ಕೋವಿಡ್ ಅಬ್ಬರದ ನಂತರ ದೇಶದಲ್ಲಿ ಮಾತ್ರೆಗಳ ಸೇವನೆ ಪ್ರಮಾಣ ಅತ್ಯಧಿಕವಾಗಿದ್ದು, ಕಳೆದ ಒಂದು ವರ್ಷದಲ್ಲಿ ಭಾರತೀಯರು 500 ಕೋಟಿ ರೋಗ ನಿವಾರಕ (ಆಂಟಿಬಯೊಟಿಕ್) ಮಾತ್ರೆಗಳನ್ನು ಸೇವಿಸಿದ್ದಾರೆ. ಇದರಲ್ಲಿ ಅಜಿಂತ್ರೊಮೈಸಿನ್ (Azithromycin) ಅಗ್ರಸ್ಥಾನದಲ್ಲಿದೆ.
ದೇಶದಲ್ಲಿ ಕೋವಿಡ್ ಅಬ್ಬರದ ಹಿನ್ನೆಲೆಯಲ್ಲಿ ಡೋಲೋ ೬೫೦ ಮಾತ್ರೆಗಳ ಸೇವನೆ ಹೆಚ್ಚಾಗಿದ್ದು, ಇದರ ಹಿಂದೆ ಪ್ರಭಾವ ಹಾಗೂ ಭ್ರಷ್ಟಾಚಾರ ಅಡಗಿತ್ತು ಎಂದು ಇತ್ತೀಚೆಗೆ ವರದಿ ಆಗಿತ್ತು. ಆದರೆ ಸಮೀಕ್ಷೆಯೊಂದರ ಪ್ರಕಾರ ಭಾರತೀಯರು ಇದೀಗ ಹೆಚ್ಚಾಗಿ ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಿದ್ದಾರೆ.
೨೦೧೯ರಲ್ಲಿ ಭಾರತೀಯರು 500 ಕೋಟಿ ಆಂಟಿಬಯೊಟಿಕ್ ಮಾತ್ರೆಗಳನ್ನು ಸೇವಿಸಿದ್ದಾರೆ. ಇದರಲ್ಲಿ ಅಜಿಂಥ್ರೋಮೈಸಿನ್ ಅತೀ ಹೆಚ್ಚಾಗಿ ಸೇವಿಸಿದ್ದಾರೆ.
ಭಾರತದಲ್ಲಿ ಔಷಧಿಗಳ ಮಾರಾಟ ಮತ್ತು ಉತ್ಪಾದನೆ ನಿಯಂತ್ರಣ ನಿಯಮಗಳು ಪರಾಮರ್ಶೆ ನಡೆಯಬೇಕಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.
೬೫ ದೇಶಗಳಲ್ಲಿ ಈ ಸಮೀಕ್ಷೆ ನಡೆದಿದ್ದು, ೨೦೧೫ರ ಮೊದಲು ರೋಗ ನಿರೋಧಕ ಮಾತ್ರೆಗಳ ಮಾರಾಟ ಹಾಗೂ ಸೇವನೆ ಕುರಿತು ಯಾವುದೇ ಅಂಕಿ-ಅಂಶಗಳು ಲಭ್ಯವಿಲ್ಲ.
ಭಾರತದಲ್ಲಿ ರೋಗ ನಿರೋಧಕ ಮಾತ್ರೆಗಳ ಅವಶ್ಯಕತೆ ಇಲ್ಲದೇ ಇದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಮಾತ್ರೆಗಳನ್ನು ಸೇವಿಸುವ ಅಭ್ಯಾಸ ಶುರುವಾಗಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಸಮೀಕ್ಷೆ ಹೇಳಿದೆ.
ಜಗತ್ತಿನಾದ್ಯಂತ 9000 ಸ್ಟಾಕ್ ಕಿಟ್ಸ್ ಮಾರಾಟವಾಗುತ್ತಿವೆ. ಪ್ರತಿನಿತ್ಯ 5071 ದಶಲಕ್ಷ ಡೋಸ್ ನೀಡಲಾಗುತ್ತಿದೆ. ಆದರೆ ಭಾರತವೊಂದರಲ್ಲೇ ೧೦೦೦ ಡೋಸ್ ನೀಡಲಾಗುತ್ತಿದೆ.
ಏತನ್ಮಧ್ಯೆ ಅಜಿಂತ್ರೋಮೈಸಿನ್-500 ಎಂಜಿ ಅತೀ ಹೆಚ್ಚು ಮಾರಾಟವಾಗುತ್ತಿದ್ದರೆ, ಸೆಫಿಕ್ಸಿಮ್-200 ಎರಡನೇ ಸ್ಥಾನದಲ್ಲಿದೆ.