ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪರಿಸ್ವಾನಿ ಪ್ರದೇಶದಲ್ಲಿ ಗುರುವಾರ ಸೇನೆ ಹಾಗೂ ಉಗ್ರರ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದ್ದು ಲಷ್ಕರ್ ಇ ತೋಯ್ಬಾ ಸಂಘಟನೆಯ ಕಮಾಂಡರ್ ಮೊಹಮ್ಮದ್ ಯೂಸೂಫ್ ಕಂತ್ರೂನನ್ನು ಸೇನೆ ಹತ್ಯೆಗೈದಿದೆ. ಕಾರ್ಯಾಚರಣೆ ವೇಳೆ ಮೂವರು ಯೋಧರು ಹಾಗೂ ಓರ್ವ ನಾಗರೀಕನಿಗೆ ಹಂಭೀರ ಗಾಯಗಳಾಗಿವೆ.
ಇತ್ತೀಚಿಗೆ ಬುಡ್ಲಾಂ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ಅಧಿಕಾರಿ ಅವರ ಸಹೋದರ, ಓರ್ವ ಯೋಧ ಹಾಗೂ ನಾಗರೀಕನ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂದು ಕಾಶ್ಮೀರ ವಲಯ ಐಜಿಪಿ ವಿಜಯ್ಕುಮಾರ್ ತಿಳಿಸಿದ್ದಾರೆ.
ಭಾರತೀಯ ಸೇನೆ, ಸಿಆರ್ಪಿಎಫ್ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಎಲ್ಇಟಿ ಕಮಾಂಡರ್ನನ್ನು ಹತ್ಯೆಗೈದಿರುವುದು ಸೇನೆಗೆ ಸಿಕ್ಕ ದೊಡ್ಡ ಯಶಸ್ಸು. ಕಳೆದ 20 ವರ್ಷಗಳಿಂದ ಈತ ಉಗ್ರ ಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.
