ಕೋವಿಡ್ -19 ಸಾಂಕ್ರಾಮಿಕ ರೋಗದ ಸಂಕಷ್ಟದ ನಂತರ ಭಾರತದ ಆರ್ಥಿಕತೆ ಚೇತರಿಸಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ಬಾಲಕರ ಹಾಸ್ಟೆಲ್‌ನ ವರ್ಚುವಲ್ ಶಿಲಾನ್ಯಾಸ ಸಮಾರಂಭದ ನಂತರ ಮಾತನಾಡಿದ ಅವರು, “ಕರೋನ ವೈರಸ್ ಸಾಂಕ್ರಾಮಿಕದ ಕಠಿಣ ಹಂತದ ನಂತರ, ಭಾರತೀಯ ಆರ್ಥಿಕತೆಯು ಬಹಳ ವೇಗವಾಗಿ ಚೇತರಿಸಿಕೊಂಡಿದೆ. ಈ ಚೇತರಿಕೆಯಿಂದಾಗಿ ಪ್ರಪಂಚವು ಭಾರತದ ಬಗ್ಗೆ ಭರವಸೆ ಉಂಟುಮಾಡಿದೆ” ಎಂದು ಹೇಳಿದ್ದಾರೆ.

ಭಾರತವು ಮತ್ತೊಮ್ಮೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯತ್ತ ಸಾಗುತ್ತಿದೆ ಎಂದು ಇತ್ತೀಚೆಗೆ ಅಂತಾರಾಷ್ಟ್ರೀಯ ಸಂಸ್ಥೆ ಹೇಳಿದೆ ಎಂದು ಅವರು ಹೇಳಿದ್ದಾರೆ.
‘ಅಂತರಾಷ್ಟ್ರೀಯ ಹಣಕಾಸು ನಿಧಿಯ ವರದಿಯನ್ನು ಉಲ್ಲೇಖಿಸಿ ಮಾತಾಡಿದ ಅವರು, ಸಾಂಕ್ರಾಮಿಕ ಆರೋಗ್ಯ ಬೇರೆ ಬೇರೆ ಸಮಸ್ಯೆ ಮತ್ತು ಬೆಲೆ ಒತ್ತಡದ ಸಮಯದಲ್ಲೂ ಇಂತಹಾ ಚೇತರಿಕೆ ಕಂಡಿದೆ ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತವು ಶೇ .9.5 ಕ್ಕೆ ಬೆಳೆಯಲಿದೆ ಎಂದು ಅಂದಾಜಿಸಿದೆ.

ಐಎಂಎಫ್‌ನ projectionನ ಪ್ರಕಾರ, ವಿಶ್ವದ ದೊಡ್ಡ ದೇಶಗಳಲ್ಲಿ ಭಾರತವು ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ.
 
			
 
                                 
                                 
                                