ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಲೋಪದೋಷಗಳನ್ನು ಜನರ ಮುಂದಿಡುತ್ತಾ ಬಂದಿದ್ದಾರೆ. ಇದೀಗ ಸಂಸ್ಕೃತಿ ಸಚಿವಾಲಯವು ಜನಾಂಗೀಯ ಪರಿಶುದ್ಧತೆ ಕುರಿತ ವರದಿಯನ್ನ ಉಲ್ಲೇಖಿಸಿ ಸರಣಿ ಟ್ವೀಟ್ ಮಾಡಿದ್ದಾರೆ.
ದೇಶಕ್ಕೆ ಬೇಕಾಗಿರುವುದು ಆರ್ಥಿಕ ಸುಸ್ಥಿತಯಷ್ಟೇ ಹೊರತು ಜನಾಂಗೀಯ ಶುದ್ದತೆಯಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಮುಂದುವರೆದು, ಕಳೆದ ಭಾರೀ ದೇಶದಲ್ಲಿ ಒಂದು ಸಚಿವಾಲಯ ಜನಾಂಗೀಯ ಶುದ್ದತೆಯ ಬಗ್ಗೆ ಅಧ್ಯಯನ ಮಾಡುತಿತ್ತು. ಭಾರತಕ್ಕೆ ಬೇಕಾಗಿರುವುದು ಉದ್ಯೋಗ ಖಾತ್ರಿ, ಆರ್ಥಿಕ ಸಮೃಧ್ದತೆ ಜನಾಂಗೀಯ ಸಮೃದ್ದಿಯಲ್ಲ ಎಂದು ಹರಿಹಾಯ್ದಿದ್ದಾರೆ.