
ನವದೆಹಲಿ:ಅಂಡಮಾನ್ (Andaman)ಮತ್ತು ನಿಕೋಬಾರ್(Nicobar) ದ್ವೀಪಗಳ ಬಳಿ ಬಂಗಾಳ (Bengal)ಕೊಲ್ಲಿಯಲ್ಲಿ 6,000 ಕೆಜಿ ನಿಷಿದ್ಧ ಮೆಥಾಂಫೆಟಮೈನ್ ಸಾಗಿಸುತ್ತಿದ್ದ ಮೀನುಗಾರಿಕಾ ದೋಣಿಯನ್ನು ಭಾರತೀಯ ಕೋಸ್ಟ್ ಗಾರ್ಡ್ ಸೋಮವಾರ ಭೇದಿಸಿದೆ.

ಅಧಿಕಾರಿಗಳ ಪ್ರಕಾರ, ಇದು ಭಾರತೀಯ ಕೋಸ್ಟ್ ಗಾರ್ಡ್‌ನಿಂದ ಇದುವರೆಗಿನ ಅತಿದೊಡ್ಡ ಡ್ರಗ್ ಸಾಗಣೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಲವು ಕೋಟಿ ರೂಪಾಯಿ ಮೌಲ್ಯದ ತಲಾ 2 ಕೆಜಿಯ ಸುಮಾರು 3,000 ಪ್ಯಾಕೆಟ್‌ಗಳಲ್ಲಿ ಡ್ರಗ್ಸ್ ಪ್ಯಾಕ್ ಮಾಡಿರುವುದು ಪತ್ತೆಯಾಗಿದೆ.
“ಭಾರತೀಯ ಕೋಸ್ಟ್ ಗಾರ್ಡ್ ಅಂಡಮಾನ್ ನೀರಿನಲ್ಲಿ ಮೀನುಗಾರಿಕಾ ದೋಣಿಯಿಂದ ಸುಮಾರು ಐದು ಟನ್( Five tons(ಡ್ರಗ್ಸ್ ಗಳನ್ನು ವಶಪಡಿಸಿಕೊಂಡಿದೆ.ಇದು ಭಾರತೀಯ ಕೋಸ್ಟ್ ಗಾರ್ಡ್ ನಿಂದ ಇದುವರೆಗಿನ ಅತಿದೊಡ್ಡ ಮಾದಕ ದ್ರವ್ಯ ಸಾಗಣೆಯಾಗಿದೆ.ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ” ಎಂದು ರಕ್ಷಣಾ ಅಧಿಕಾರಿ ತಿಳಿಸಿದ್ದಾರೆ.