ಅಮೆರಿಕಾ ಮೂಲದ ಪ್ರಮುಖ ಪೋನ್ ತಯಾರಿಕಾ ಕಂಪನಿ ಆಪಲ್ ಬಹು ನಿರೀಕ್ಷಿತ ಐಪೋನ್ 14 ಸರಣಿಯನ್ನ ಅನಾವರಣಗೊಳಿಸಿದೆ. ಫೋನ್ನ ಜೊತೆಗೆ ಹೊಸ ವಾಚ್ ಹಾಗೂ ಏರ್ ಪಾಡ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಬುಧವಾರ ತಡರಾತ್ರಿ ಕ್ಯಾಲಿಫೋರ್ನಿಯಾದಲ್ಲಿ ಆಯೋಜಿಸಿದ ಫಾರ್ ಔಟ್ ಕಾರ್ಯಕ್ರಮದ ಮೂಲಕ ಐಫೋನ್ 14 ಸರಣಿಯ 4 ಹೊಸ ಮೊಬೈಲ್ಗಳನ್ನು ಕಂಪನಿ ಅಧಿಕೃತವಾಗಿ ಮಾರುಕಟ್ಟೆಗೆ ಪರಿಚಯಿಸಿದೆ.
ಸದ್ಯ ಐಫೋನ್ 14, 14 ಪ್ಲಸ್, 14 ಪ್ರೋ, 14 ಪ್ರೋ ಮ್ಯಾಕ್ಸ್ ಫೋನ್ಗಳನ್ನು ಕಂಪನಿಯ ಸಿಇಒ ಟಿಮ್ ಕುಕ್ ಅನಾವರಣಗೊಳಿಸಿದ್ದಾರೆ.
