• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪಾಕಿಸ್ತಾನಿ ಪ್ರಜೆಗಳಿಗೆ ಭಾರತ ವಿಧಿಸಿದ್ದ ಗಡುವು ಇಂದಿಗೆ ಮುಕ್ತಾಯ..

ಕೃಷ್ಣ ಮಣಿ by ಕೃಷ್ಣ ಮಣಿ
April 26, 2025
in Top Story, ದೇಶ, ರಾಜಕೀಯ, ಶೋಧ
0
ಪಾಕಿಸ್ತಾನಿ ಪ್ರಜೆಗಳಿಗೆ ಭಾರತ ವಿಧಿಸಿದ್ದ ಗಡುವು ಇಂದಿಗೆ ಮುಕ್ತಾಯ..
Share on WhatsAppShare on FacebookShare on Telegram

ಸಿಂಧೂ ನದಿ ಒಪ್ಪಂದ ಅಮಾನತು ಬೆನ್ನಲ್ಲೇ ಅಟ್ಟಾರಿ ಗಡಿಯನ್ನ ಬಂದ್ ಮಾಡಿಸಲಾಗಿದೆ. ಜೊತೆಗೆ ಭಾರತದಲ್ಲಿ ಇರುವ ಪಾಕಿಸ್ತಾನಿಗಳ ವೀಸಾ ರದ್ದು ಮಾಡಲಾಗಿದೆ. ಭಾರದಲ್ಲಿರುವ ಪಾಕ್​ ಪ್ರಜೆಗಳು ದೇಶ ಬಿಟ್ಟು ತೊರೆಯುವಂತೆ 48 ಗಂಟೆಗಳ ಕಾಲಾವಕಾಶ ನೀಡಲಾಗಿದೆ.. ಕೇಂದ್ರ ಗೃಹಸಚಿವ ಅಮಿತ್ ಷಾ, ನಿಮ್ಮ ನಿಮ್ಮ ರಾಜ್ಯಗಳಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನ ಈ ಕೂಡಲೇ ವಾಪಸ್ ಕಳಿಸಿ ಅಂತಾ ಮುಖ್ಯಮಂತ್ರಿಗಳಿಗೆ ಸಂದೇಶ ರವಾನಿಸಿದ್ದಾರೆ.

ADVERTISEMENT

ಎಲ್ಲಾ ಪಾಕಿಸ್ತಾನಿಗಳು ದೇಶ ಬಿಟ್ಟು ತೊಲಗಿ ಅಂತ ನರೇಂದ್ರ ಮೋದಿ ಸರ್ಕಾರ ಆದೇಶ ಕೊಟ್ಟಾಗಿದೆ. ಕೇಂದ್ರದ ಆದೇಶದಂತೆ ಭಾರತ ಪಾಕಿಸ್ತಾನ ಗಡಿಯ ಅಟ್ಟಾರಿ ಗಡಿಯ ಪಂಜಾಬ್​ನಲ್ಲಿ ಪಾಕಿಸ್ತಾನಿ ಮೂಲದವರನ್ನ ಹುಡುಕಿ ಹುಡುಕಿ ವಾಪಸ್​ ಕಳಿಸಲಾಗ್ತಿದೆ. ಕೆಲವರು ತಾವಾಗೇ ಗಂಟುಮೂಟೆ ಕಟ್ಕೊಂಡ್​ ಹೋಗ್ತಿದ್ದಾರೆ.. ಇನ್ನೂ ಕೆಲವರನ್ನು ಪೊಲೀಸರೇ ದಾಖಲೆ ಚೆಕ್​ ಮಾಡಿ ಪಾಕಿಸ್ತಾನದ ಗಡಿ ದಾಟಿಸಿ ಕಳುಹಿಸ್ತಿದ್ದಾರೆ. ಪಾಕಿಸ್ತಾನದ ಉಗ್ರರು ಮಾಡಿದ್ದು ತಪ್ಪು. ಹಿಂದೂಗಳನ್ನ ಕೊಂದಿದ್ದು ತಪ್ಪು. ಆದ್ರೆ ಸಾಮಾನ್ಯ ಜನರಾದ ನಾವೇನ್​ ತಪ್ಪು ಮಾಡಿದ್ದೀವಿ ಅಂತ ಮಹಿಳೆಯರು ಪ್ರಶ್ನಿಸುತ್ತಿದ್ದಾರೆ.

ಕೇಂದ್ರ ಸರ್ಕಾರ ಪಾಕಿಸ್ತಾನಿ ಪ್ರಜೆಗಳೆಲ್ಲಾ 48 ಗಂಟೆಗಳಲ್ಲಿ ದೇಶಬಿಡಿ ಅಂತಿದ್ದ ಹಾಗೆ ಕದ್ದುಮುಚ್ಚಿ ಭಾರತದಲ್ಲಿದ್ದ ಪಾಕಿಸ್ತಾನಿ ಪ್ರಜೆಗಳೆಲ್ಲಾ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರತದ ಗಂಡಸರನ್ನ ಮದುವೆಯಾಗಿರುವ ಪಾಕಿಸ್ತಾನಿ ಮಹಿಳೆಯರು 5, 10, 20 ವರ್ಷಗಳಿಂದ ಭಾರತದಲ್ಲೇ ಠಿಕಾಣಿ ಹೂಡಿದ್ರು. 2 ವರ್ಷಕ್ಕೊಮ್ಮೆ ವೀಸಾ ವಿಸ್ತರಣೆ ಮಾಡ್ಕೊಂಡು ಭಾರತದ ಪೌರತ್ವ ಸಿಗುತ್ತೆ ಅಂತ ಕಾಯ್ತಿದ್ರು. ಪಹಲ್ಗಾಮ್​ ದಾಳಿ ಬಳಿಕ ವೀಸಾ ರದ್ದಾಗ್ತಿದ್ದಂತೆ ಗಂಡ ಇಂಡಿಯಾ ಬಾರ್ಡರ್​ ಒಳಗೆ ಇದ್ರೆ, ಹೆಂಡ್ತಿ, ಮಕ್ಕಳು ಪಾಕಿಸ್ತಾನಕ್ಕೆ ಹೋಗುವಂತಾಗಿದೆ.

ಕೇವಲ ಭಾರತ-ಪಾಕಿಸ್ತಾನ ಗಡಿಭಾಗದಲ್ಲಷ್ಟೇ ಅಲ್ಲ.. ದೇಶದ ಎಲ್ಲಾ ರಾಜ್ಯಗಳಲ್ಲೂ ಭಾರತೀಯರನ್ನ ಮದುವೆಯಾಗಿ ಪಾಕಿಸ್ತಾನಿ ಮಹಿಳೆಯರು ಇದ್ದಾರೆ. 2 ವರ್ಷಕ್ಕೊಮ್ಮೆ ವೀಸಾ ಅವಧಿ ವಿಸ್ತರಣೆ ಮಾಡಿಸ್ಕೊಂಡು ಇಲ್ಲೇ ಗಂಡ, ಮಕ್ಕಳು ಸಂಸಾರ ಮಾಡ್ಕೊಂಡು​ ಆರಾಮಾಗಿದ್ದಾರೆ. ಕರ್ನಾಟಕದಲ್ಲೂ 80ಕ್ಕೂ ಹೆಚ್ಚು ಪಾಕಿಸ್ತಾನಿ ಮಹಿಳೆಯರು ರಾಜ್ಯದವ್ರನ್ನ ಮದುವೆಯಾಗಿ ಇಲ್ಲಿನ ಸೊಸೆಯರಾಗಿ ಜೀವನ ಮಾಡ್ತಿದ್ದು, ಈಗ ಅವ್ರಿಗೂ ನಡುಕ ಶುರುವಾಗಿದೆ. ಪಾಕ್​ ಪ್ರಜೆಗಳಿಗೆ ಗಡಿಪಾರಾಗೋ ಸಮಯ ಬಂದಂತೆ ಕಾಣ್ತಿದೆ..

Previous Post

ಜೀನಿ ಕಂಪನಿ ಮಾಲೀಕನಿಂದ ಲೈಂಗಿಕ ದೌರ್ಜನ್ಯ.. ದೂರು

Next Post

ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ಟೀಸರ್ ಲಾಂಚ್‌ ಮಾಡಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್..ಜೂನ್‌ನಿಂದ ಪ್ರವೇಶ ಆರಂಭ

Related Posts

ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?
Top Story

‘ಕಾಕ್ರೋಚ್ ಜನತಾ ಪಾರ್ಟಿ’ಗೆ ಎಕ್ಸ್‌ನಲ್ಲಿ ಬ್ರೇಕ್..! ಯುವಕರ ಡಿಜಿಟಲ್ ಆಕ್ರೋಶಕ್ಕೆ ಸೆನ್ಸಾರ್‌?

by ಪ್ರತಿಧ್ವನಿ
May 21, 2026
0

ಭಾರತದ ಮುಖ್ಯ ನ್ಯಾಯಮೂರ್ತಿಗಳ ಯುವಜನರ ಕುರಿತ ಹೇಳಿಕೆ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಬೆನ್ನಲ್ಲೇ ಹುಟ್ಟಿಕೊಂಡಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಇದೀಗ ಮತ್ತೊಮ್ಮೆ ಭಾರಿ ಸುದ್ದಿಯಲ್ಲಿದೆ. ಸಾಮಾಜಿಕ...

Read moreDetails
ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

May 21, 2026
*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

May 21, 2026
ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

May 21, 2026
“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

May 21, 2026
Next Post
ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ಟೀಸರ್ ಲಾಂಚ್‌ ಮಾಡಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್..ಜೂನ್‌ನಿಂದ ಪ್ರವೇಶ ಆರಂಭ

ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ಟೀಸರ್ ಲಾಂಚ್‌ ಮಾಡಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್..ಜೂನ್‌ನಿಂದ ಪ್ರವೇಶ ಆರಂಭ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada