಟ್‌: ಮೂವರ ಸಾವಿಗೆ ಅಸಲಿ ಕಾರಣವೇನು..?
Share on WhatsAppShare on FacebookShare on Telegram

ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಖವಲ್ಯಾ ಡೊಂಗರ್‌ನಲ್ಲಿ ಒಂದೇ ಕುಟುಂಬದ ಮೂವರು ಬೆಟ್ಟದಿಂದ ಬಿದ್ದು ಮೃತಪಟ್ಟ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಮಗ ಕ್ರುನಾಲ್, ತಂದೆ ಹಾಗೂ ತಾಯಿ ಸಾವನ್ನಪ್ಪಿದ ಘಟನೆಗೆ ಐಫೋನ್‌ ಇಎಂಐ ಪಾವತಿ ಕಾರಣ ಎಂಬ ವದಂತಿಯನ್ನು ಮೃತರ ಸಂಬಂಧಿಕರು ತಳ್ಳಿಹಾಕಿದ್ದಾರೆ.

ADVERTISEMENT
Rahul Gandhi Connects With Youth In Pune :ಮಹಿಳೆಯರಲ್ಲಿ ಯಾಕೆ ಭಯ ಹೆಚ್ಚಿರುತ್ತರದೆ..? ಯುವತಿ ಬಿಚ್ಚಿಟ್ಟ ಸತ್ಯ

ಆರಂಭದಲ್ಲಿ, ಐಫೋನ್‌ನ ಇಎಂಐ ಪಾವತಿಸುವ ವಿಚಾರದಲ್ಲಿ ಕ್ರುನಾಲ್ ಮತ್ತು ಆತನ ಪೋಷಕರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದರಿಂದ ಬೇಸರಗೊಂಡ ಕ್ರುನಾಲ್ ಖವಲ್ಯಾ ಡೊಂಗರ್‌ಗೆ ತೆರಳಿ ಬೆಟ್ಟದಿಂದ ಜಿಗಿಯಲು ಮುಂದಾಗಿದ್ದಾನೆ. ಆತನನ್ನು ತಡೆಯಲು ತಂದೆ ಪ್ರಯತ್ನಿಸಿದಾಗ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಈ ದೃಶ್ಯ ಕಂಡ ತಾಯಿ ಸಂಗೀತಾ ಕೂಡ ಬೆಟ್ಟದಿಂದ ಹಾರಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು.

ಆದರೆ ಇದೀಗ ಕ್ರುನಾಲ್ ಮಾವ ಗಣೇಶ್ ಜರಾದ್ ಅವರು ಈ ಘಟನೆಗೆ ಐಫೋನ್‌ ಇಎಂಐ ಯಾವುದೇ ಕಾರಣವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮನೆಯಲ್ಲಿನ ಪೋಷಕರ ನಡುವಿನ ನಿರಂತರ ಜಗಳದಿಂದ ಕ್ರುನಾಲ್ ಮಾನಸಿಕವಾಗಿ ಬೇಸರಗೊಂಡಿದ್ದ. ಅವರಿಬ್ಬರ ನಡುವಿನ ಜಗಳವನ್ನು ನಿಲ್ಲಿಸಲು ಅಥವಾ ಹೆದರಿಸಲು ಕ್ರುನಾಲ್ ಈ ರೀತಿಯ ಕಠಿಣ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಅವರು ಹೇಳಿದ್ದಾರೆ.

Rahul Gandhi Connects With Youth In Pune : ಮಹಿಳೆಯರು ಸ್ವಾವಲಂಬಿಯಾಗಬಾರದು ಅಂತ ಹೇಳೋದು ಮನುಸ್ಮೃತಿ..!

ಕ್ರುನಾಲ್ ಕುಟುಂಬ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿತ್ತು. ಮಗನಿಗೆ ಈಗಾಗಲೇ ಐಫೋನ್‌ ಖರೀದಿಸಿಕೊಡಲಾಗಿತ್ತು. ಅಲ್ಲದೇ ಕ್ರುನಾಲ್‌ ನೀಟ್‌ ತರಬೇತಿ ಪಡೆಯುತ್ತಿದ್ದಿದ್ದು, ಅದಕ್ಕೆ ಬೇಕಾದ ಶುಲ್ಕವನ್ನೂ ಪೋಷಕರು ಪಾವತಿಸಿದ್ದರು. ಹೀಗಾಗಿ ಇಎಂಐ ಪಾವತಿಸಲು ಹಣ ನೀಡದ ಕಾರಣಕ್ಕೆ ಆತ ಈ ನಿರ್ಧಾರ ತೆಗೆದುಕೊಂಡಿದ್ದಾನೆ ಎಂಬುದು ಸರಿಯಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ.

Rahul Gandhi Connects With Youth In Pune : ಪುಣೆಯಲ್ಲಿ ರಾಹುಲ್‌ ಗಾಂಧಿ ಹವಾ ನೋಡಿ ಹೇಗಿದೆ..! #Pune,

ಓದಿನಲ್ಲಿ ಮುಂದಿದ್ದ ಕ್ರುನಾಲ್ 10ನೇ ತರಗತಿ ಪರೀಕ್ಷೆಯಲ್ಲಿ ಶೇ.92ರಷ್ಟು ಅಂಕಗಳನ್ನು ಗಳಿಸಿದ್ದ. ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ಆಸೆಯಿಂದ ಪೋಷಕರು ಆತನ ವಿದ್ಯಾಭ್ಯಾಸಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಘಟನೆಯ ನಿಖರ ಕಾರಣದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಈ ಪ್ರಕರಣ ಇದೀಗ ಹೊಸ ಆಯಾಮ ಪಡೆದುಕೊಂಡಿದ್ದು, ತನಿಖೆಯ ಬಳಿಕ ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆಯಿದೆ.

Previous Post

ರಾಜ್ಯದಲ್ಲಿ ಏಕಾಏಕಿ ಹೆಚ್ಚಿದ H1N1 ಪ್ರಕರಣಗಳು: ಆರೋಗ್ಯ ಇಲಾಖೆ ಕಟ್ಟೆಚ್ಚರ

Next Post

ಸ್ವಚ್ಛ ಬೆಂಗಳೂರು: ಬೆಸ್ಕಾಂನಿಂದ ವಾರಾಂತ್ಯದ ವಿಶೇಷ ಅಭಿಯಾನ

Related Posts

ಕೆಲಸದ ಒತ್ತಡ ನಿವಾರಣೆಗೆ ಕ್ರೀಡೆ ಅಗತ್ಯ: ‘ಎಲ್ಲರೂ ಒಂದಾಗಿ ಸೇರೋಣ, ಜೊತೆಯಾಗಿ ಆಡೋಣ’ ಎಂದ ಕೆ.ವಿ. ಪ್ರಭಾಕರ್
Top Story

ಕೆಲಸದ ಒತ್ತಡ ನಿವಾರಣೆಗೆ ಕ್ರೀಡೆ ಅಗತ್ಯ: ‘ಎಲ್ಲರೂ ಒಂದಾಗಿ ಸೇರೋಣ, ಜೊತೆಯಾಗಿ ಆಡೋಣ’ ಎಂದ ಕೆ.ವಿ. ಪ್ರಭಾಕರ್

by ಪ್ರತಿಧ್ವನಿ
August 23, 2026
0

ಬೆಂಗಳೂರು: ಮಾಧ್ಯಮ ಕ್ಷೇತ್ರದಲ್ಲಿ ಸದಾ ಕೆಲಸದ ಒತ್ತಡದಲ್ಲಿರುವ ಪತ್ರಕರ್ತರಿಗೆ ಕ್ರೀಡೆಯ ಮೂಲಕ ಕೊಂಚ ವಿರಾಮ ಹಾಗೂ ಮನರಂಜನೆ ಒದಗಿಸುವ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ಬಿ ಝೆಡ್ ಕಪ್ ಮೀಡಿಯಾ...

Read moreDetails
ಬೆಂಗಳೂರಿನಲ್ಲಿ ‘ಕ್ಲೀನ್ ಅಪ್’ ಅಭಿಯಾನಕ್ಕೆ ವೇಗ: ಬೆಸ್ಕಾಂನಿಂದ ಶೇ.80ರಷ್ಟು ತೆರವು ಕಾರ್ಯ ಪೂರ್ಣ

ಬೆಂಗಳೂರಿನಲ್ಲಿ ‘ಕ್ಲೀನ್ ಅಪ್’ ಅಭಿಯಾನಕ್ಕೆ ವೇಗ: ಬೆಸ್ಕಾಂನಿಂದ ಶೇ.80ರಷ್ಟು ತೆರವು ಕಾರ್ಯ ಪೂರ್ಣ

August 23, 2026
ಸಾವಿನ ಬಳಿಕ ವೃದ್ಧೆಯ ಮನೆಯಲ್ಲಿ ಶಾಕ್‌! ಭಿಕ್ಷೆ ಬೇಡಿ ಕೂಡಿಟ್ಟಿದ್ದ ಹಣ ನೋಡಿ ಬೆಚ್ಚಿಬಿದ್ದ ಜನ 

ಸಾವಿನ ಬಳಿಕ ವೃದ್ಧೆಯ ಮನೆಯಲ್ಲಿ ಶಾಕ್‌! ಭಿಕ್ಷೆ ಬೇಡಿ ಕೂಡಿಟ್ಟಿದ್ದ ಹಣ ನೋಡಿ ಬೆಚ್ಚಿಬಿದ್ದ ಜನ 

August 23, 2026
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ನಾಪತ್ತೆ ವದಂತಿಗೆ ತೆರೆ: ‘ನಾನು ಸುರಕ್ಷಿತವಾಗಿದ್ದೇನೆ’ ಎಂದ ಅಧಿಕಾರಿ

IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ನಾಪತ್ತೆ ವದಂತಿಗೆ ತೆರೆ: ‘ನಾನು ಸುರಕ್ಷಿತವಾಗಿದ್ದೇನೆ’ ಎಂದ ಅಧಿಕಾರಿ

August 23, 2026
‘ಟಾಕ್ಸಿಕ್’ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅವಘಡ: FIR ದಾಖಲು

‘ಟಾಕ್ಸಿಕ್’ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅವಘಡ: FIR ದಾಖಲು

August 23, 2026
Next Post
ಸ್ವಚ್ಛ ಬೆಂಗಳೂರು: ಬೆಸ್ಕಾಂನಿಂದ ವಾರಾಂತ್ಯದ ವಿಶೇಷ ಅಭಿಯಾನ

ಸ್ವಚ್ಛ ಬೆಂಗಳೂರು: ಬೆಸ್ಕಾಂನಿಂದ ವಾರಾಂತ್ಯದ ವಿಶೇಷ ಅಭಿಯಾನ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada