ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರಕ್ಕೆ ಭಾರತದಲ್ಲಿರುವ ಹಿಂದೂಗಳಾಗಲೀ ಮುಸ್ಲಿಮರಾಗಲೀ ಆರ್ಥಿಕವಾಗಿ ಸಬಲರಾಗುವುದು ಬೇಕಾಗಿಲ್ಲ. ಆದರೆ, ದೇಶದ ಆರ್ಥಿಕತೆ ಮಾತ್ರ 5 ಟ್ರಿಲಿಯನ್ ಡಾಲರ್ ದಾಟಬೇಕು ಎಂಬ ಕನಸುಗಳನ್ನು ಬಿತ್ತುತ್ತದೆ. ಹಾದಿ ತಪ್ಪಿಸುವ ಈ ಕನಸುಗಳಿಂದ ಜನತೆ ವಾಸ್ತವಿಕತೆ ಮರೆಯುತ್ತಾರೆ. ನಿತ್ಯ ಬೆಲೆ ಏರಿಕೆಯಿಂದಾಗಿ ಇಡೀ ದೇಶದ ಶೇ.90ರಷ್ಟು ಜನರು ಬಡತನದತ್ತ ದಾಪುಗಾಲು ಹಾಕುತ್ತಿದ್ದರೆ, ಮೋದಿ ಆಪ್ತರಾದ ಮುಕೇಶ್ ಅಂಬಾನಿ ಮತ್ತು ಅದಾನಿ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ದಾಪುಗಾಲು ಹಾಕುತ್ತಾ ವಿದೇಶಿ ದಿಗ್ಗಜರನ್ನು ಹಿಂದಿಕ್ಕಿ ಸಾಗುತ್ತಿದ್ದಾರೆ.
ಪ್ರಧಾನಿ ಮೋದಿ (Narendra Modi) ತಂತ್ರ ಏನೆಂದರೆ, ಹಿಂದೂಗಳು- ಮುಸ್ಲಿಮರು ಪರಸ್ಪರ ಸೌಹಾರ್ದತೆಯಿಂದ ಇರಬಾರದು. ಸೌಹಾರ್ದತೆಯನ್ನು ಕೆಡಿಸಬೇಕು. ಸೌಹಾರ್ದತೆ ಕೆಡಿಸಲು ಪರಸ್ಪರ ವ್ಯಾಪರಕ್ಕೆ ಅಡ್ಡಿ ಮಾಡುವುದು. ವ್ಯಾಪಾರಕ್ಕೆ ಅಡ್ಡಿಯಾದರೆ, ಹಿಂದೂ ಆಗಲೀ ಮುಸ್ಲಿಮ್ ಆಗಲಿ ನಷ್ಟ ಅನುಭವಿಸಿಯೇ ತೀರುತ್ತಾರೆ. ವರ್ಷದ ಕೊನೆಗೆ ನಷ್ಟದ ಹೊರೆ ಹೆಚ್ಚಾಗಿ ಬಡತನದತ್ತ ಸಾಗುತ್ತಾರೆ.
ಹಿಂದೂಗಳ ಮತ ಮೋದಿಗೆ ಸುಭದ್ರವಾಗುತ್ತದೆ. ಮುಸ್ಲಿಮರ ಮತ ಕಾಂಗ್ರೆಸ್ ಸೇರಿದಂತೆ ಅರ್ಧ ಡಜನ್ ಪಕ್ಷಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಹಂಚಿಹೋಗುತ್ತದೆ. ಮತ್ತೆ ಮೋದಿ ಸರ್ಕಾರದ ಪ್ರತಿಷ್ಠಾಪನೆಯಾಗುತ್ತದೆ. ಬಹುಮತದ ಅಹಂನಿಂದ ಜನರ ಸ್ವಾತಂತ್ರ್ಯ ಹರಣ ಮಾಡುವ ಮಸೂದೆಗಳಿಗೆ ಚರ್ಚೆಯಿಲ್ಲದೇ ಅಂಗೀಕಾರ ಪಡೆದು ಕಾಯ್ದೆ ಮಾಡಿ ಸರ್ವಾಧಿಕಾರಿಗಳಂತೆ ಮೆರೆಯುತ್ತಾರೆ.
ದೇಶದಲ್ಲಿ ಹಿಂದೂ- ಮುಸ್ಲಿಮರ ಸೌಹಾರ್ದತೆ ಮತ್ತು ವ್ಯಾಪಾರಕ್ಕೆ ಅಡ್ಡಿ ಮಾಡುತ್ತಿರುವ ಮೋದಿ ಸರ್ಕಾರ ಮುಸ್ಲಿಂ ರಾಷ್ಟ್ರಗಳ ಜತೆ ಬೃಹತ್ ಪ್ರಮಾಣದಲ್ಲಿ ವ್ಯಾಪಾರ ಮಾಡುತ್ತದೆ. ಈ ವ್ಯಾಪಾರದಿಂದಾಗಿ ಮೋದಿ ಆಪ್ತರ ಲಾಭ ಹೆಚ್ಚಳವಾಗುತ್ತದೆ. ಮೋದಿ ಚುನಾವಣೆಗೆ ನಿಧಿ ಪ್ರವಾಹದಂತೆ ಹರಿದು ಬರುತ್ತದೆ.
Also Read : ಜಾಗತಿಕ ಆರ್ಥಿಕ ಕ್ಷೋಭೆ : ಜಿಡಿಪಿ ಬೆಳವಣಿಗೆ ಮುನ್ನಂದಾಜು ಶೇ.7.2ಕ್ಕೆ ತಗ್ಗಿಸಿದ RBI
ಇಲ್ಲಿ, ಹಿಜಾಬು ಹಾಕಬೇಡಿ, ಹಲಾಲ್ ಮಾಂಸ ಖರೀದಿಸಬೇಡಿ, ಮುಸ್ಲಿಮರಿಗೆ ಮಾವು ಮಾರಬೇಡಿ ಎಂಬ ತಲೆಕೆಟ್ಟ ಆಲೋಚನೆಗಳನ್ನು ತುಂಬಿರುವ ಮೋದಿ ಸರ್ಕಾರ ಮತ್ತು ಮೋದಿ ಬೆಂಬಲಿತ ಮಾಧ್ಯಮಗಳು ಅದನ್ನು ನಿಧಾನವಿಷವಾಗಿ ಉಣಿಸುತ್ತಿವೆ. ಆದರೆ, ಮೋದಿ ಸರ್ಕಾರ ಮಾತ್ರ ಮುಸ್ಲಿಂ ದೇಶಗಳೊಡನೆ ವ್ಯಾಪಾರ ವಹಿವಾಟು ವಿಸ್ತರಿಸುತ್ತಲೇ ಇದ್ದಾರೆ.
ಸೌದಿ ಅರೇಬಿಯಾ ವ್ಯಾಪಾರ ಸಂಬಂಧ: ಸಂಪೂರ್ಣ ಮುಸ್ಲಿಮ್ ರಾಷ್ಟ್ರವಾಗಿರುವ ಸೌದಿ ಅರೇಬಿಯಾ ಜತೆ ಮೋದಿ ಸರ್ಕಾರದ ವ್ಯಾಪಾರ ಹಿಂದೆಂದಿಗಿಂತಲೂ ಹೆಚ್ಚಿದೆ. ಪ್ರಧಾನಿ ಮೋದಿ 2016 ಮತ್ತು 2019 ರಲ್ಲಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದಾರೆ. 2019 ರ ಫೆಬ್ರವರಿಯಲ್ಲಿ ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ. ಭೇಟಿ ವೇಳೆ ದ್ವಿಪಕ್ಷೀಯ ಸಂಬಂಧಗಳಲ್ಲಿ ಉಭಯ ರಾಷ್ಟ್ರಗಳ ನಡುವೆ ಹೊಸ ಯುಗವೇ ಆರಂಭವಾಗಿದೆ. ಅದೂ ಪಾಲುದಾರಿಕೆ ಕಾರ್ಯತಂತ್ರ ಮಂಡಳಿ (ಎಸ್ಪಿಸಿ) ಸ್ಥಾಪಿಸಲಾಗಿದೆ. ಈ ಮಂಡಳಿಗೆ ಉಭಯ ನಾಯಕರೂ ಸಹ-ಅಧ್ಯಕ್ಷರು.
