ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಭರದಿಂದ ಸಾಗಿದೆ. ಅಧಿಕಾರ ಉಳಿಸಿಕೊಳ್ಳುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ಆಘಾತ ಉಂಟಾಗುತ್ತಿದೆ. ಘಟಾನುಘಟಿ ಸಚಿವರೇ ತಮ್ಮ ಕ್ಷೇತ್ರಗಳಲ್ಲಿ ಹಿನ್ನಡೆ ಸಾಧಿಸುತ್ತಿದ್ದು ಕಾಂಗ್ರೆಸ್ 100ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಸಧ್ಯಕ್ಕಿರುವ ಮಾಹಿತಿಯ ಪ್ರಕಾರ ಸಚಿವರಾದ ಡಾ. ಸುಧಾಕರ್, ಚಾಮರಾಜನಗರದಲ್ಲಿ ಸಚಿವ ವಿ. ಸೋಮಣ್ಣ, ಮಾಧುಸ್ಬಾಮಿ, ಬಿಸಿ ಪಾಟೀಲ್, ಬಿಸಿ ನಾಗೇಶ್ , ಸಿ.ಟಿ ರವಿ. ಶ್ರೀರಾಮುಲು, ಸಿ.ಸಿ ಪಾಟೀಲ್, ಶಶಿಕಲಾ ಜೊಲ್ಲೆ ಹಿನ್ನೆಡೆ ಸಾಧಿಸಿದ್ದು ಬಿಜೆಪಿಗೆ ಆಘಾತ ಕಾದಿದೆ.
ಮೂರನೇ ಸುತ್ತಿನವರೆಗೂ ಬಿಜೆಪಿ ಘಟಾನುಘಟಿ ನಾಯಕರು ಹಿನ್ನೆಡೆ ಸಾಧಿಸಿದ್ದು ಕೇಸರಿ ಪಾಳಯಕ್ಕೆ ನಡುಕ ಶುರುವಾಗಿದೆ.