ವಾಷಿಂಗ್ಟನ್: ತಂತ್ರಜ್ಞಾನವನ್ನು ಬಳಸಿಕೊಂಡು ಯುದ್ದ ವಿಮಾನಗಳನ್ನೂ ಹೇಗೆ ಉತ್ಪಾದಿಸಬಹುದು ಎನ್ನುವುದಕ್ಕೆ ಭಾರತದ ಲಘು ಯುದ್ದ ವಿಮಾನ ತೇಜಸ್ ಉದಾಹರಣೆ. ಈಗಾಗಲೇ ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಉತ್ಪಾದಿಸುತ್ತಿರುವ ತೇಜಸ್ ಎಂಕೆ 2 ಎಂಜಿನ್‌ಗಳೇ ಅಮೆರಿಕಾದ ಎಫ್ 414 ಜಿಇ ಯುದ್ದ ವಿಮಾನದ ರೂಪ ಪಡೆದುಕೊಳ್ಳಲಿವೆ.
ಅಮೆರಿಕಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾದಲ್ಲಿ ರಕ್ಷಣಾ ವಲಯದಲ್ಲಿನ ಉತ್ಪಾದನೆಗೆ ಸಂಬಂಧಿಸಿದ ಒಪ್ಪಂದ ಮಾಡಿಕೊಂಡಿದ್ದಾರೆ. ಈಗಾಗಲೇ ಮೇಕ್ ಇಂಡಿಯಾ ಅಡಿ ರಕ್ಷಣಾ ವಲಯದ ಯುದ್ದ ವಿಮಾನ, ಉಪಕರಣಗಳ ಉತ್ಪಾದನೆಗೆ ಮುಂದಾಗಿರುವ ಭಾರತ ಅಮೆರಿಕಾದ ದೈತ್ಯ ಸಂಸ್ಥೆ ಜನರಲ್ ಎಲೆಕ್ಟ್ರಿಕ್( ಜಿಇ) ಜತೆಗೆ ಅತ್ಯಾಧುನಿಕ 414 ಜಿಇ ಯುದ್ದ ವಿಮಾನ ಎಂಜಿನ್ ಉತ್ಪಾದನೆಗೆ ಸಹಮತ ಸೂಚಿಸಿದೆ.
ಅಮೆರಿಕಾ ಪ್ರವಾಸದಲ್ಲಿರುವ ಮೋದಿ ವಾಷಿಂಗ್ಟನ್‌ನಲ್ಲಿ ಜಿಇ ಅಧ್ಯಕ್ಷ ಎಚ್. ಲಾರೆನ್ಸ್ ಕಲ್ಪ್ ಜೂನಿಯರ್ ಅವರೊಂದಿಗೆ ಗುರುವಾರ ಮಾತುಕತೆ ನಡೆಸಿದ್ದರು.ನರೇಂದ್ರ ಮೋದಿ ಅವರು ಜಿಇ ಸಂಸ್ಥೆ ಪ್ರಮುಖರೊಂದಿಗೆ ರಕ್ಷಣಾ ವಲಯದ ಉತ್ಪಾದನೆಗೆ ಸಂಬಂಧಿಸಿ ಮಾತುಕತೆ ನಡೆಸಿದ್ದಾರೆ. ಅದರಲ್ಲೂ ರಕ್ಷಣಾ ತಂತ್ರಜ್ಞಾನ ಬಳಸಿ ಭಾರತದಲ್ಲೇ ಉತ್ಪಾದನೆ ಮಾಡುವ ಸಂಬಂಧ ಸಹಭಾಗಿತ್ವಕ್ಕೆ ಮುಂದಾಗಿದ್ದೇವೆ ಎಂದು ಪ್ರಧಾನಿ ಕಚೇರಿ ಟ್ವೀಟ್ ಮಾಡಿದ್ದರು.
ಇದಾದ ಒಂದು ಗಂಟೆಯಲ್ಲಿಯೇ ಜಿಇ ಸಂಸ್ಥೆ ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಒಪ್ಪಂದ ಕುರಿತು ಹೇಳಿರುವ ಜಿಇ ಸಂಸ್ಥೆ, ಇದು ನಮಗೂ ಮೈಲಿಗಲ್ಲು. ಎರಡೂ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಬಲಪಡಿಸಲು ಈ ಒಪ್ಪಂದ ಸಹಕಾರಿಯಾಗಲಿದೆ ಎಂದು ಅಧ್ಯಕ್ಷ ಎಚ್. ಲಾರೆನ್ಸ್ ಕಲ್ಪ್ ಹೇಳಿದ್ದಾರೆ.
ಈ ಒಪ್ಪಂದದ ಪ್ರಕಾರ, ಜಿಇ ಉತ್ಪಾದಿಸುವ ಎಫ್ 414 ಎಂಜಿನ್‌ಗಳನ್ನು ಇನ್ನು ಮುಂದೆ ಜಂಟಿಯಾಗಿ ಉತ್ಪಾದಿಸಲಾಗುತ್ತದೆ. ನಮ್ಮ ಎಫ್ 414 ಇನ್ನು ಮುಂದೆ ಭಾರತದ ದೇಶಿಯ ತೇಜಸ್ ಯುದ್ದ ವಿಮಾನ ತೇಜಸ್ ಎಂಕೆ 2 ರೂಪ ಪಡೆದುಕೊಳ್ಳಲಿದೆ. ಜಿಇಯ ಎಂಜಿನ್‌ಗಳನ್ನು ಭಾರತದ ಹಿಂದೂಸ್ತಾನ್ ಏರೋನಾಟಿಕ್ಸ್ ( ಎಚ್‌ಎಎಲ್) ಉತ್ಪಾದಿಸಿಕೊಡಲಿದೆ. ಈವರೆಗೂ ಜಾಗತಿಕವಾಗಿ ವಿವಿಧ ದೇಶಗಳಿಗೆ 1600ಕ್ಕೂ ಅಧಿಕ ಜಿಇ ಎಫ್ 414 ಎಂಜಿನ್‌ಗಳನ್ನುಜಿಇ ನೀಡಿದೆ. ಇನ್ನು ಮುಂದೆ ಭಾರತದಲ್ಲಿ ಉತ್ಪಾದಿಸಲಾಗುವ ಎಂಜಿನ್‌ಗಳು ಇದಕ್ಕೆ ಬಳಕೆಯಾಗಲಿವೆ ಎಂದು ವಿವರಿಸಿದ್ದಾರೆ.