ದೇಶದ ಮೊದಲ ಮಹಿಳಾ ರಫೇಲ್ ಫೈಟರ್ ಜೆಟ್ ಪೈಲಟ್ ಶಿವಾಂಗಿ ಸಿಂಗ್ ಅವರು ಬುಧವಾರ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾರತೀಯ ವಾಯುಪಡೆಯ ಟ್ಯಾಬ್ಲೋನ ಭಾಗವಾಗಿದ್ದರು. ಭಾರತೀಯ ವಾಯುಪಡೆಯ (IAF) ಸ್ತಬ್ಧ ಚಿತ್ರದಲ್ಲಿ (ಟ್ಯಾಬ್ಲೋ) ಭಾಗಯಾದ ಎರಡನೇ ಮಹಿಳಾ ಫೈಟರ್ ಜೆಟ್ ಪೈಲಟ್ ಆಗಿದ್ದಾರೆ. ಕಳೆದ ವರ್ಷ, ಫ್ಲೈಟ್ ಲೆಫ್ಟಿನೆಂಟ್ ಭಾವನಾ ಕಾಂತ್ ಅವರು ಐಎಎಫ್ ಸ್ತಬ್ಧ ಚಿತ್ರದ ಭಾಗವಾದ ಮೊದಲ ಮಹಿಳಾ ಫೈಟರ್ ಜೆಟ್ ಪೈಲಟ್ ಆಗಿದ್ದರು.
ವಾರಣಾಸಿ ಮೂಲದ ಶಿವಾಂಗಿ ಸಿಂಗ್ ಅವರು 2017 ರಲ್ಲಿ ಐಎಎಫ್ಗೆ ಸೇರ್ಪಡೆಗೊಂಡರು ಮತ್ತು ಐಎಎಫ್ನ ಎರಡನೇ ಬ್ಯಾಚ್ ಮಹಿಳಾ ಫೈಟರ್ ಪೈಲಟ್ಗಳಲ್ಲಿ ನೇಮಕಗೊಂಡರು. ರಫೇಲ್ ಗೂ ಮುನ್ನ ಇವರು ಮಿಗ್ -21 ಬೈಸನ್ ವಿಮಾನದ ಪೈಲಟ್ ಆಗಿದ್ದರು. ಶಿವಾಂಗಿ ಸಿಂಗ್ ಅವರು ಪಂಜಾಬ್ನ ಅಂಬಾಲಾ ಮೂಲದ ಐಎಎಫ್ನ ಗೋಲ್ಡನ್ ಆರೋಸ್ ಸ್ಕ್ವಾಡ್ರನ್ನ ಭಾಗವಾಗಿದ್ದಾರೆ.
ರಫೇಲ್ ಫೈಟರ್ ಜೆಟ್ನ ಸ್ಕೇಲ್ಡ್ ಡೌನ್ ಮಾಡೆಲ್ಗಳು, ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಲಘು ಯುದ್ಧ ಹೆಲಿಕಾಪ್ಟರ್ (LCH) ಮತ್ತು 3D ಕಣ್ಗಾವಲು ರಡಾರ್ ಅಸ್ಲೇಶಾ MK-1 ಐಏಎಫ್ ನ ಭಾಗವಾಗಿ ಗಣರಾಜ್ಯೋತ್ಸವದ ಸ್ತಬ್ಧ ಚಿತ್ರ ಪ್ರದರ್ಶನಗೊಂಡವು. ಮತ್ತಿದನ್ನು ದೇಶದ ಮುಂದಿನ ಭವಿಷ್ಯ ಎಂದು ಕರೆಲಾಗುತ್ತದೆ. 1971 ರ ಯುದ್ಧದಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ MiG-21 ವಿಮಾನದ ಸ್ಕೇಲ್ಡ್ ಡೌನ್ ಮಾಡೆಲ್ ಕೂಡ ಈ ಸ್ತಬ್ಧ ಚಿತ್ರದಲ್ಲಿ ಒಳಗೊಂಡಿತ್ತು, ಈ ಒಂದು ಯುದ್ಧದ ಗೆಲುವು ಬಾಂಗ್ಲಾದೇಶದ ರಚನೆಗೆ ಕಾರಣವಾಯಿತು.
₹ 59,000 ಕೋಟಿ ವೆಚ್ಚದಲ್ಲಿ 36 ವಿಮಾನಗಳನ್ನು ಖರೀದಿಸಲು ಭಾರತವು ಫ್ರಾನ್ಸ್ನೊಂದಿಗೆ ಅಂತರ್ ಸರ್ಕಾರಿ ಒಪ್ಪಂದಕ್ಕೆ ಸಹಿ ಹಾಕಿದ ಸುಮಾರು ನಾಲ್ಕು ವರ್ಷಗಳ ನಂತರ ಜುಲೈ 29, 2020 ರಂದು ಮೊದಲ ಬ್ಯಾಚ್ ರಫೇಲ್ ಯುದ್ಧ ವಿಮಾನಗಳು ಆಗಮಿಸಿದ್ದವು. ಇಲ್ಲಿಯವರೆಗೆ, 32 ರಫೇಲ್ ಜೆಟ್ಗಳನ್ನು ಐಎಎಫ್ಗೆ ತಲುಪಿಸಲಾಗಿದೆ ಮತ್ತು ಈ ವರ್ಷದ ಏಪ್ರಿಲ್ ವೇಳೆಗೆ ನಾಲ್ಕು ರಫೇಲ್ಗಳು ಬರುವುದಾಗಿ ನಿರೀಕ್ಷಿಸಲಾಗಿದೆ.