ಇಂಧನ, ಭದ್ರತೆ, ಮಾದಕ ದ್ರವ್ಯಗಳ ಕಳ್ಳಸಾಗಣೆ ನಿಯಂತ್ರಣ, ರಕ್ಷಣಾ ಉತ್ಪಾದನೆ, ನಾಗರಿಕ ವಿಮಾನಯಾನ, ವೈದ್ಯಕೀಯ ಉತ್ಪನ್ನಗಳು, ಪೆಟ್ರೋಲಿಯಂ ನಿಕ್ಷೇಪಗಳು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು, ರುಪೇ ಕಾರ್ಡ್ ಬಿಡುಗಡೆ, ಸಹಕಾರ ಕ್ಷೇತ್ರ ಸೇರಿದಂತೆ ಹನ್ನೊಂದು ಒಡಂಬಡಿಕೆಗಳಿಗೆ ಉಭಯ ನಾಯಕರು ಸಹಿ ಹಾಕಿದ್ದಾರೆ. ರಾಜತಾಂತ್ರಿಕರ ತರಬೇತಿ, ಷೇರು ವಿನಿಮಯ ಕೇಂದ್ರಗಳ ನಡುವಿನ ಸಹಕಾರವೂ ಇದರಲ್ಲಿ ಒಳಗೊಂಡಿದೆ.

ಸಂಪೂರ್ಣ ಮುಸ್ಲಿಮ್ ರಾಷ್ಟ್ರವಾಗಿರುವ ಸೌದಿ ಅರೇಬಿಯಾವು ಭಾರತದ ನಾಲ್ಕನೇ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ. ಚೀನಾ, ಅಮೆರಿಕ ಮತ್ತು ಯುನೈಟೆಡ್ ಅರಬ್ ಎಮಿರೆಟ್ಸ್ ಮೊದಲ ಮೂರು ಸ್ಥಾನಗಳಲ್ಲಿವೆ. ಭಾರತವು ತನ್ನ ಕಚ್ಚಾ ತೈಲದ ಅಗತ್ಯತೆಯ ಸುಮಾರು 18% ಮತ್ತು ಅದರ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಅವಶ್ಯಕತೆಯ 30% ಸೌದಿ ಅರೆಬಿಯಾದಿಂದಲೇ ಆಮದು ಮಾಡಿಕೊಳ್ಳುತ್ತಿದೆ. ಆ ಲೆಕ್ಕದಲ್ಲಿ ಸಂಪೂರ್ಣ ಮುಸ್ಲಿಮ್ ರಾಷ್ಟ್ರವಾಗಿರುವ ಸೌದಿ ಅರೆಬಿಯಾವು ಭಾರತದ ಇಂಧನದ ಪ್ರಮುಖ ಮೂಲ ದೇಶವಾಗಿದೆ. ವಿತ್ತೀಯವರ್ಷ 2019-20ರಲ್ಲಿ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ವ್ಯಾಪಾರವು 33.09 ಬಿಲಿಯನ್ ಡಾಲರ್ (2,48,175 ಕೋಟಿ ರೂಪಾಯಿಗಳು) ಗಳಿಗೇರಿದೆ. ಈ ಅವಧಿಯಲ್ಲಿ, ಸೌದಿ ಅರೇಬಿಯಾದಿಂದ ಭಾರತದ ಆಮದು 26.84 ಬಿಲಿಯನ್ ಡಾಲರ್ (2,01,300 ಕೋಟಿ ರೂಪಾಯಿಗಳು) ತಲುಪಿದ್ದರೆ, ಸೌದಿ ಅರೇಬಿಯಾಕ್ಕೆ 6.25 ಬಿಲಿಯನ್ ಡಾಲರ್ (46,875 ಕೋಟಿ ರೂಪಾಯಿಗಳು) ಮೌಲ್ಯದಷ್ಟು ರಫ್ತು ಮಾಡಲಾಗಿದೆ. ಇದು ಹಿಂದಿನ ವರ್ಷಕ್ಕಿಂತ 12.18% ರಷ್ಟು ಹೆಚ್ಚಳವನ್ನು ದಾಖಲಿಸಿದೆ. ವಿತ್ತೀಯ ವರ್ಷ 2019-20 ರಲ್ಲಿ ಸೌದಿ ಅರೇಬಿಯಾದೊಂದಿಗಿನ ಒಟ್ಟು ವ್ಯಾಪಾರವು ಭಾರತದ ಒಟ್ಟಾರೆ ವ್ಯಾಪಾರದ 4.23% ರಷ್ಟಿದೆ.
ಸೌದಿ ಅರೇಬಿಯಾದ ಹೂಡಿಕೆ ಸಚಿವಾಲಯದ ಪ್ರಕಾರ, ಮಾರ್ಚ್ 2020 ರ ಹೊತ್ತಿಗೆ ಸೌದಿ ಅರೆಬಿಯಾದಲ್ಲಿ 1.5 ಬಿಲಿಯನ್ ಡಾಲರ್ ಮೌಲ್ಯದ ಜಂಟಿ ಉದ್ಯಮಗಳು/ ಶೇ.100ರಷ್ಟು ಸ್ವಾಮ್ಯದ ಘಟಕಗಳಾಗಿ ನೋಂದಾಯಿಸಿದ 476 ಭಾರತೀಯ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ತಾಂತ್ರಿಕ ಸೇವೆಗಳು, ನಿರ್ಮಾಣ ಯೋಜನೆಗಳು, ದೂರಸಂಪರ್ಕ, ಮಾಹಿತಿ ತಂತ್ರಜ್ಞಾನ, ಹಣಕಾಸು ಸೇವೆಗಳು ಮತ್ತು ಸಾಫ್ಟ್‌ವೇರ್ ಅಭಿವೃದ್ಧಿ, ಔಷದೋದ್ಯಮ ಇತ್ಯಾದಿ ವಲಯಗಳಿಗೆ ಸೇರಿದ ಕಂಪನಿಗಳಾಗಿವೆ.
ಭಾರತದಲ್ಲಿ ಸೌದಿ ಹೂಡಿಕೆಗಳು: ಸಂಪೂರ್ಣ ಮುಸ್ಲಿಮ್ ರಾಷ್ಟ್ರವಾಗಿರುವ ಸೌದಿ ಅರೇಬಿಯಾವು ಭಾರತದಲ್ಲಿ 21 ನೇ ಅತಿದೊಡ್ಡ ಹೂಡಿಕೆದಾರರಾಗಿದ್ದು 1.8 ಬಿಲಿಯನ್ ಡಾಲರ್ ಮೊತ್ತದ ಹೂಡಿಕೆಗಳನ್ನು ಹೊಂದಿದೆ. ಪ್ರಮುಖ ಹೂಡಿಕೆ ಗುಂಪುಗಳಲ್ಲಿ ಆರಾಮ್ಕೊ, ಸಾಬಿಕ್, ಝಮಿಲ್, ಇ-ಹಾಲಿಡೇಸ್, ಅಲ್- ಬ್ಯಾಟರ್ಜಿ ಸಮೂಹಗಳು ಸೇರಿವೆ. ಸೌದಿ ಸಾವರಿನ್ ವೆಲ್ತ್ ಫಂಡ್ ಬೆಂಬಲಿತ ಸಾಫ್ಟ್ ಬ್ಯಾಂಕ್‌ನ ‘ವಿಷನ್ ಫಂಡ್’ ಭಾರತೀಯ ಸ್ಟಾರ್ಟ್-ಅಪ್‌ಗಳಾದ ದೆಹಲಿವರಿ, ಫಸ್ಟ್‌ಕ್ರೈ, ಗ್ರೋಫರ್ಸ್, ಓಲಾ, ಓಯೋ, ಪೇಟಿಎಂ ಮತ್ತು ಪಾಲಿಸಿಬಜಾರ್‌ಗಳಲ್ಲಿ ಹಲವಾರು ಬಿಲಿಯನ್ ಡಾಲರ್‌ಗಳನ್ನು ಹೂಡಿಕೆ ಮಾಡಿದೆ.
Also Read : ಯುಗಾದಿಯಿಂದ ಯುಗಾದಿವರೆಗೆ ಮೋದಿ ಮಾಡಿದ ಸಾಲದ ಮೊತ್ತ 26.37 ಲಕ್ಷ ಕೋಟಿ ರೂಪಾಯಿ!
