ದೆಹಲಿ : ಬರೋಬ್ಬರಿ 27 ವರ್ಷಗಳ ಬಳಿಕ ಭಾರತದಲ್ಲಿ ಈ ಬಾರಿ ವಿಶ್ವ ಸುಂದರಿ ಸ್ಪರ್ಧೆ Miss World 2023 ನಡೆಯಲಿದೆ. 2023ನೇ ಸಾಲಿನ ಮಿಸ್ ವರ್ಲ್ಡ್ ಸ್ಪರ್ಧೆಗೆ ಭಾರತವನ್ನು ಆತಿಥೇಯ ರಾಷ್ಟ್ರವನ್ನಾಗಿ ಆಯ್ಕೆ ಮಾಡಲಾಗಿದ್ದು ಈ ಮೂಲಕ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ವೈವಿಧ್ಯತೆಯನ್ನು ಗುರುತಿಸಿದಂತೆ ಕಾಣುತ್ತಿದೆ ಎಂದು ಮಿಸ್ ಇಂಡಿಯಾ ಸಂಸ್ಥೆ ಹೇಳಿದೆ.
ಗುರುವಾರದಂದು ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ 2022ನೇ ಸಾಲಿನ ವಿಶ್ವ ಸುಂದರಿ ಕರೋಲಿನಾ ಬಿಲಾವ್ಸ್ಕಾ ಹಾಗೂ ಮಿಸ್ ಇಂಡಿಯಾ ವರ್ಲ್ಡ್ 2022ರ ವಿಜೇತೆ ಸಿನಿ ಶೆಟ್ಟಿ ಹಾಜರಿದ್ದರು. ಈ ಮೂಲಕ ಬಿಲಾವ್ಸ್ಕಾ ಎರಡನೇ ಬಾರಿಗೆ ಭಾರತಕ್ಕೆ ಭೇಟಿ ನೀಡಿದಂತಾಗಿದೆ.

ಪೋರ್ಟೊ ರಿಕೊದಲ್ಲಿ ನಡೆದ ಸ್ಪರ್ಧೆಯಲ್ಲಿ ಇತರ ದೇಶಗಳ ಸ್ಪರ್ಧಿಗಳನ್ನು ಸೋಲಿಸಿ ಬೈಲಾವ್ಸ್ಕಾ 2022 ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಪಡೆದರು. ಭಾರತದ ಮಾನಸ ವಾರಣಾಸಿ ಟಾಪ್ 13 ಸ್ಪರ್ಧಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.








