ಭಾರತದ ಅತಿ ಎತ್ತರದ ಮನುಷ್ಯ ಎಂದೇ ಖ್ಯಾತಿ ಪಡೆದಿರುವ ಧರ್ಮೇಂದ್ರ ಪ್ರತಾಪ್ ಸಿಂಗ್ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಸುಮಾರು 8.2 ಅಡಿ ಎತ್ತರವಿರುವ ಪ್ರತಾಪ್ ಸಿಂಗ್ ಪ್ರತಾಪ್ಗಢ ಪ್ರದೇಶದವರು ಎಸ್ಪಿ ಸೇರ್ಪಡೆ ನಂತರ ಮಾತನಾಡಿದ ಪ್ರತಾಪ್ ತಾವು ಅಖಿಲೇಶ್ ಯಾದವ್ ಅವರ ರಾಜಕೀಯದಲ್ಲಿ ನಂಬಿಕೆಯಿಟ್ಟು ಪಕ್ಷ ಸೇರಿರುವುದಾಗಿ ತಿಳಿಸಿದ್ದಾರೆ.
46 ವರ್ಷದ ಪ್ರತಾಪ್ ಸ್ನಾತಕೋತರ ಪದವಿಯನ್ನು ಪಡೆದಿದ್ದಾರೆ. ಆದರೆ, ನಿರುದ್ಯೋಗ ಸಮಸ್ಯೆ ಅವರನ್ನು ಹೆಚ್ಚಾಗಿ ಭಾದಿದುತ್ತಿದೆ ಮತ್ತು ಅವರಿಗೆ ಕೆಲಸ ಸಿಗದೆ ಮದುವೆ ಯಾಗದೆ ಉಳಿಯಲು ತಮ್ಮ ಎತ್ತರವೇ ಕಾರನ ಎಂದು ಬೇಸರವನ್ನ ಹೊರಹಾಕಿದ್ದಾರೆ.