ಹಲವಾರು ಸೌದಿ ಕಂಪನಿಗಳು ತಮ್ಮ ಸೌದಿಯೇತರ ಅಂಗಸಂಸ್ಥೆಗಳ ಮೂಲಕ ಭಾರತದಲ್ಲಿ ಹೂಡಿಕೆ ಮಾಡಿವೆ. ಜೂನ್ 2020 ರಲ್ಲಿ, ಸೌದಿ ಅರೇಬಿಯಾದ ಸಾರ್ವಭೌಮ ನಿಧಿ (ಸಾರ್ವಜನಿಕ ಹೂಡಿಕೆ ನಿಧಿ- ಪಿಐಎಫ್) ಭಾರತದ ಪ್ರಮುಖ ದೂರಸಂಪರ್ಕ ಮತ್ತು ಡಿಜಿಟಲ್ ಸೇವೆಗಳ ಕಂಪನಿಯಾದ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ 1.5 ಬಿಲಿಯನ್ ಹೂಡಿಕೆ ಮಾಡಲು ಒಡಂಬಡಿಕೆ ಮಾಡಿಕೊಂಡಿದೆ. ಪಿಐಎಫ್ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ 2.32% ಪಾಲನ್ನು ಹೊಂದಿದೆ. ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನಲ್ಲಿ (ಆರ್‌ಆರ್‌ವಿಎಲ್) 1.3 ಬಿಲಿಯನ್ ಡಾಲರ್ ಹೂಡಿಕೆ ಮಾಡಿ 2.04% ರಷ್ಟು ಪಾಲು ಖರೀದಿಸಿದೆ.
ಸೌದಿ ಕಂಪನಿ ಅಲ್ಫನಾರ್ ಭಾರತದಲ್ಲಿ ಎರಡು 300 ಮೆಗಾವ್ಯಾಟ್ ಪವನ ವಿದ್ಯುತ್ ಯೋಜನೆಗಳಲ್ಲಿ 600 ದಶಲಕ್ಷ ಡಾಲರ್ ಹೂಡಿಕೆ ಮಾಡುತ್ತಿದೆ.
ಸಂಪೂರ್ಣ ಮಸ್ಲಿಮ್ ದೇಶವಾಗಿರುವ ಸೌದಿಯ ಜತೆಗಿನ ವ್ಯಾಪಾರ ಸಂಬಂಧ ಅಂತ್ಯಂತ ಸೌಹಾರ್ದಯುತವಾಗಿದೆ. ಆದರೆ, ದೇಶದಲ್ಲಿ ಮಾತ್ರ ಹಿಂದೂ ಮುಸ್ಲಿಮರು ಸೌಹಾರ್ದಯುತವಾಗಿ ವ್ಯಾಪಾರ ಮಾಡಬಾರದು. ಸೌಹಾರ್ದತೆ ಇದ್ದರೆ, ಮತಬ್ಯಾಂಕಿಗೆ ನಷ್ಟವಾಗುತ್ತದೆ. ಮತಬ್ಯಾಂಕಿಗೆ ನಷ್ಟವಾದರೆ ಅಧಿಕಾರ ಹೋಗುತ್ತದೆ. ಅಧಿಕಾರ ಹೋದರೆ, ಇದುವರೆಗೆ ಮಾಡಿರುವ ಆರ್ಥಿಕ ಅಪರಾಧಗಳಿಗೆ ಜೈಲು ಶಿಕ್ಷೆಯಾಗುತ್ತದೆ. ಜೈಲು ಶಿಕ್ಷೆ ತಪ್ಪಿಸಿಕೊಳ್ಳಲು ಮುಸ್ಲಿಮ್- ಹಿಂದೂಗಳ ನಡುವೆ ಸೌಹಾರ್ದತೆ ಕದಡಬೇಕು. ಅದಕ್ಕಾಗಿ, ಹಿಜಾಬು, ಹಲಾಲು ವಿವಾದಗಳು ಹುಟ್ಟಿಕೊಳ್ಳುತ್ತವೆ. ಮುಸ್ಲಿಮರೊಂದಿಗೆ ವ್ಯಾಪಾರ ಮಾಡಬಾರದೆಂಬ ಫರ್ಮಾನು ಹೊರಡುತ್ತದೆ. ದಡ್ಡರಿಗೆ ಅಂಧಭಕ್ತರಿಗೆ ಇದೆಲ್ಲಾ ಅರ್ಥವಾಗುವುದಿಲ್ಲ!