ಪ್ರತಿಷ್ಠಿತ ರೆಕಾರ್ಡಿಂಗ್ ಅಕಾಡೆಮಿ (ಗ್ರ್ಯಾಮಿ ಪ್ರಶಸ್ತಿಗಳ ಮನೆ) ಅವರು ಪ್ರತಿವರ್ಷದಂತೆ ಈ ವರ್ಷವೂ ಆಯ್ದ ಸಂಗೀತಗಾರರನ್ನು “ದಿ ರೆಕಾರ್ಡಿಂಗ್ ಅಕಾಡೆಮಿ“ಗೆ ಮತದಾನದ ಸದಸ್ಯರಾಗಲು ಆಹ್ವಾನಿಸಿದ್ದರು. ಈ ಬಾರಿ ಆಸ್ಟ್ರೇಲಿಯಾದ ಮೆಲ್ಬೊರ್ನ್ ನಿವಾಸಿ, ಭಾರತೀಯ ಗಾಯಕ ಶ್ರೀರಾಮ್ ಅಯ್ಯರ್ ಮತದಾನದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಕಳೆದ 23ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಶ್ರೀರಾಮ್ ಅಯ್ಯರ್, ರೆಕಾರ್ಡಿಂಗ್ ಅಕಾಡೆಮಿ ಗೆ ಮತದಾನದ ಸದಸ್ಯನಾಗಿ ಆಯ್ಕೆಯಾಗಿರುವುದಕ್ಕೆ ಸಂತಸಪಟ್ಟಿದ್ದಾರೆ.
2007 ರಲ್ಲಿ ಕಿವಿ – ಇಂಡಿಯನ್ ಸಂಸ್ಥೆ ಮೂಲಕ ನನ್ನ ಮೊದಲ ಆಲ್ಬಂ ಭಾರತದಲ್ಲಿ ಬಿಡುಗಡೆಯಾಯಿತು. ಖ್ಯಾತ ಗಾಯಕರಾದ ಶಂಕರ್ ಮಹಾದೇವನ್, ಸಾಧಾನ ಸರಗಮ್, ಉದಿತ್ ನಾರಾಯಣ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಅಲ್ಲಿಂದ ನನ್ನ ಸಂಗೀತದ ಜರ್ನಿ ಆರಂಭವಾಯಿತು. ಈವರೆಗೂ ಆಸ್ಟ್ರೇಲಿಯಾ, ಭಾರತ ಮುಂತಾದ ಕಡೆ ಸುಮಾರು 500ಕ್ಕೂ ಹೆಚ್ಚು ಲೈವ್ ಶೋಗಳನ್ನು ನೀಡಿದ್ದೇನೆ. ಗೀತರಚನೆಕಾರನಾಗಿಯೂ ಕಾರ್ಯ ನಿರ್ವಹಿಸಿದ್ದೇನೆ. ಸಂಗೀತ ಕ್ಷೇತ್ರದಲ್ಲೇ ಇನ್ನೂ ಹೆಚ್ಚಿನ ಸಾಧನೆ ಮಾಡುವ ಉದ್ದೇಶ ಹೊಂದಿರುವುದಾಗಿ ಶ್ರೀರಾಮ್ ಅಯ್ಯರ್ ತಿಳಿಸಿದ್ದಾರೆ.