ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರ ಹೇಳಿಕೆಗಳಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ಮೂಲಕ ತೀಕ್ಷ್ಣ ತಿರುಗೇಟು ನೀಡಿದ್ದಾರೆ.
ಭಾರತದ ಆತ್ಮ ಹಳ್ಳಿಗಳಲ್ಲಿದೆ ನಿಜ, ಆದರೆ ನಿಮ್ಮ ಆತ್ಮ ಮಾತ್ರ ತಾಜ್ ವೆಸ್ಟ್ಎಂಡ್ ಹೋಟೆಲ್ನಲ್ಲಿದೆ” ಎಂದು ಪ್ರಿಯಾಂಕ್ ಖರ್ಗೆ ನೇರವಾಗಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ ಅವರ ನಡವಳಿಕೆಯನ್ನು ಪ್ರಶ್ನಿಸಿರುವ ಅವರು, “ಹಳ್ಳಿಗರಾಗುವುದು ಹೆಮ್ಮೆಯ ವಿಷಯವೇ. ಆದರೆ, ನೀವು ಆ ಹೆಸರಿನಲ್ಲಿ ಗುಗ್ಗುತನ ಪ್ರದರ್ಶಿಸಬೇಡಿ ಎನ್ನುವುದಷ್ಟೇ ನನ್ನ ಕಳಕಳಿ ಹಾಗೂ ಸಲಹೆ. ಅಧಿಕಾರ ಕೈತಪ್ಪಿದಾಗ ಮಾತ್ರ ನಿಮಗೆ ಹಳ್ಳಿಯ ಹಟ್ಟಿ ಜಪ ನೆನಪಾಗುತ್ತದೆ. ಅಧಿಕಾರ ಸಿಕ್ಕಾಗ ತಾಜ್ ವೆಸ್ಟ್ಎಂಡ್ನ ವಿಲಾಸಿ ಜೀವನ ಆಕರ್ಷಿಸುತ್ತದೆ ಅಲ್ಲವೇ?” ಎಂದು ಚುಚ್ಚಿದ್ದಾರೆ.
ಭಾರತದ ಆತ್ಮ ಹಳ್ಳಿಗಳಲ್ಲಿದೆ. ನಿಮ್ಮ ಆತ್ಮ ತಾಜ್ ವೆಸ್ಟೆಂಡ್ ನಲ್ಲಿದೆ!
ಹಳ್ಳಿಗರಾಗುವುದು ಹೆಮ್ಮೆಯೇ, ಆದರೆ ನೀವು ಗುಗ್ಗುತನದ ಪ್ರದರ್ಶನ ಮಾಡಬೇಡಿ ಎನ್ನುವುದಷ್ಟೆ ನನ್ನ ಕಳಕಳಿ ಮತ್ತು ಸಲಹೆ.
ಅಧಿಕಾರ ಇಲ್ಲದಾಗ ಹಳ್ಳಿಯ ಹಟ್ಟಿ ಜಪ ಮಾಡುತ್ತೀರಿ.
ಅಧಿಕಾರವಿದ್ದಾಗ ತಾಜ್ ವೆಸ್ಟೆಂಡ್ನ ವಿಲಾಸಿ ಜೀವನ ಆಕರ್ಷಿಸುತ್ತದೆ ಅಲ್ಲವೇ?ಹಳ್ಳಿಗರ ನಂಬಿಕೆ, ಅಮಾಯಕತೆಯನ್ನು ಬಂಡವಾಳ ಮಾಡಿಕೊಂಡು ಮೊಸಳೆ ಕಣ್ಣೀರು ಸುರಿಸುತ್ತಾ ಮಂಕುಬೂದಿ ಎರಚುವ ನಿಮ್ಮ ಸೀರಿಯಲ್ ನಾಟಕವನ್ನು ನಂಬುವುದಕ್ಕೆ ಹಳ್ಳಿಗರು ಮೂರ್ಖರಲ್ಲ, ನಗರದವರೂ ಮುಗ್ಧರಲ್ಲ.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 5, 2026
ಹಳ್ಳಿಗರ ನಂಬಿಕೆ ಮತ್ತು ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡು ಮೊಸಳೆ ಕಣ್ಣೀರು ಸುರಿಸುತ್ತಾ ಜನರ ಕಣ್ಣಿಗೆ ಮಂಕುಬೂದಿ ಎರಚುತ್ತಿದ್ದೀರಿ. ನಿಮ್ಮ ಈ ಸೀರಿಯಲ್ ನಾಟಕಗಳನ್ನು ನಂಬಲು ಹಳ್ಳಿಗರು ಮೂರ್ಖರಲ್ಲ, ಹಾಗೆಯೇ ನಗರದ ಜನರೂ ಮುಗ್ಧರಲ್ಲ ಎಂದು ಎಚ್ಚರಿಸಿದ್ದಾರೆ.
ಕಿಂಗ್ ಕೊಹ್ಲಿ ಹುಟ್ಟುಹಬ್ಬದ ಸ್ಪೆಷಲ್: ಕ್ರಿಕೆಟ್ ಜಗತ್ತನ್ನೇ ಬೆರಗುಗೊಳಿಸಿದ 10 ದಾಖಲೆಗಳಿವು!






