ದೇಶದ ಮೊದಲ ಮಂಕಿಪಾಕ್ಸ್ ಪ್ರಕರಣದ ರೋಗಿ ಸಂಪೂರ್ಣವಾಗಿ ಗುಣಮುಖಿತರಾಗಿದ್ದು, ಅವರ ಚರ್ಮದ ಮೇಲೆ ಕಂಡು ಬಂದಿದ್ದ ದದ್ದುಗಳು ಮಾಯವಾಗಿವೆ.
ಜುಲೈ 14ರಂದು 35 ವರ್ಷದ ಕೊಲ್ಲಂ ಮೂಲದ ನಿವಾಸಿ ಯುಎಇನಿಂದ ಮರಳಿದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಪತ್ತೆಯಾಗಿತ್ತು. ಇದು ದೇಶದ ಮೊದಲ ಪ್ರಕರಣವಾಗಿದ್ದು, ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಕೇರಳ ಆರೋಗ್ಯ ಸಚಿವರು ತಿಳಿಸಿದ್ದಾರೆ.
ಕೇರಳದ ಮೆಡಿಕಲ್ ಕಾಲೇಜಿನಲ್ಲಿ ಈ ವ್ಯಕ್ತಿಗೆ ಚಿಕಿತ್ಸೆ ನೀಡಲಾಗಿದ್ದು, ಜುಲೈ ೩ರ೦ದು ಸಂಪೂರ್ಣ ಗುಣಮುಖಿತರಾದ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

ಮಂಕಿಪಾಕ್ಸ್ ನಿಂದ ದೇಹದ ಮೇಲೆ ಕಾಣುವ ಗುಳ್ಳೆಗಳು ಕೂಡ ಮಾಯವಾಗಿದೆ. ವ್ಯಕ್ತಿಯನ್ನು ಎರಡು ಬಾರಿ ಎಲ್ಲಾ ರೀತಿಯಲ್ಲೂ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಎಲ್ಲದರಲ್ಲೂ ನೆಗೆಟಿವ್ ಬಂದಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಇನ್ನೂ ಎರಡು ಮಂಕಿಪಾಕ್ಸ್ ಪ್ರಕರಣಗಳಲ್ಲಿ ರೋಗಿಗಳ ಚಿಕಿತ್ಸೆ ಮುಂದುವರಿದಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.