ಕಾಶ್ಮೀರದ ಪಹಲ್ಗಮ್ ನಲ್ಲಿ ಉಗ್ರರು (Pahalgam terror attack) ನಡೆಸಿದ ಹೀನ ಕೃತ್ಯವನ್ನು ಭಾರತ (India) ತೀವ್ರವಾಗಿ ಖಂಡಿಸಿದ್ದು,ಈ ಭಯೋತ್ಪಾದಕರ ಪೋಷಕನಾಗಿರುವ ಪಾಕಿಸ್ತಾನಕ್ಕೆ (Pakistan) ಮುಟ್ಟಿ ನೋಡಿಕೊಳ್ಳುವಂತೆ ಪೆಟ್ಟು ಕೊಡಲು ಭಾರತ ಮುಂದಾಗಿದೆ.

ಭಾರತ ಪಾಕಿಸ್ತಾನದ ಜೊತೆಗಿನ ಸಿಂಧೂ ನದಿ (Sindhu river) ನೀರು ಹಂಚಿಕೆ ಒಪ್ಪಂದ ಅಮಾನತು ಮಾಡಲು ನಿರ್ಧಾರ ಭಾರತ ಸರ್ಕಾರ ನಿರ್ಧಾರ ಕೈಗೊಂಡಿದೆ. ಇಂದು ಈ ತೀರ್ಮಾನದ ಜಾರಿಗೆ ತರುವ ಸಲುವಾಗಿ ಕೇಂದ್ರ ಜಲಶಕ್ತಿ ಇಲಾಖೆಯಿಂದ ಉನ್ನತ ಮಟ್ಟದ ಸಭೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಹೀಗಾಗಿ ಕೇಂದ್ರದ ಜಲ ಶಕ್ತಿ ಸಚಿವ ಸಿ.ಆರ್. ಪಾಟೀಲ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದ್ದು ಸಿಂಧೂ ನದಿ, ಜೀನಾಬ್, ಜೀಲಂ ನದಿ ನೀರು ಪಾಕಿಸ್ತಾನಕ್ಕೆ ಹರಿಯದಂತೆ ಕೈಗೊಳ್ಳುವ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ.

ಪಾಕಿಸ್ತಾನಕ್ಕೆ ಈ ನದಿಯ ನೀರು ಹರಿಯದಂತೆ ತಡೆದು, ಭಾರತದಲ್ಲಿ ಈ ಮೂರು ನದಿಗಳ ನೀರು ಬಳಕೆಗೆ ಅನುಕೂಲವಾಗುವಂತೆ ಡ್ಯಾಂ ನಿರ್ಮಾಣ ಮಾಡಲು ಭಾರತ ನಿರ್ಧಾರ ಮಾಡಿದೆ. ಭಾರತದ ಈ ಕ್ರಮ ಪಾಕಿಸ್ತಾನದಲ್ಲಿ ಆಹಾರದ ಅಭದ್ರತೆ ಮತ್ತು ಆಹಾಕಾರ ಸೃಷ್ಟಿ ಮಾಡಲಿದೆ .