ರಾಹುಲ್ ಗಾಂಧಿ (Rahul gandhi) ಹೇಳಿಕೆ ಬೆನ್ನಲ್ಲೇ ಇದೀಗ ಸ್ಯಾಮ್ ಪಿತ್ರೋಡಾ (sam pitroda) ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ. ಪಿತ್ರಾರ್ಜಿತ ಆಸ್ತಿ ತೆರಿಗೆ ಪದ್ಧತಿ ಬಗ್ಗೆ ಮಾತಾಡಿರುವ ಸ್ಯಾಮ್ ಪಿತ್ರೋಡಾ ನೀಡಿದ ಹೇಳಿಕೆ ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಪ್ರಧಾನಿ ಮೋದಿ (Narendra modi) ಕೂಡ ಪಿತ್ರೋಡ ಹೇಲಿಕೆಯನ್ನ ಖಂಡಿಸಿ ಕಾಂಗ್ರೇಸ್ (congress) ಗೆ ಟಾಂಗ್ ಕೊಟ್ಟಿದ್ದಾರೆ. ಪಿರ್ತಾತ ಆಸ್ತಿಗಳ ಕುರಿತು ಅಮೆರಿಕಾದಲ್ಲಿರುವ (America) ಪದ್ಧತಿ ಬಗ್ಗೆ ಇಲ್ಲೂ ಸಹ ಚರ್ಚೆಯಾಗಬೇಕು ಎಂದು ಅವರು ನೀಡಿದ ಹೇಳಿಕೆ ಈ ವಿವಾದಕ್ಕೆ ಕಾರಣ.
ಸದ್ಯ ಅಮೇರಿಕಾದಲ್ಲಿರುವ ನಿಯಮದ ಬಗ್ಗೆ ನಮ್ಮ ದೇಶದ ಜನರು ಚರ್ಚೆ, ಸಂವಾದವನ್ನ ಮಾಡಬೇಕು ಎಂದು ಪಿತ್ರೋಡಾ ಹೇಳಿದ್ದಾರೆ. ಅವರ ಪ್ರಕಾರ ಅಮೆರಿಕಾದಲ್ಲಿ ಪಿತ್ರಾರ್ಜಿತ ಆಸ್ತಿ ತೆರಿಗೆ ಪದ್ಧತಿ ಜಾರಿಯಲ್ಲಿದೆ. ಇದರ ಪ್ರಕಾರ ವ್ಯಕ್ತಿ ಮೃತಪಟ್ಟರೆ ಶೇ.55ರಷ್ಟು ಆಸ್ತಿ ಸರ್ಕಾರಕ್ಕೆ (Government) ಹೋಗುತ್ತೆ. ಆತನ ಮಕ್ಕಳಿಗೆ ಶೇ.45ರಷ್ಟು ಆಸ್ತಿ ಮಾತ್ರ ಉಳಿಯುತ್ತದೆ. ಈ ಪಿತ್ರಾರ್ಜಿತ ಆಸ್ತಿ ತೆರಿಗೆ ಬಗ್ಗೆ ಭಾರತದಲ್ಲೂ ಚರ್ಚೆ ಆಗಲಿ ಎಂದು ಹೇಳಿದ್ದಾರೆ.
ಶ್ರೀಮಂತರಾಗುವುದರಲ್ಲಿ ಯಾವುದೇ ರೀತಿಯ ತಪ್ಪು ಇಲ್ಲ.ಆದ್ರೆ ಭಾರತದಲ್ಲಿ ಪಿತ್ರಾರ್ಜಿತ ಆಸ್ತಿ ತೆರಿಗೆ ಪದ್ಧತಿ ಜಾರಿಯಲ್ಲಿಲ್ಲ .ಹಣ ಸಂಪಾದಿಸಿದ ವ್ಯಕ್ತಿ ಸತ್ತರೆ ಎಲ್ಲಾ ಆಸ್ತಿ ಮಕ್ಕಳಿಗೆ ಹೋಗುತ್ತೆ. ಇದರಲ್ಲಿ ಸಾರ್ವಜನಿಕರಿಗೆ, ಸರ್ಕಾರಕ್ಕೆ ಏನೂ ಸಿಗುವುದೇ ಇಲ್ಲ. ಇವುಗಳ ಬಗ್ಗೆ ಜನರು ಚರ್ಚೆ ಹಾಗೂ ಸಂವಾದ ಮಾಡಬೇಕು ಎಂದು ಪಿತ್ರೋಡಾ ನಿಡಿದ್ದ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿಯಿಂದ ಟಾಂಗ್ ಕೊಟ್ಟಿದ್ದಾರೆ.