ಕರೋನಾ ಮತ್ತು ರೂಪಾಂತರಿ ಓಮಿಕ್ರಾನ್ ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲಿ ಭಾರಿ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿರುವ ಕುರಿತು ಚಿಂತೆಯಲ್ಲಿರು ಸಮಸಯದಲ್ಲೇ ಖ್ಯಾತ ತಜ್ಞರೊಬ್ಬರು ಆಘಾತಕಾರಿ ಮಾಹಿತಿ ನೀಡಿದ್ದಾರೆ.
ಯುಎಸ್ ಆರೋಗ್ಯ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನ ಸಂಸ್ಥೆಯ ನಿರ್ದೇಶಕ ಡಾ. ಕ್ರಿಸ್ಟೋಫರ್ ಮುರ್ರೆ ಅವರು ಹೇಳುವ ಪ್ರಕಾರ, ಭಾರತ ಮುಂದಿನ ತಿಂಗಳಲ್ಲಿ ಗರಿಷ್ಠ 5 ಲಕ್ಷ ಕರೋನ ಪ್ರಕರಣಗಳು ದಾಖಲಾಗಬಹುದು. ಈಗಿರುವ ಪರಿಸ್ಥಿತಿಯನ್ನು ನೋಡಿದರೆ ಮುಂದಿನ ತಿಂಗಳಿನಲ್ಲಿ ಇವುಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಬಹುದು ಎಂದಿದ್ದಾರೆ.
ಓಮಿಕ್ರಾನ್ ನಿಂದ ಹೆಚ್ಚು ಅಪಾಯವಿದೆಯೇ?
ಓಮಿಕ್ರಾನ್ ಮತ್ತು ಡೆಲ್ಟಾ ವೈರೆಸ್ಗೆ ಹೋಲಿಸಿದರೆ ಓಮಿಕ್ರಾನ್ ಕಡಿಮೆ ಗಂಭೀರತೆ ಹೊಂದಿದೆ ಹಾಗೂ ಕಡಿಮೆ ಸಂಖ್ಯೆಯಲ್ಲಿ ಜನ ಆಸ್ಪತ್ರೆಗೆ ದಾಖಲಾಗುತ್ತಾರೆ ಎಂದು ಡಾ.ಕ್ರಿಸ್ಟೋಫರ್ ಹೇಳಿದ್ದಾರೆ.
ಭಾರತವು COVID-19 ಸಾಂಕ್ರಾಮಿಕ ಮೂರನೇ ಅಲೆಗೆ ಸಾಕ್ಷಿಯಾಗಿದೆ ಮತ್ತು ಪ್ರಕರಣಗಳ ಸಂಖ್ಯೆಯ ಮೇಲ್ಮುಖವಾಗಿ ಏರಿ ನಂತರ ಅದು ಕ್ರಮೇಣ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
” ಇಲ್ಲಿಯವರೆಗೆ ನೋಡಿದ ಪ್ರಕಾರಣ ಕರೋನ ಎರಡನೇ ಅಲೆಗೆ ಹೋಲಿಸಿದರೆ ಇದರ ತೀವ್ರತೆ ಪ್ರಾಯೋಗಿಕವಾಗಿ ಕಡಿಮೆ ಇರುತ್ತದೆ. ರೋಗಿಗಳು ಐದು-ಆರು ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ ”ಎಂದು ಭಾರತೀಯ ಆರೋಗ್ಯ ತಜ್ಞರು ಎಎನ್‌ಐಗೆ ತಿಳಿಸಿದರು.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,59,632 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ ಮತ್ತು 327 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಕಳೆದ 24 ಗಂಟೆಗಳಲ್ಲಿ 40,863 ಜನರು ಗುಣಮುಖರಾಗಿದ್ದಾರೆ. ಪ್ರಸ್ತುತ ಭಾರತದಲ್ಲಿ ಕೊರೊನಾದ ಒಟ್ಟು ಸಕ್ರಿಯ ಪ್ರಕರಣಗಳು 5,90,611ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸೋಂಕಿತರ ಸಾವಿನ ಸಂಖ್ಯೆ 4,83,790ಕ್ಕೆ ಏರಿಕೆಯಾಗಿದೆ.