ಕರೋನ ಎರಡನೇ ಅಲೆ ಕಡಿಮೆಯಾಗುತ್ತಿದೆ ಅಂದುಕೊಂಡ ಒಂದಷ್ಟು ದನಗಳಲ್ಲೆ ಮೂರನೇ ಅಲೆ ಭೀತಿ ಎಲ್ಲರನ್ನೂ ಕಾಡಲು ಶುರುಮಾಡಿದೆ. ದೇಶಾದ್ಯಂತ ಕರೋನ ಹರಡುವ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವರದಿಗಳು ಬರಲು ಆರಂಭಿಸಿದ ಕೆಲವೇ ವಾರಗಳನಂತರ ದೇಶಾದ್ಯಂತ ನಲವತ್ತು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಿನನಿತ್ಯ ದಾಖಲಾಗುತ್ತಿರುವುದು ಮೂರನ ಅಲೆಯ ಆತಂಕವನ್ನು ಸೃಷ್ಟಿ ಮಾಡಿದೆ.
ಭಾರತದಲ್ಲಿ ನೆನ್ನೆ ಒಂದೇ ದಿನ 41.195 ಹೊಸ ಕರೋನ ಪ್ರಕರಣಗಳು ದಾಖಲಾಗಿದೆ. ಒಟ್ಟು ಕರೋನ ಪ್ರಕರಣಗಳ ಸಂಖ್ಯೆ 3,20,77,706 ಕ್ಕೆ ತಲುಪಿದೆ. ಇದರ ಜೊತೆ ಸಕ್ರಿಯ ಪ್ರಕರಣಗಳು ಕೂಡ ಹೆಚ್ಚಾಗಿದ್ದು ದೇಶಾದ್ಯಂತ 3,87,987 ಕರೋನ ಆಕ್ಟಿವ್ ಕೇಸ್ಗಳು ಇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ.
ಗುರುವಾರ ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಡೇಟಾದ ಪ್ರಕಾರ, ದೇಶಾದ್ಯಂತ, 490 ಹೊಸ ಸಾವುಗಳೊಂದಿಗೆ ಸಾವಿನ ಸಂಖ್ಯೆ 4,29,669 ಕ್ಕೆ ಏರಿಕೆಯಾಗಿದೆ.
ಸಕ್ರಿಯ ಪ್ರಕರಣಗಳು ಒಟ್ಟು ಸೋಂಕಿನ ಶೇಕಡಾ 1.21 ರಷ್ಟಿದ್ದು, ರಾಷ್ಟ್ರೀಯ ಕೋವಿಡ್ -19 ಚೇತರಿಕೆಯ ಪ್ರಮಾಣವು ಶೇಕಡಾ 97.45 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.
24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೋವಿಡ್ -19 ಕೇಸ್‌ಲೋಡ್‌ನಲ್ಲಿ 1,636 ಪ್ರಕರಣಗಳು ಹೆಚ್ಚುವರಿ ದಾಖಲಾಗಿದೆ.
ದೇಶಾದ್ಯಂತ ಬುಧವಾರದಂದು 21,24,953 ಕರೋನ ಪರೀಕ್ಷೆಗಳನ್ನು ನಡೆಸಲಾಗಿದ್ದು, ಕೋವಿಡ್ -19 ಪತ್ತೆಗಾಗಿ ಇದುವರೆಗೆ ನಡೆಸಿದ ಒಟ್ಟು 48,73,70,196 ಪರೀಕ್ಷೆಯನ್ನು ಮಾಡಲಾಗಿದೆ.
ಭಾರತದ ಕೋವಿಡ್ -19 ಸೋಂಕಿನ ಸಂಖ್ಯೆ ಆಗಸ್ಟ್ 7, 2020 ರಂದು 20 ಲಕ್ಷ ಗಡಿ ದಾಟಿತ್ತು, ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16 ರಂದು 50 ಲಕ್ಷ. ಸೆಪ್ಟೆಂಬರ್ 28 ರಂದು 60 ಲಕ್ಷ ದಾಟಿತ್ತು, ಅಕ್ಟೋಬರ್ 11 ರಂದು 70 ಲಕ್ಷ ದಾಟಿತ್ತು , ಅಕ್ಟೋಬರ್ 29 ರಂದು 80 ಲಕ್ಷ, ನವೆಂಬರ್ 20 ರಂದು 90 ಲಕ್ಷ ದಾಟಿತ್ತು ಮತ್ತು ಡಿಸೆಂಬರ್ 19 ರಂದು ಒಂದು ಕೋಟಿ ಗಡಿ ದಾಟಿತ್ತು. ಭಾರತ ಮೇ 4 ರಂದು ಎರಡು ಕೋಟಿ ಮತ್ತು ಜೂನ್ 23 ರಂದು ಮೂರು ಕೋಟಿಗೂ ಹೆಚ್ಚು ಕರೋನ ಪ್ರಕರಣ ಸಂಖ್ಯೆ ದಾಟಿದೆ. ಈಗ ಕರೋನ ನಾಗಲೋಟ ಮುಂದುವರೆಸಿದ್ದು ಸರ್ಕಾರ ತುರ್ತು ತೀರ್ಮಾನ ತೆಗೆದುಕೊಂಡು ಕರೋನ ಹರಡುವುದನ್ನು ತಡೆಗಟ್ಟಬೇಕಿದೆ.
ದೇಶಾದ್ಯಂತ ಈಗ ಮತ್ತಷ್ಟು ಹೆಚ್ಚು ಸ್ವ್ಯಾಬ್ ಟೆಸ್ಟ್ ಮಾಡಲು ಸಂಶೋಧಕರು ಸಲಹೆ ನೀಡಿದ್ದಾರೆ. ಸೀರೋಸರ್ವೆ ವರದಿ ಪ್ರಕಾರ ಅವಶ್ಯಕತೆ ಇರುವವರಿಗೆ ಅಂದರೆ ಇನ್ನೂ ಸೋಂಕಾಗದೆ ಉಳಿದಿರುವ ಜನರಿಗೆ ಮೊದಲು ಲಸಿಕೆಯನ್ನು ಹಾಕುವುದು ಉತ್ತಮ ಎಂಬ ಸಲಹೆಯನ್ನು ಅನೇಕ ವೈದ್ಯರು ನೀಡಿದ್ದಾರೆ. ಒಮ್ಮೆ ಸೋಂಕು ಹರಡಿದ ವ್ಯಕ್ತಿಗೆ ಮತ್ತೊಮ್ಮೆ ಸೋಂಕಾಗುವುದು ತೀರ ವಿರಳ ಆತರ ಸೋಂಕು ಆದರು ಅದರ ವಿರುದ್ಧ ಹೋರಾಡುವ ಪ್ರತಿಕಾಯವನ್ನು ಆ ವ್ಯಕ್ತಿ ಹೊಂದಿರುತ್ತಾರೆ ಎಂಬ ಆದಾರದ ಮೇಲೆ ಉಳಿದವರಿಗೆ ಲಸಿಕೆ ನೀಡಿ ಎಂಬ ಸಲಹೆಯನ್ನು ನೀಡಿದ್ದಾರೆ. ಆದರೆ ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ.