ಈ ಬಾರಿ 45ನೇ ಚೆಸ್ ಒಲಿಂಪಿಯಾಡ್‌ನಲ್ಲಿ (Olympiad) ಭಾರತ (India) ಪುರುಷ ಮತ್ತು ಮಹಿಳಾ (Women) ಎರಡೂ ವಿಭಾಗದಲ್ಲಿ ಎದುರಾಳಿಗಳನ್ನು ಮಣಿಸುವ ಮೂಲಕ ಚಿನ್ನದ ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ.
ಮೊದಲಿಗೆ ಚೆಸ್ ಪುರುಷರ ವಿಭಾಗದ ಪಂದ್ಯದಲ್ಲಿ 11ನೇ ಸುತ್ತಿನ ಪಂದ್ಯದಲ್ಲಿ ಡಿ ಗುಕೇಶ್, ಅರ್ಜುನ್ ಎರಿಗೈಸಿ ಮತ್ತು ಆರ್ ಪ್ರಗ್ನನಾಥ ತಮ್ಮ ಪಂದ್ಯಗಳನ್ನು ಗೆದ್ದು ಪುರುಷರ ತಂಡ ಜಯಭೇರಿ ಬಾರಿಸಿದ. ಈ ಮೂಲಕ ಚಿನ್ನದ ಪದಕ ಜಯಿಸಿದ್ದಾರೆ.
ಇತ್ತ ಹರಿಕಾ ದ್ರೋಣವಳ್ಳಿ, ವೈಶಾಲಿ ರಮೇಶ್ ಬಾಬು, ದಿವ್ಯಾ ದೇಶ್ ಮುಖ್, ವಂಟಿಕಾ ಅಗರ್ ವಾಲ್, ತಾನಿಯಾ ಸಚ್ ದೇವ್ ಮತ್ತು ಅಭಿಜಿತ್ ಕುಂಟೆ (ನಾಯಕಿ) ನೇತೃತ್ವದ ಮಹಿಳಾ ತಂಡ ಅಜರ್‌ಬೈಜಾನ್ ತಂಡವನ್ನು 3.5-0.5 ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.