ಏಷ್ಯನ್ ಗೇಮ್ಸ್ 2023ನೇ ಆವೃತ್ತಿಯಲ್ಲಿ 100 ಪದಕ ಗೆಲ್ಲುವ ಮೂಲಕ ತನ್ನ ಕನಸನ್ನು ನನಸಾಗಿಸಿಕೊಂಡಿದೆ. ‘ಅಬ್ ಕಿ ಬಾರ್, ಸೌ ಪಾರ್’ (ಈ ಬಾರಿ ನೂರರ ಮೇಲೆ ಪದಕ) ಘೋಷಣೆಯಂತೆ ಇನ್ನೂ 2 ದಿನಗಳ ಬಾಕಿ ಇರುವಂತೆಯೇ ಈ ಒಂದು ಗುರಿಯನ್ನು ಮುಟ್ಟಿದೆ.
ಪದಕ ಸ್ಪರ್ಧೆಯ 13ನೇ ದಿನವಾದ ಶುಕ್ರವಾರ ಭಾರತ 1 ಚಿನ್ನ, 2 ಬೆಳ್ಳಿ, 6 ಕಂಚಿನ ಪದಕ ಒಲಿಸಿಕೊಂಡಿತು. ಇದರೊಂದಿಗೆ ಭಾರತದ ಒಟ್ಟು ಪದಕ ಗಳಿಕೆ 100ಕ್ಕೆ (25 ಚಿನ್ನ, 35 ಬೆಳ್ಳಿ, 40 ಕಂಚು) ಏರಿದೆ.
ಭಾನುವಾರ ಕ್ರೀಡಾಕೂಟದ ಕೊನೆಯ ದಿನವಾಗಿದ್ದು, ಭಾರತದ ಕ್ರೀಡಾಸ್ಪರ್ಧೆಗಳು ಶನಿವಾರವೇ ಮುಕ್ತಾಯಗೊಳ್ಳಲಿವೆ. ಶನಿವಾರ ಭಾರತ ಒಟ್ಟು 6 ಫೈನಲ್ಗಳಲ್ಲಿ ಚಿನ್ನಕ್ಕಾಗಿ ಹೋರಾಡಲಿದೆ.








