• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಇಂದು ಭಾರತ v ಸೌತ್‌ ಆಫ್ರಿಕಾ 2ನೇ ಟೆಸ್ಟ್‌: ಕಮ್‌ಬ್ಯಾಕ್‌ ನಿರೀಕ್ಷೆಯಲ್ಲಿ ರೋಹಿತ್‌ ಸಾರಥ್ಯದ ಟೀಂ ಇಂಡಿಯಾ

Any Mind by Any Mind
January 3, 2024
in ಕ್ರೀಡೆ
0
ಇಂದು ಭಾರತ v ಸೌತ್‌ ಆಫ್ರಿಕಾ 2ನೇ ಟೆಸ್ಟ್‌: ಕಮ್‌ಬ್ಯಾಕ್‌ ನಿರೀಕ್ಷೆಯಲ್ಲಿ ರೋಹಿತ್‌ ಸಾರಥ್ಯದ ಟೀಂ ಇಂಡಿಯಾ
Share on WhatsAppShare on FacebookShare on Telegram

ಕೇಪ್‌ಟೌನ್‌: ಅತಿಥೇಯ ಸೌತ್‌ ಆಫ್ರಿಕಾ ಹಾಗೂ ಪ್ರವಾಸಿ ಭಾರತ ನಡುವಿನ ಎರಡನೇ ಹಾಗೂ ಅಂತಿಮ ಇಂದಿನಿಂದ ಆರಂಭವಾಗುತ್ತಿದ್ದು, ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ನಡೆಯಲಿರುವ ಪಂದ್ಯಕ್ಕಾಗಿ ಉಭಯ ತಂಡಗಳು ಭರ್ಜರಿ ತಯಾರಿ ಮಾಡಿಕೊಂಡು ಸಜ್ಜಾಗಿವೆ. ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ಭಾರತ ಈ ಪಂದ್ಯದಲ್ಲಿ ಬಲಿಷ್ಠ ಕಮ್‌ಬ್ಯಾಕ್‌ ಮಾಡುವ ನಿರೀಕ್ಷೆಯೊಂದಿಗೆ ಮೈದಾನಕ್ಕಿಳಿಯಲು ಸಜ್ಜಾಗಿದೆ.

ADVERTISEMENT

ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿತ್ತು. ಸೆಂಚುರಿಯನ್‌ನ ಸೂಪರ್‌ ಸ್ಪೋರ್ಟ್‌ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ, ಇನ್ನಿಂಗ್ಸ್‌ ಹಾಗೂ 32 ರನ್‌ಗಳ ಸೋಲಿನ ಆಘಾತ ಕಂಡಿತ್ತು. ಆ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ ರೋಹಿತ್‌ ಶರ್ಮ ನೇತೃತ್ವದ ಭಾರತ 0-1ರ ಹಿನ್ನಡೆ ಅನುಭವಿಸಿದೆ. ಹೀಗಾಗಿ ಸರಣಿಯ ಅಂತಿಮ ಪಂದ್ಯದಲ್ಲಿ ಬಲಿಷ್ಠ ಕಮ್‌ಬ್ಯಾಕ್‌ ಮಾಡುವ ನಿರೀಕ್ಷೆ ಹೊಂದಿರುವ ಭಾರತ ತಂಡ, ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದೆ. ಪ್ರಮುಖವಾಗಿ ತಂಡದ ಬ್ಯಾಟಿಂಗ್‌ ವಿಭಾಗದ ವೈಫಲ್ಯ ಮೊದಲ ಟೆಸ್ಟ್‌ ಸೋಲಿಗೆ ಪ್ರಮುಖ ಕಾರಣವಾಗಿದೆ. ಹೀಗಾಗಿ ಮೊದಲ ಪಂದ್ಯದಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಂಡು ಸೌತ್‌ ಆಫ್ರಿಕಾ ತಂಡದ ಸವಾಲು ಎದುರಿಸಬೇಕಾದ ಅನಿವಾರ್ಯತೆ ಟೀಂ ಇಂಡಿಯಾಕ್ಕಿದೆ.

ಸೌತ್‌ ಆಫ್ರಿಕಾ ನೆಲದಲ್ಲಿ ಈವರೆಗೂ ಟೆಸ್ಟ್‌ ಸರಣಿಯನ್ನೇ ಗೆಲ್ಲದ ಭಾರತ, ಈ ಬಾರಿ ಪ್ರವಾಸದ ವೇಳೆ ಟೆಸ್ಟ್‌ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಹೊಂದಿತ್ತು. ಆದರೆ ಮೊದಲ ಪಂದ್ಯದಲ್ಲಿನ ಸೋಲು ಟೀಂ ಇಂಡಿಯಾ ನಿರೀಕ್ಷೆಯನ್ನು ಹುಸಿಗೊಳಿಸಿತು. ಆದರೆ ಇದೀಗ 2ನೇ ಟೆಸ್ಟ್‌ನಲ್ಲಿ ಗೆದ್ದು ಸರಣಿ ಸಮಬಲ ಸಾಧಿಸುವ ಲೆಕ್ಕಾಚಾರ ಭಾರತ ತಂಡದ್ದಾಗಿದೆ. ನಿರೀಕ್ಷೆಯಂತೆ ಈ ಪಂದ್ಯದಲ್ಲಿ ಭಾರತ ಬಲಿಷ್ಠ ಪ್ರದರ್ಶನ ನೀಡಿ ಪಂದ್ಯವನ್ನು ಗೆದ್ದಲ್ಲಿ, ಸೌತ್‌ ಆಫ್ರಿಕಾ ನೆಲದಲ್ಲಿ ಎಂ.ಎಸ್‌. ಧೋನಿ ನಂತರದಲ್ಲಿ ಟೆಸ್ಟ್‌ ಸರಣಿ ಸೋಲಿನಿಂದ ಪಾರಾದ ಭಾರತ ತಂಡದ 2ನೇ ಕ್ಯಾಪ್ಟನ್‌ ಆಗಿ ರೋಹಿತ್‌ ಶರ್ಮ ಗುರುತಿಸಿಕೊಳ್ಳಲಿದ್ದಾರೆ.

ಮೊದಲ ಟೆಸ್ಟ್‌ನಲ್ಲಿ ಭಾರತ ತಂಡದ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗದ ವೈಫಲ್ಯ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಪ್ರಮುಖವಾಗಿ ತಂಡದ ಬ್ಯಾಟಿಂಗ್‌ ವಿಭಾಗದಲ್ಲಿ ನಾಯಕ ರೋಹಿತ್‌ ಶರ್ಮ ಸೇರಿದಂತೆ ಶುಭ್ಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌, ಯಶಸ್ವಿ ಜೈಸ್ವಾಲ್‌ ಸೇರಿದಂತೆ ಯಾರೊಬ್ಬರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 245 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 131 ರನ್‌ಗಳಿಸಿದ ಭಾರತ ಇನ್ನಿಂಗ್ಸ್‌ ಹಾಗೂ 32 ರನ್‌ಗಳ ಸೋಲು ಕಂಡಿತು. ಬ್ಯಾಟಿಂಗ್‌ ವಿಭಾಗದಲ್ಲಿನ ಈ ವೈಫಲ್ಯ ತಂಡಕ್ಕೆ ದೊಡ್ಡ ಹಿನ್ನಡೆ ಮೂಡಿಸಿದರೆ, ಬೌಲರ್‌ಗಳು ಕೂಡ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಲು ವಿಫಲವಾದರು. ಹೀಗಾಗಿ ವಿಶ್ವದ ನಂ.1 ಟೆಸ್ಟ್‌ ತಂಡವಾಗಿರುವ ಭಾರತ ಇಂದಿನಿಂದ ಆರಂಭವಾಗಲಿರುವ ಎರಡನೇ ಟೆಸ್ಟ್‌ನಲ್ಲಿ ಕಮ್‌ಬ್ಯಾಕ್‌ ಮಾಡುವ ಲೆಕ್ಕಾಚಾರದಲ್ಲಿದೆ.

ಸಂಭವನೀಯ ತಂಡಗಳು:
ಭಾರತ: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಥಾಕೂರ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮುಖೇಶ್ ಕುಮಾರ್.
ಸೌತ್‌ ಆಫ್ರಿಕಾ: ಡೀನ್ ಎಲ್ಗರ್, ಜುಬೇರ್ ಹಮ್ಜಾ, ಟೋನಿ ಡಿ ಜೊರ್ಜಿ, ಐಡೆನ್ ಮರ್ಕ್ರಾಮ್, ಕೀಗನ್ ಪೀಟರ್ಸನ್, ಡೇವಿಡ್ ಬೆಡಿಂಗ್ಹ್ಯಾಮ್, ಕೈಲ್ ವೆರ್ರಿಯೆನ್ನೆ, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ನಾಂದ್ರೆ ಬರ್ಗರ್.

ಪಂದ್ಯದ ಸಮಯ: ಮಧ್ಯಾಹ್ನ 1.30
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌

Previous Post

ಭವಿಷ್ಯದ ಕನಸುಗಳೊಂದಿಗೆ ವಿದ್ಯಾರ್ಥಿಗಳ ನಡಿಗೆ

Next Post

ಭವಿಷ್ಯದ ಕನಸುಗಳೊಂದಿಗೆ ವಿದ್ಯಾರ್ಥಿಗಳ ನಡಿಗೆ : ನಾ ದಿವಾಕರ ಅವರ ಬರಹ

Related Posts

ಧರ್ಮಶಾಲಾದಲ್ಲಿ ಆರ್‌ಸಿಬಿ ರಣಭೇರಿ; ಪಾಟೀದಾರ್ ಅಬ್ಬರಕ್ಕೆ ಗುಜರಾತ್ ಸಂಪೂರ್ಣ ಕುಸಿತ!
ಕ್ರೀಡೆ

ಧರ್ಮಶಾಲಾದಲ್ಲಿ ಆರ್‌ಸಿಬಿ ರಣಭೇರಿ; ಪಾಟೀದಾರ್ ಅಬ್ಬರಕ್ಕೆ ಗುಜರಾತ್ ಸಂಪೂರ್ಣ ಕುಸಿತ!

by ಪ್ರತಿಧ್ವನಿ
May 27, 2026
0

ಐಪಿಎಲ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ ಸಿ ಬಿ( Royal Challengers Bengaluru) ಬ್ಯಾಟರ್‌ಗಳು ಧರ್ಮಶಾಲಾ ಮೈದಾನದಲ್ಲಿ ರನ್ ಮಳೆ ಸುರಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಬೌಂಡರಿ...

Read moreDetails
BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

May 26, 2026
ಬೆಂಗಳೂರಿಗೆ ಬರಲಿದೆ ವಿಶ್ವದ ಮೂರನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ; ಸೂರ್ಯನಗರದಲ್ಲಿ ‘ಮೆಗಾ ಸ್ಪೋರ್ಟ್ಸ್ ಸಿಟಿ’ ವಿಶೇಷತೆ ಏನು? 

ಬೆಂಗಳೂರಿಗೆ ಬರಲಿದೆ ವಿಶ್ವದ ಮೂರನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ; ಸೂರ್ಯನಗರದಲ್ಲಿ ‘ಮೆಗಾ ಸ್ಪೋರ್ಟ್ಸ್ ಸಿಟಿ’ ವಿಶೇಷತೆ ಏನು? 

May 25, 2026
80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

May 23, 2026
ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?

ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?

May 21, 2026
Next Post
ಭವಿಷ್ಯದ ಕನಸುಗಳೊಂದಿಗೆ ವಿದ್ಯಾರ್ಥಿಗಳ ನಡಿಗೆ : ನಾ ದಿವಾಕರ ಅವರ ಬರಹ

ಭವಿಷ್ಯದ ಕನಸುಗಳೊಂದಿಗೆ ವಿದ್ಯಾರ್ಥಿಗಳ ನಡಿಗೆ : ನಾ ದಿವಾಕರ ಅವರ ಬರಹ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada