ಪ್ರಪಂಚವು ಹಿಂದೂ(Hindhu), ಇಸ್ಲಾಂ(Islam), ಕ್ರಿಶ್ಚಿಯನ್(Christian), ಬೌದ್ಧ(Buddist), ಜೈನ(Jain) , ಸಿಖ್(Sikh) ಹೀಗೆ ವಿವಿಧ ಧರ್ಮಗಳ ಜನರಿಗೆ ನೆಲೆಯಾಗಿದೆ. ಕೆಲವು ದೇಶಗಳಲ್ಲಿ ಕೆಲವು ಧರ್ಮದ ಜನರನ್ನು ಮಾತ್ರ ಕಾಣಬಹುದು. 2050 ರ ವೇಳೆಗೆ ಭಾರತ ದೇಶ ಅತಿ ಹೆಚ್ಚು ಮುಸ್ಲಿಂ (Muslim) ಜನಸಂಖ್ಯೆಯನ್ನು ಹೊಂದಿರುವುದಾಗಿ ಹೊರಹೊಮ್ಮಲಿದೆ. ಇದೀಗ ಪ್ಯೂ ರಿಸರ್ಚ್ ಸೆಂಟರ್ (Pew Research Center) ಪ್ರಕಟಿಸಿದ ವರದಿಯಲ್ಲಿ ಭಾರತ 2050 ರ ವೇಳೆಗೆ (311 Millions) ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಲಿದೆ ಎನ್ನಲಾಗಿದೆ.
ಭಾರತದಲ್ಲಿ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬಹುದು. ವಿವಿಧ ಧರ್ಮದ ಜನರು, ವಿವಿಧ ಭಾಷೆ ಮಾತನಾಡುವವರು ಹಾಗೂ ವಿವಿಧ ಸಂಸ್ಕೃತಿಯನ್ನು ಅನುಸರಿಸುವವರನ್ನು ಕಾಣಬಹುದು. ಆದರೆ ವರದಿಯೊಂದರ ಪ್ರಕಾರ 2050ರ ವೇಳೆಗೆ ಭಾರತವು ಅತೀ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಲಿದೆ.
ಭಾರತ ಇಂಡೋನೇಷ್ಯಾವನ್ನು (Indonasia Highest muslim population)ಮುಸ್ಲಿಂ ಜನಸಂಖ್ಯೆಯಲ್ಲಿ ಹಿಂದಿಕ್ಕಲಿದ್ದು ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ. ಪಾಕಿಸ್ತಾನವು ಎರಡನೇ ಅತಿ ಹೆಚ್ಚು ಮುಸ್ಲಿಮರನ್ನು (273 Million) ಹೊಂದುವ ನಿರೀಕ್ಷೆಯಿದೆ. ಪ್ರಸ್ತುತ, ಇಂಡೋನೇಷ್ಯಾ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದ್ದು, ಇಂಡೋನೇಷ್ಯಾವು 2050 ರ ವೇಳೆಗೆ 257 Million ಮುಸ್ಲಿಮರೊಂದಿಗೆ ಮೂರನೇ ಸ್ಥಾನಕ್ಕೆ ಕುಸಿಯುವ ಸಾಧ್ಯತೆಯಿದೆ.
2050ರ ವೇಳೆಗೆ ಭಾರತ 31 ಕೋಟಿ ಮುಸ್ಲಿಮರನ್ನು ಹೊಂದಲಿದ್ದು(31 Crores Muslims), ಜಾಗತಿಕ ಮುಸ್ಲಿಂ ಜನಸಂಖ್ಯೆಯ 11% ರಷ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಫಲವತ್ತತೆಯ ಪ್ರಮಾಣದಿಂದಾಗಿ, ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯು ವೇಗವಾಗಿ ಬೆಳೆಯುವ ನಿರೀಕ್ಷೆಯಿದೆ. 2010 ರಲ್ಲಿ, ಮುಸ್ಲಿಮರ ಒಟ್ಟು ಜನಸಂಖ್ಯೆಯ 14.4% ರಷ್ಟಿತ್ತು. ಆದರೆ 2050ರ ವೇಳೆಗೆ ಇದು 18.4% ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.
ವಿಶ್ವದ ಈ ಕೆಲವು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಲ್ಲಿ ಹಿಂದೂಗಳ ಸಂಖ್ಯೆ ತೀವ್ರಗತಿಯಲ್ಲಿ ಇಳಿಕೆಯಾಗಲಿದೆ. ವರದಿಯ ಪ್ರಕಾರ 2050 ರಲ್ಲಿ ಮುಸ್ಲಿಂ ರಾಷ್ಟ್ರವಾದ ಪಾಕಿಸ್ತಾನದಲ್ಲಿ (Pakisthan) ಹಿಂದೂಗಳ ಜನಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಲಿದೆ ಎನ್ನಲಾಗಿದೆ. ಹೌದು, 2010 ರಲ್ಲಿ ಶೇಕಡಾ 1.6 ರಷ್ಟಿದ್ದ ಜನಸಂಖ್ಯೆಯೂ 2050 ರಲ್ಲಿ ಶೇಕಡಾ 1.3 ರಷ್ಟು ಇಳಿಕೆ ಕಾಣಲಿದೆ. ಬಾಂಗ್ಲಾದೇಶದಲ್ಲಿ (Bangladesh) 2010 ರಲ್ಲಿ ಶೇಕಡಾ 8.5 ರಷ್ಟಿತ್ತು, ಆದರೆ 2050 ರಲ್ಲಿ ಹಿಂದೂಗಳ ಸಂಖ್ಯೆಯೂ ಶೇಕಡಾ 7.2 ಇಳಿಕೆಯಾಗಿದೆ. ಇನ್ನು ಉಳಿದಂತೆ ಅಫ್ಘಾನಿಸ್ತಾನದಲ್ಲಿಯೂ (Afghanistan) ಶೇಕಡಾ 0.4 ರಿಂದ 0.3 ರಷ್ಟು ಇರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.