ಭಾರತೀಯ ಮೂಲದ ಸಿರಿಶಾ ಬಾಂಡ್ಲಾ ಈ ತಿಂಗಳ ಕೊನೆಯಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಲಿದ್ದು ಕಲ್ಪನಾ ಚಾವ್ಲಾ ನಂತರ, ಎರಡನೇ ಭಾರತೀಯ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ವರ್ಜಿನ್ ಗ್ಯಾಲಕ್ಟಿಕ್‌ನ ‘ವಿಎಸ್ಎಸ್ ಯೂನಿಟಿ’ ತಂಡದಲ್ಲಿರುವ ಆರು ಬಾಹ್ಯಾಕಾಶ ಪ್ರಯಾಣಿಕರಲ್ಲಿ ಬಾಂಡ್ಲಾ ಒಬ್ಬರಾಗಲಿದ್ದು, ಜುಲೈ 11 ರಂದು ನ್ಯೂ ಮೆಕ್ಸಿಕೊದಿಂದ ಬಾಹ್ಯಾಕಾಶಕ್ಕೆ ಹಾರಲಿದೆ. ವರ್ಜಿನ್ ಗ್ಯಾಲಕ್ಟಿಕ್‌ನ ರಿಚರ್ಡ್ ಬ್ರಾನ್ಸನ್ ನೇತೃತ್ವದ ಆರು ಸದಸ್ಯರ ಭಾಗವಾಗಲಿದ್ದಾರೆ ಬಾಂಡ್ಲಾ. ಪರ್ಡ್ಯೂ ವಿಶ್ವವಿದ್ಯಾಲಯದಿಂದ ಪದವಿ ಪಡೆದ 31 ವರ್ಷದ ಏರೋನಾಟಿಕಲ್ ಎಂಜಿನಿಯರ್ ಪದವೀಧರೆಯಾಗಿರುವ ಬಾಂಡ್ಲಾ, ಕಲ್ಪನಾ ಚಾವ್ಲಾ ನಂತರ ಬಾಹ್ಯಾಕಾಶಕ್ಕೆ ಹೋಗಲಿರುವ ಎರಡನೇ ಭಾರತೀಯ ಮೂಲದ ಮಹಿಳೆ ಮತ್ತು ಬಾಹ್ಯಾಕಾಶ ಪ್ರಯಾಣ ಕೈಗೊಂಡ ನಾಲ್ಕನೇ ಭಾರತೀಯರಾಗಲಿದ್ದಾರೆ.

ವರ್ಜಿನ್ ಗ್ಯಾಲಕ್ಟಿಕ್ ಅಮೆರಿಕದ ಖಾಸಗಿ ಬಾಹ್ಯಾಕಾಶ ಸಂಸ್ಥೆಯಾಗಿದ್ದು, ಪರೀಕ್ಷಾ ಹಾರಾಟದ ಭಾಗವಾಗಿ ಮುಂದಿನ ವಾರಾಂತ್ಯದಲ್ಲಿ ತನ್ನ ಬಾಹ್ಯಾಕಾಶ ನೌಕೆ ‘ಯೂನಿಟಿ 22’ ಅನ್ನು ಉಡಾವಣೆ ಮಾಡಲಿದೆ. ವರ್ಜಿನ್ ಗ್ಯಾಲಕ್ಟಿಕ್ ಸಂಸ್ಥಾಪಕ ರಿಚರ್ಡ್ ಬ್ರಾನ್ಸನ್ ಸೇರಿದಂತೆ ನಾಲ್ಕು ಮಿಷನ್ ವಿಜ್ಞಾನಿಗಳು ವರ್ಜಿನ್ ಗ್ಯಾಲಕ್ಸಿಯ ಗಗನಯಾತ್ರಿಗಳ ಅನುಭವವನ್ನು ಮೌಲ್ಯಮಾಪನ ಮಾಡಲಿದ್ದಾರೆ. ಬ್ರಾನ್ಸನ್ ಅವರೊಂದಿಗೆ ಸಿರಿಶಾ, ಬೆತ್ ಮೋಸೆಸ್ ಮತ್ತು ಕಾಲಿನ್ ಬೆನೆಟ್ ಭಾಗವಹಿಸಲಿದ್ದಾರೆ.
ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಬಾಹ್ಯಾಕಾಶ ಪ್ರವಾಸ ಕೈಗೊಳ್ಳುವ ಒಂಬತ್ತು ದಿನಗಳಿಗೆ ಮುಂಚಿತವಾಗಿ ವರ್ಜಿನ್ ಗ್ಯಾಲಕ್ಟಿಕ್ ಮಿಷನ್ ಹೊರಡಲಿದೆ. ಅಮೆಜಾನ್ ಸಂಸ್ಥಾಪಕರ ಬಾಹ್ಯಾಕಾಶ ಪ್ರವಾಸವನ್ನು ಕಳೆದ ತಿಂಗಳೇ ಘೋಷಿಸಲಾಗಿತ್ತು. ತನ್ನ ಟ್ವಿಟ್ಟರ್ನಲ್ಲಿ ಪ್ರಯಾಣದ ಸುದ್ದಿ ಹಂಚಿಕೊಂಡ ಬಾಂಡ್ಲಾ ಅವರು ‘ಯೂನಿಟಿ 22’ ಸಿಬ್ಬಂದಿಯ ಭಾಗವಾಗಿರುವುದು “ಅತಿ ದೊಡ್ಡ ಗೌರವ” ಎಂದಿದ್ದಾರೆ.

“# ಯೂನಿಟಿ 22 ರ ಅದ್ಭುತ ಸಿಬ್ಬಂದಿಯ ಭಾಗವಾಗಿರುವುದು ಮತ್ತು ಕಂಪನಿಯ ಭಾಗವಾಗಿರುವುದು ಅತಿ ದೊಡ್ಡ ಗೌರವವಾಗಿದೆ ಮತ್ತು ಬಾಹ್ಯಾಕಾಶದಲ್ಲಿ ಎಲ್ಲರಿಗೂ ಜಾಗವನ್ನು ಲಭ್ಯವಾಗುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ” ಎಂದು ಸಿರಿಶಾ ಟ್ವೀಟ್ ಮಾಡಿದ್ದಾರೆ. ವರ್ಜಿನ್ ಗ್ಯಾಲಕ್ಟಿಕ್ ಕೂಡ, ಬಾಂಡ್ಲಾ ಅವರಿರುವ ಫೊಟೋವನ್ನು ಹಂಚಿಕೊಂಡಿದೆ.
“ನಮ್ಮ ಮೊದಲ ಸಂಪೂರ್ಣ ಸಿಬ್ಬಂದಿಗಳಿರುವ ರಾಕೆಟ್ ಚಾಲಿತ ಪರೀಕ್ಷಾ ಹಾರಾಟವನ್ನು ಜುಲೈ 11 ರಂದು ಇಬ್ಬರು ಪೈಲಟ್‌ಗಳು ಮತ್ತು ರಿಚರ್ಡ್ ಬ್ರಾನ್ಸನ್ ಸೇರಿದಂತೆ ನಾಲ್ಕು ಮಿಷನ್ ತಜ್ಞರೊಂದಿಗೆ ನಡೆಸಲು ಯೋಜಿಸಲಾಗಿದೆ” ಎಂದು ವರ್ಜಿನ್ ಗ್ಯಾಲಕ್ಟಿಕ್ ಟ್ವೀಟ್ ಮಾಡಿದೆ.

ಶಿರಿಸಾ ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದವರು ಮತ್ತು ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ಬೆಳೆದಿದ್ದಾರೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಅವರು 2015ರಿಂದ ವರ್ಜಿನ್ ಗ್ಯಾಲಕ್ಟಿಕ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಪ್ರಸ್ತುತ ಕಂಪನಿಯಲ್ಲಿ ಸರ್ಕಾರಿ ವ್ಯವಹಾರಗಳ ಉಪಾಧ್ಯಕ್ಷರಾಗಿದ್ದಾರೆ. ಪರ್ಡ್ಯೂ ವಿಶ್ವವಿದ್ಯಾಲಯದಿಂದ ಏರೋನಾಟಿಕಲ್ ಎಂಜಿನಿಯರಿಂಗ್‌ನಲ್ಲಿ ಪದವೀಧರರಾಗಿರುವ ಅವರು ಜಾರ್ಜ್‌ಟೌನ್ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿ ಪಡೆದಿದ್ದಾರೆ. ವರ್ಜಿನ್ ಗ್ಯಾಲಕ್ಟಿಕ್‌ನಲ್ಲಿ ಕೆಲಸ ಮಾಡುವ ಮೊದಲು, ಅವರು ಟೆಕ್ಸಾಸ್‌ನಲ್ಲಿ ಏರೋಸ್ಪೇಸ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದರು, ನಂತರ ಅವರು ಕಮರ್ಷಿಯಲ್ ಸ್ಪೇಸ್ ಫ್ಲೈಟ್ ಫೆಡರೇಶನ್ (ಸಿಎಸ್ಎಫ್) ನ ಬಾಹ್ಯಾಕಾಶ ವಿಭಾಗದಲ್ಲಿ ಕೆಲಸ ಮಾಡಿದ್ದರು.
ವರದಿಗಳ ಪ್ರಕಾರ, ಸಿರಿಶಾ ಅವರ ಪೋಷಕರಾದ ಕೃಷಿ ವಿಜ್ಞಾನಿ ಡಾ. ಮುರಳಿ ಮತ್ತು ಅನುರಾಧಾ ಸುಮಾರು 25 ವರ್ಷಗಳ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದರು. “ಇದು ಇಡೀ ಕುಟುಂಬಕ್ಕೆ ನಿಜಕ್ಕೂ ರೋಮಾಂಚನಕಾರಿ ಕ್ಷಣವಾಗಿದೆ” ಎಂದು ಸಿರಿಶಾ ಅವರ ಚಿಕ್ಕಪ್ಪ ಡಾ.ಕನ್ನಗಂತಿ ರಾಮ ರಾವ್ ಅವರನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

“ಖಂಡಿತ, ಒಳ್ಳೆಯ ವಿಷಯವೆಂದರೆ ಅವರು ರಿಚರ್ಡ್ ಬ್ರಾನ್ಸನ್ ಜೊತೆ ಬಾಹ್ಯಾಕಾಶ ಯಾತ್ರೆ ಕೈಗೊಳ್ಳುತ್ತಿದ್ದಾರೆ! ನಾವೆಲ್ಲರೂ ಅವರ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ ಮತ್ತು ಅವರ ಸುರಕ್ಷಿತ ಪ್ರಯಾಣವನ್ನು ಬಯಸುತ್ತೇವೆ! ’’ ಎಂದು ರಾಮರಾವ್ ಇಂಡಿಯಾ ಟುಡೆಗೆ ತಿಳಿಸಿದ್ದಾರೆ. ಯುಎಸ್ ನಲ್ಲಿರುವ, ಸಿರಿಶಾ ‘ತೆಲುಗು ಅಸೋಸಿಯೇಷನ್ ಆಫ್ ನಾರ್ತ್ ಅಮೇರಿಕಾ’ (ತಾನಾ) ದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಇದು ಉತ್ತರ ಅಮೆರಿಕದ ಅತ್ಯಂತ ಹಳೆಯ ಮತ್ತು ದೊಡ್ಡ ಇಂಡೋ-ಅಮೇರಿಕನ್ ಸಂಘಟನೆಯಾಗಿದೆ.
ವರ್ಜಿನ್ ಗ್ಯಾಲಕ್ಟಿಕ್‌ನ ಸರ್ಕಾರಿ ವ್ಯವಹಾರಗಳು ಮತ್ತು ಸಂಶೋಧನಾ ಕಾರ್ಯಾಚರಣೆಗಳ ಉಪಾಧ್ಯಕ್ಷೆಯಾಗಿರುವ ಸಿರಿಶಾ, ಫ್ಲೋರಿಡಾ ವಿಶ್ವವಿದ್ಯಾನಿಲಯದ ಪ್ರಯೋಗವನ್ನು ಬಳಸಿಕೊಂಡು, ಫ್ಲೈಟ್ ಪ್ರೊಫೈಲ್ನ ವಿವಿಧ ಹಂತಗಳಲ್ಲಿ ಸಕ್ರಿಯಗೊಳ್ಳುವ ಮಾನವ-ಪ್ರವೃತ್ತಿಯ ಸಂಶೋಧನಾ ಅನುಭವವನ್ನು ಮೌಲ್ಯಮಾಪನ ಮಾಡಲಿದ್ದಾರೆ ಎಂದು ಕಂಪನಿ ಹೇಳಿದೆ.





