ಬೆಂಗಳೂರು: ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ತೀವ್ರವಾಗಿದೆ. 4,800 ಕಿ.ಮೀ ದೂರದಲ್ಲಿ ಯುದ್ಧ ನಡೆಯುತ್ತಿದ್ದು, ಬೆಂಗಳೂರಿನಲ್ಲಿರುವ ಇಸ್ರೇಲ್ ನ ರಾಯಭಾರ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಆತ್ಮೀಯರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ತಮ್ಮ ನಿವೃತ್ತ ಪೋಷಕರು ಮತ್ತು ಮನೆಗೆ ಮರಳಿದ ಇತರ ಕುಟುಂಬ ಸದಸ್ಯರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ರಾಕೆಟ್‌ಗಳು ಹಾರಿಹೋಗುವುದನ್ನು ಮತ್ತು ಕಟ್ಟಡಗಳಿಗೆ ಅಪ್ಪಳಿಸುತ್ತಿರುವುದು ಮತ್ತು ಅಲ್ಲಿ ಭಯೋತ್ಪಾದಕರ ಅಟ್ಟಹಾಸ ನೋಡಿ ಭಯ, ಆತಂಕವಾಗುತ್ತಿದೆ ಎಂದು ಅಳುತ್ತಾ ಹೇಳುತ್ತಾರೆ.
ಯುದ್ಧವು ಇಸ್ರೇಲ್‌ಗೆ ಹೊಸದಲ್ಲ. ನಾವು ದೇಶದ ಪ್ರತಿಯೊಂದು ಮನೆ ಅಥವಾ ಅಪಾರ್ಟ್‌ಮೆಂಟ್‌ನಲ್ಲಿ ಪ್ರತ್ಯೇಕ ಬಾಂಬ್ ಶೆಲ್ಟರ್ ನ್ನು ನಿರ್ಮಿಸಬೇಕಾಗಿದೆ. ಇದು ಕಡ್ಡಾಯವಾಗಿದೆ. ಕಟ್ಟಡದ ಮೇಲೆ ಬಾಂಬ್ ದಾಳಿ ನಡೆದರೂ ಜನರು ಸುರಕ್ಷಿತವಾಗಿರುವುದನ್ನು ಇದು ಖಚಿತಪಡಿಸುತ್ತದೆ. ಸೈರನ್ ಮೊಳಗಿದ ತಕ್ಷಣ, ಜನರು ಸುರಕ್ಷಿತ ಸ್ಥಳಕ್ಕೆ ಹೋಗುತ್ತಾರೆ. ಇಸ್ರೇಲ್‌ನಲ್ಲಿ ನೆಲೆಸಿರುವ ಎಲ್ಲಾ ಜನರು, ನನ್ನ ಪೋಷಕರೂ ಸಹ ಯುದ್ಧ ಪ್ರಾರಂಭವಾದಾಗಿನಿಂದ ಇದನ್ನು ಮಾಡುತ್ತಿದ್ದಾರೆ ಎಂದರು.
ಹಮಾಸ್ ಉಗ್ರರು, ಆರು ತಿಂಗಳವರೆಗೆ ಮಹಿಳೆಯರು ಮತ್ತು ಮಕ್ಕಳನ್ನು ಒತ್ತೆಯಾಳಾಗಿ ಇರಿಸಿದೆ ಎನ್ನುತ್ತಾರೆ. ಜಗತ್ತು ತಿಳಿಯಬೇಕು. ಸರ್ಕಾರ ಮತ್ತು ರಾಯಭಾರ ಕಚೇರಿ ನಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಂದೇಶ ಸ್ಪಷ್ಟವಾಗಿತ್ತು. ಸಮಾಜದ ಎಲ್ಲಾ ವರ್ಗದ ಜನರು ನಮ್ಮ ಪರ ನಿಂತಿದ್ದಾರೆ ಎನ್ನುತ್ತಾರೆ.