ವಿಧಾನಸಭೆ ಸದನದಲ್ಲಿ (Budget session) ಬೀದಿ ನಾಯಿಗಳು (Street dogs) ಹಾಗೂ ನಾಗರ ಹಾವುಗಳ (Snakes) ಬಗ್ಗೆ ಇಂದು ಚರ್ಚೆಯಾಗಿದೆ. ಸದನದ ಶೂನ್ಯವೇಳೆಯಲ್ಲಿ ಈ ಬಗ್ಗೆ ಬಿಜೆಪಿ ಶಾಸಕ ಸತೀಶ್ ರೆಡ್ಡಿ (MLA Satish reddy) ಪ್ರಸ್ತಾಪ ಮಾಡಿದ್ದಾರೆ. ಇತ್ತೀಚೆಗೆ ಮನುಷ್ಯರಿಗಿಂತ ನಾಯಿಗಳಿಗೆ ಜಾಸ್ತಿ ಕಾನೂನು ಹಾಗೂ ರಕ್ಷಣೆ ಸಿಗುತ್ತಿದೆ ಎಂದು ಶಾಸಕ ಸತೀಶ್ ರೆಡ್ಡಿ ಹೇಳಿದ್ದಾರೆ.

ನಮ್ಮ ನಗರದಲ್ಲಿ ಬೀದಿಗಳಲ್ಲಿರುವ ನಾಯಿಗಳನ್ನು ಅಪಾರ್ಟ್ಮೆಂಟ್ ಒಳಗೆ ಕರೆದುಕೊಂಡು ಬಂದು ಲಿಫ್ಟ್ ನಲ್ಲಿ ಕರೆದೊಯ್ಯಲಾಗ್ತಿದೆ. ಅಷ್ಟೇ ಅಲ್ಲದೆ ಮಕ್ಕಳಿಗೆ ಕಚ್ಚಿದ ಪ್ರಕರಣ ನಡೆದಿದೆ. ನಾವು ನಾಯಿ ಪ್ರೇಮಿಗಳೇ.ಆದರೆ ತಮ್ಮ ಕ್ಷೇತ್ರದ ಮಹಿಳೆಯೊಬ್ಬರು ಅಪಾರ್ಟ್ಮೆಂಟ್ ಕಾಪೌಂಡ್ ಒಳಗಡೆ ಕರೆದುಕೊಂಡು ಬಂದು ತೊಂದರೆ ಕೊಡುತ್ತಿದ್ದಾರೆ,ಈ ಬಗ್ಗೆ ದೂರು ಕೊಟ್ಟರೂ ಬಿಬಿಎಂಪಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.
ಇದನ್ನು ಹೀಗೆ ಬಿಟ್ಟರೆ ನಾಳೆ ಮತ್ತೊಬ್ಬರು ಕೋತಿ ತಂದು ಸಾಕ್ತಾರೆ, ಹಸು ಸಾಕ್ತಾರೆ.ಇದನ್ನು ತಡೆಯಬೇಕಾದ ಅಗತ್ಯ ಇದೆ ಎಂದು ಸತೀಶ್ ರೆಡ್ಡಿ ಹೇಳಿದ್ದಾರೆ. ಇದಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕೂಡ ಧ್ವನಿಗೂಡಿಸಿದ್ದಾರೆ.

ಈ ಬೀದಿ ನಾಯಿಗಳು ಬೀದಿಯಲ್ಲಿ ಇರಲಿ.ಅಪಾರ್ಟ್ಮೆಂಟ್ ಗೆ ತೆಗೆದುಕೊಂಡು ಹೋಗುವ ಅಗತ್ಯ ಇಲ್ಲ ಎಂದಿದ್ದಾರೆ. ಇದೇ ಸಮಯಕ್ಕೆ ಸರಿಯಾಗಿ,ನಾಯಿ ಅಲ್ಲ, ವಿಧಾನಸೌಧದಲ್ಲಿ ನಾಗರಹಾವು ಬಂದಿದೆ ಎಂದು ಜೆಡಿಎಸ್ ಸದಸ್ಯರು ಕೂಡ ಬೊಬ್ಬೆ ಹಾಕಿದ್ದಾರೆ.ಈ ವೇಳೆ ನಾಗರ ಹಾವು ಬೇಕು, ಅದನ್ನು ಬೇಡ ಎಂದು ಹೇಳಬೇಡಿ. ಚಿನ್ನದ ನಿಧಿಯನ್ನು ಕಾಯೋದೇ ಅದು ಎಂದು ಸ್ಪೀಕರ್ ನಗೆ ಚಟಾಕಿ ಹಾರಿಸಿದ್ದಾರೆ.