ಬೆಂಗಳೂರು: ಪಶ್ಚಿಮ ವಿಭಾಗದ ಕೆಪಿ ಅಗ್ರಹಾರ ಇನ್ಸ್ಪೆಕ್ಟರ್ ಗೋವಿಂದರಾಜು ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ನಿನ್ನೆ ಸಂಜೆ ಸಿರ್ಸಿ ಸರ್ಕಲ್ ನಲ್ಲಿ ವ್ಯಕ್ತಿಯೊಬ್ಬರಿಂದ 4 ಲಕ್ಷ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಗೋವಿಂದರಾಜು ಲೋಕಾಯುಕ್ತ ಟ್ರ್ಯಾಪ್ ಗೆ ಒಳಗಾಗಿದ್ದಾರೆ.
ತಮ್ಮ ಠಾಣೆಯಲ್ಲಿ ಬಡ್ಸ್ ಆಕ್ಟ್ ಅಡಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿಗಳ ಪರಿಚಯಸ್ಥ ವ್ಯಕ್ತಿಯೊಬ್ಬರನ್ನ ಆರೋಪಿ ಮಾಡದಿರಲು ಇನ್ಸ್ಪೆಕ್ಟರ್ ಐದು ಲಕ್ಷ ಲಂಚ
ಕೇಳಿದ್ದರು. ಐದು ಲಕ್ಷದಲ್ಲಿ ಒಂದು ಲಕ್ಷ ಹಣ ಅಡ್ವಾನ್ಸ್ ಕೂಡ ಪಡೆದಿದ್ದರು. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ನಿನ್ನೆ ಸಂಜೆ ಮತ್ತೆ ನಾಲ್ಕು ಲಕ್ಷ ಪಡೆದುಕೊಳ್ಳಲು ಇನ್ಸ್ಪೆಕ್ಟರ್ ಮುಂದಾದಾಗ ಸಿಕ್ಕಿಬಿದ್ದಿದ್ದಾರೆ.
ಇನ್ನು ಇನ್ಸ್ಪೆಕ್ಟರ್ ಗೋವಿಂದರಾಜು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿರುವ ವಿಡಿಯೋ ವೈರಲ್ ಆಗಿದೆ.











